ನಮ್ಮ ಸುತ್ತಮುತ್ತಲೇ ಸಿಗುವ ಅಲೊವೆರಾದಿಂದ ತ್ವಚೆಗೂ ದೇಹಕ್ಕೂ ಬಹಳಷ್ಟು ಉಪಯೋಗಗಳಿವೆ. ಕ್ರೀಮ್‌ಗಳಿಗೆಂದು ಹಣ ವ್ಯಯಿಸುವ ಬದಲು, ನೈಸರ್ಗಿಕವಾಗಿ ದೊರೆಯುವ ಅಲೊವೆರಾ ಜೆಲ್ ಬಳಸುವುದು ಆರೋಗ್ಯದ ಹಿತದೃಷ್ಟಿಯಿಂದಲೂ ಉತ್ತಮ. ಚಳಿಗಾಲದಲ್ಲಿ ಸುಕ್ಕುಗಟ್ಟುವ, ಬೇಸಿಗೆ ಕಾಲಕ್ಕೆ ಟ್ಯಾನ್ ಆಗುವ ಚರ್ಮಕ್ಕೆ ಅಲೊವೆರಾ ಜೆಲ್ ಅನ್ನು ಲೇಪಿಸುವುದರಿಂದ ಚರ್ಮವನ್ನು ರಕ್ಷಿಸಬಹುದು. ಅಲೊವೆರಾದಲ್ಲಿರುವ ಅಮೈನೋ ಆಮ್ಲವು ಗಟ್ಟಿಯಾದ ಚರ್ಮದ ಜೀವಕೋಶಗಳನ್ನು ಮೃದುಗೊಳಿಸುತ್ತದೆ. ಅಲ್ಲದೆ, ಸೂಕ್ಷ್ಮ ಮತ್ತು ಮೃದುವಾದ ಚರ್ಮವನ್ನು ಒದಗಿಸುತ್ತದೆ.
ಅಲೊವೆರಾ ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಅಲೊವೆರಾ ಹೊಂದಿದೆ. ತುರಿಕೆ, ಉರಿಯೂತ ಮತ್ತು ದದ್ದುಗಳನ್ನು ಕಡಿಮೆ ಮಾಡಲು ಇದು ಸಹಕಾರಿ.
ಚರ್ಮದ ರಕ್ಷಣೆಯ ಜೊತೆಗೆ ಸತ್ತ ಚರ್ಮವನ್ನು ತೊಡೆದುಹಾಕಲು ಸಹಾಯ ಮಾಡುತ್ತದೆ. ಚರ್ಮದಲ್ಲಿ ರಕ್ತ ಪರಿಚಲನೆ ಹೆಚ್ಚಿಸಿ ಜೀವಕೋಶಗಳನ್ನು ಪೋಷಿಸುತ್ತದೆ. ಮೇಕಪ್ ಹಾಕುವ ೧೦ ನಿಮಿಷ ಮೊದಲು ಮುಖಕ್ಕೆ ಅಲೊವೆರಾ ಜೆಲ್ ಹಚ್ಚಿ ಚೆನ್ನಾಗಿ ಮಸಾಜ್ ಮಾಡಿಕೊಳ್ಳಿ. ನಂತರ ನೇರವಾಗಿ ಫೌಂಡೇಶನ್ ಕ್ರೀಮ್‌ನ್ನು ಹಚ್ಚಬಹುದು. ಇದು ಮೇಕಪ್ ಅನ್ನು ಚೆನ್ನಾಗಿ ಹಿಡಿದಿಟ್ಟುಕೊಂಡು, ಹೆಚ್ಚು ಹೊತ್ತು ಉಳಿಯುವಂತೆ ಮಾಡುತ್ತದೆ.