Mysore
27
overcast clouds

Social Media

ಸೋಮವಾರ, 23 ಜೂನ್ 2025
Light
Dark

ಭಾರಿ ಮಳೆಗೆ ಶೆಡ್ ಮೇಲೆ ಉರುಳಿದ ಶತಮಾನದಷ್ಟು ಹಳೇ ಮರ : 7 ಮಂದಿ ಸಾವು

ಮಹಾರಾಷ್ಟ್ರ : ಬಿರುಗಾಳಿ ಸಹಿತ ಸುರಿದ ಭಾರಿ ಮಳೆಯಿಂದಾಗಿ ಜಿಲ್ಲೆಯಲ್ಲಿನ ದೇವಾಲಯವೊಂದರ ಆವರಣದಲ್ಲಿದ್ದ ಟಿನ್‌ ಶೆಡ್‌ ಮೇಲೆ ಬೃಹತ್‌ ಮರವೊಂದು ಉರುಳಿ ಬಿದ್ದಿದ್ದು, ಅಲ್ಲಿ ಆಶ್ರಯ ಪಡೆದಿದ್ದ 7 ಮಂದಿ ಮೃತಪಟ್ಟಿದ್ದಾರೆ.
ಬಾಲಾಪುರ್‌ ತಾಲ್ಲೂಕಿನ ಪರಾಸ್‌ ಹಳ್ಳಿಯಲ್ಲಿರುವ ಬಾಬುಜಿ ಮಹಾರಾಜ್‌ ದೇವಾಲಯದಲ್ಲಿ ಭಾನುವಾರ ರಾತ್ರಿ 7.30ರ ಸುಮಾರಿಗೆ ದುರಂತ ಸಂಭವಿಸಿದ್ದು, ಈ ಬಗ್ಗೆ ಸ್ಥಳೀಯ ಆಡಳಿತ ಸೋಮವಾರ ಮಾಹಿತಿ ನೀಡಿದೆ.

ಪೂಜಾ ಕಾರ್ಯಕ್ರಮದ ಸಲುವಾಗಿ ಜನರು ದೇವಾಲಯಕ್ಕೆ ಆಗಮಿಸಿದ್ದರು. ಶತಮಾನದಷ್ಟು ಹಳೆಯ ಮರ ಭಾರಿ ಗಾಳಿ ಮತ್ತು ಮಳೆಯಿಂದಾಗಿ ಟಿನ್‌ ಶೆಡ್‌ ಮೇಲೆ ಬಿದ್ದಿದೆ. 40 ಜನರು ಅಲ್ಲಿ ಆಶ್ರಯ ಪಡೆದಿದ್ದರು. ಈ ಪೈಕಿ 7 ಮಂದಿ ಮೃತಪಟ್ಟು, 23 ಜನರು ಗಾಯಗೊಂಡಿದ್ದಾರೆ. ಐವರ ಸ್ಥಿತಿ ಗಂಭೀರವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಪೊಲೀಸರು ಮತ್ತು ಜಿಲ್ಲಾ ವಿಪತ್ತು ನಿರ್ವಹಣಾ ಪಡೆ ಸಿಬ್ಬಂದಿ, ರಕ್ಷಣಾ ಕಾರ್ಯಾಚರಣೆ ನಡೆಸಿದ್ದಾರೆ. ಗಾಯಾಳುಗಳನ್ನು ಅಕೋಲಾ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದೂ ಮಾಹಿತಿ ನೀಡಿದ್ದಾರೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!