ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಾಕು ನಾಯಿ ಮಹಿಳೆಯೊಬ್ಬರಿಗೆ ಕಚ್ಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್ ಮೇಲೆ ಪ್ರಕರಣ ದಾಖಲಿಸಲಾಗಿತ್ತು. ಆರ್.ಆರ್ ನಗರ ಪೊಲೀಸರು ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಕೆಯ ವೇಳೆ ಚಾರ್ಜ್‌ಶೀಟ್‌ನಿಂದ ದರ್ಶನ್ ಅವರ ಹೆಸರನ್ನು ಕೈಬಿಡಲಾಗಿದೆ.
ಆರ್.ಆರ್ ನಗರ ಪೊಲೀಸರು ಸಿಟಿ ಸಿವಿಲ್ ಕೋರ್ಟ್ ಗೆ 150ಕ್ಕೂ ಹೆಚ್ಚು ಪುಟಗಳ ಚಾರ್ಜ್ ಶೀಟ್ ಅನ್ನು ಸಲ್ಲಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಐದಕ್ಕೂ ಹೆಚ್ಚು ಮಂದಿಯನ್ನ ಸಾಕ್ಷಿಗಳಾಗಿ ಪೊಲೀಸರು ಪರಿಗಣಿಸಿದ್ದರು.
ಅಲ್ಲದೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್ ಅವರ ಹೇಳಿಕೆಯನ್ನೂ ಪೊಲೀಸರು ದಾಖಲಿಸಿಕೊಂಡಿದ್ದರು. ಇದೀಗ ಚಾರ್ಜ್ ಶೀಟ್ ನಲ್ಲಿ ದರ್ಶನ್ ಹೆಸರು ಕೈಬಿಟ್ಟಿದ್ದು ಘಟನೆಗೂ ದರ್ಶನ್ ಗೂ ಯಾವುದೇ ಸಂಬಂಧ ಇಲ್ಲವೆಂದು ಚಾರ್ಜ್ ಶೀಟ್ ಸಲ್ಲಿಕೆಯ ವೇಳೆ ಉಲ್ಲೇಖಿಸಿದ್ದಾರೆ.
ಪ್ರಕರಣವೇನು: 2023ರ ಅಕ್ಟೋಬರ್ 28ರಂದು ದರ್ಶನ್ ಮನೆಯ ಸಾಕು ನಾಯಿ ಅಮಿತಾ ಜಿಂದಾಲ್ ಎಂಬ ಮಹಿಳೆಗೆ ಕಚ್ಚಿತ್ತು. ಅಂದು ಅಮಿತಾ ಜಿಂದಾಲ್ ಕೊಟ್ಟ ದೂರಿನ ಮೇಲೆ ಎಫ್‌ಐಆರ್ ದಾಖಲಾಗಿತ್ತು. ಕೇರ್ ಟೇಕರ್ ಹೇಮಂತ್ ಹಾಗೂ ನಟ ದರ್ಶನ್ ಆರೋಪಿಗಳಾಗಿ ಮಾಡಿ ಎಫ್‌ಐಆರ್ ನಲ್ಲಿ ಉಲ್ಲೇಖಿಸಿ ದರ್ಶನ್‌ಗೆ ನೊಟೀಸ್ ನೀಡಲಾಗಿತ್ತು.