ಡಾ. ಚೈತ್ರ ಸುಖೇಶ್
ಮನುಷ್ಯನ ಬೆಳವಣಿಗೆಯ ಹಾರ್ಮೋನ್ ನಮ್ಮ ಮಿದುಳಿನಲ್ಲಿರುವ ಪಿಟ್ಯುಟರಿ ಗ್ರಂಥಿಯಲ್ಲಿ ಉತ್ಪತ್ತಿಯಾಗುತ್ತದೆ. ಈ ಹಾರ್ಮೋನ್‌ನ ಉತ್ಪಾದನೆ ಒಬ್ಬರಲ್ಲಿ ಹೆಚ್ಚಾದರೆ ಅವರು ಎತ್ತರವಾಗಿ ಬೆಳೆಯು ತ್ತಾರೆ. ಕಡಿಮೆ ಉತ್ಪತ್ತಿಯಾದರೆ ಅವರು ಕುಳ್ಳರಾಗುತ್ತಾರೆ.
ಹದಿಹರೆಯದವರಲ್ಲಿ ಶಾರೀರಿಕ ಬೆಳವಣಿಗೆ ತೀರಾ ಕುಂಠಿತವಾದಾಗ ಅಥವಾ ಅವರಿಗೆ ತೀರಾ ಅತಿಯಾಗಿ ಸ್ರವಿಕೆಯಾಗುವಾಗ ವೈದ್ಯರನ್ನು ಕಾಣಬೇಕು. ಟೆಸ್ಟೋಸ್ಟೆರಾನ್ ಪುರುಷರಲ್ಲಿ ಪುರುಷತ್ವದ ಗುಣ ಲಕ್ಷಣಗಳಿಗೆ ಕಾರಣವಾಗುತ್ತದೆ. ಹಾಗೆಯೇ ಈಸ್ಟ್ರೋಜನ್ ಹೆಣ್ಣು ಮಕ್ಕಳಲ್ಲಿ ಸ್ತ್ರೀ ತನದ ಲಕ್ಷಣಗಳಿಗೆ ಕಾರಣವಾಗುತ್ತದೆ.
ಹೀಗಾಗಿ ಬೆಳೆಯುವ ಮಕ್ಕಳಿಗೆ ಪುಷ್ಟಿಕರವಾದ ಸಮತೋಲನ ಆಹಾರ ನೀಡಬೇಕು. ಆಗ ಉತ್ತಮ ಹಾರ್ಮೋನ್ ಬೆಳವಣಿಗೆಯಾಗಿ ಮಕ್ಕಳು ಆರೋಗ್ಯವಾಗಿರಲು ಸಹಾಯಕವಾಗುತ್ತದೆ. ಬೆಳೆಯುವ ಹಂತದಲ್ಲಿರುವ ಮಕ್ಕಳು ಎಲ್ಲ ಬಗೆಯ ಬೇಳೆ ಕಾಳುಗಳು, ಸೊಪ್ಪು, ತರಕಾರಿ, ಎಲ್ಲ ಬಗೆಯ ಹಣ್ಣುಗಳು, ಹಾಲು, ಮೊಸರು ಹೀಗೆ ಉತ್ತಮ ಪೌಷ್ಟಿಕಾಂಶಯುಕ್ತ ಆಹಾರ ಪದಾರ್ಥಗಳನ್ನು ಸೇವಿಸಬೇಕು.
ಈ ವಯಸ್ಸಿನಲ್ಲಿ ಮಕ್ಕಳು ಅತಿಯಾದ ಕೊಬ್ಬಿನಾಂಶವಿರುವ ಆಹಾರ, ಸಕ್ಕರೆ ಮಿಶ್ರಿತ ತಿಂಡಿಗಳು, ಎಣ್ಣೆಯಲ್ಲಿ ಕರಿದ ತಿನಿಸುಗಳು, ಕೇಕ್, ಚಾಕೊಲೇಟ್, ಐಸ್‌ಕ್ರೀಂನಂತಹ ಆಹಾರಗಳ ಸೇವನೆಯನ್ನು ಕಡಿಮೆ ಮಾಡ ಬೇಕು. ಈ ಆಹಾರಗಳು ಮಕ್ಕಳ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರಬಹುದು.
ಇನ್ನು ಬೆಳವಣಿಗೆ ಹಂತದಲ್ಲಿರುವ ಮಕ್ಕಳಿಗೆ ನಾವು ಬೀದಿ ಬದಿಯ ಆಹಾರ, ಫಾಸ್ಟ್ ಫುಡ್‌ಗಳು, ಸಂಸ್ಕರಿಸಿದ ಆಹಾರ, ಸೋಡಾ ಸೇರಿಸಿದ ಆಹಾರ, ಟೇಸ್ಟ್ ಮೇಕರ್ ಮತ್ತು ಕ್ಲೋರಿನ್ ಹಾಕಿದ ಆಹಾರ ಪದಾರ್ಥಗಳನ್ನು ನೀಡಲೇಬಾರದು. ಇಂತಹ ಆಹಾರಗಳನ್ನು ಸೇವಿಸುವುದು ಆರೋಗ್ಯಕ್ಕೆ ಹೆಚ್ಚು ಹಾನಿಕಾರಕ.
ನಿಯಮಿತ ವ್ಯಾಯಾಮ: ವೇಗದ ನಡಿಗೆ, ಸೈಕಲಿಂಗ್, ಈಜು, ಆಟ ಗಳಲ್ಲಿ ತೊಡಗುವುದು ಬೆಳೆಯುವ ಮಕ್ಕಳಿಗೆ ಅತ್ಯಗತ್ಯ. ಇದರಿಂದ ಅವರ ಮೂಳೆಗಳು ಉತ್ತಮ ಬೆಳವಣಿಗೆ ಹೊಂದಲು ಸಾಧ್ಯವಾಗುತ್ತದೆ. ಬೆಳೆಯುವ ಹಂತದಲ್ಲಿ ಯಾವುದೇ ಚಟುವಟಿಕೆಗಳಿಲ್ಲದಿದ್ದಲ್ಲಿ ದೈಹಿಕ ಬೆಳವಣಿ ಗೆಯು ಕುಂಠಿತವಾಗುತ್ತದೆ. ಅಲ್ಲದೆ ತೂಕ ಹೆಚ್ಚಾಗಿ ಬೊಜ್ಜು ಬರಲು ಕಾರಣವಾಗುತ್ತದೆ.
ಬೌದ್ಧಿಕ ಬೆಳವಣಿಗೆ: ಹದಿಹರೆಯದ ವಯಸ್ಸಿನಲ್ಲಿ ಮಕ್ಕಳ ಬೌದ್ಧಿಕ ಮಟ್ಟ ವೃದ್ಧಿಯಾಗಬೇಕು. ಕಲಿಕೆಯಲ್ಲಿ ಆಸಕ್ತಿ, ನೆನಪಿನ ಶಕ್ತಿ, ಆಲೋಚನೆ ಮಾಡುವುದು, ವ್ಯಾವಹಾರಿಕ ಜ್ಞಾನ ಈ ಎಲ್ಲ ಬುದ್ಧಿ ಪ್ರಕಾರಗಳು ಹದಿಹರೆಯದಲ್ಲಿಯೇ ವಿಕಾಸಗೊಳ್ಳಬೇಕು.
ಪ್ರೀತಿ, ವಾತ್ಸಲ್ಯ, ಸ್ನೇಹ, ಧೈರ್ಯ, ಸಂತೋಷ ಮಕ್ಕಳಲ್ಲಿ ಹೆಚ್ಚಾಗಿ, ಭಯ, ಸಿಟ್ಟು, ದುಃಖ, ದ್ವೇಷ ಮುಂತಾದ ನಕಾರಾತ್ಮಕ ಭಾವನೆಗಳು ದೂರವಾಗಬೇಕು.
ಹದಿಹರೆಯದಲ್ಲಿ ಕಾಡುವ ಮರೆವಿನ ಸಮಸ್ಯೆಯನ್ನು ಹೋಗಲಾಡಿಸಿ, ಬುದ್ಧಿ ಶಕ್ತಿಯನ್ನು ಚುರುಕುಗೊಳಿಸಲು ಕೆಲ ವೊಂದು ಆಯುರ್ವೇದ ಮನೆಮದ್ದುಗಳು ತಂಬಾ ಸಹಕಾರಿಯಾಗಿವೆ.
- ಶಂಖಪುಷ್ಪ ಪುಡಿಯನ್ನು ಹಾಲಿನಲ್ಲಿ ಮಿಶ್ರಣ ಮಾಡಿ ಸೇವಿಸುವುದು
- ಬ್ರಾಹ್ಮೀ ಪುಡಿಯನ್ನು ಜೇನುತುಪ್ಪದೊಂದಿಗೆ ಸೇರಿಸಿ ತಿನ್ನುವುದು
- ಪ್ರತಿದಿನ ತಲೆ ಮತ್ತು ಪಾದಗಳಿಗೆ ಎಳ್ಳೆಣ್ಣೆ ಅಥವಾ ಬ್ರಾಹ್ಮೀ ತೈಲದಿಂದ ಮಸಾಜ್ ಮಾಡುವುದು.
ಹೀಗೆ ಮಾಡುವುದರಿಂದ ಮರೆವಿನ ಸಮಸ್ಯೆ ಕಡಿಮೆಯಾಗುತ್ತದೆ.
ಮಕ್ಕಳಲ್ಲಿ ಹಾರ್ಮೋನ್ ಉತ್ತಮ ರೀತಿಯಲ್ಲಿ ವೃದ್ಧಿಗೊಳ್ಳಲು ಸಹಕಾರಿಯಾಗುವ ಅಂಶಗಳು
- ಶುದ್ಧತುಪ್ಪವನ್ನು ಮಿತಿಯಲ್ಲಿ ಸೇವಿಸಿದರೆ ಅದು ಮಿದುಳಿನ ಆರೋಗ್ಯಕ್ಕೆ ಸಹಕಾರಿ
- ಬಜೆಗೆ ನೀರು ಹಾಕಿ ಕುದಿಸಿ ಕಷಾಯ ಮಾಡಿ ಸೇವಿಸುವುದ ರಿಂದ ನೆನಪಿನ ಶಕ್ತಿ ವೃದ್ಧಿಸುತ್ತದೆ
- ಬಾದಾಮಿ, ಅಶ್ವಗಂಧ ಸೇವನೆಯಿಂದ ನೆನಪಿನ ಶಕ್ತಿ ಬಲಗೊಳಿಸುತ್ತದೆ
- ನಿತ್ಯ ಬ್ರಾಹ್ಮೀ ತೈಲವನ್ನು ಉಪಯೋಗಿಸುವುದು ಒಳಿತು
- ಬೂದುಗುಂಬಳಕಾಯಿ ರಸಕ್ಕೆ ತುಪ್ಪ ಮತ್ತು ಕಲ್ಲು ಸಕ್ಕರೆ ಸೇರಿಸಿ ಸೇವಿಸುವುದರಿಂದ ಮರೆವಿನ ಸಮಸ್ಯೆ ಕಡಿಮೆಯಾಗುತ್ತದೆ
- ನೆಲ್ಲಿಕಾಯಿ ರಸ, ಕೇಸರಿ ಹಾಕಿದ ಹಾಲು ಸೇವನೆ ಕೂಡ ಉತ್ತಮ
- ವೃಕ್ಷಾಸನ, ಪ್ರಾಣಾಯಾಮ, ಏಕಾಗ್ರತೆ, ಜ್ಞಾಪನ ಶಕ್ತಿ ಹೆಚ್ಚಿಸಲು ಸಹಕಾರಿ