ಬೆಂಗಳೂರು : ಶಿವಾನಂದ ವೃತ್ತದ ಬಳಿ ನಿರ್ಮಾಣ ಮಾಡಿರೋ ಸ್ಟೀಲ್ ಫ್ಲೈ ಓವರ್ ಗೆ ನಟ ಪುನೀತ್ ರಾಜ್‌ಕುಮಾರ್ ಹೆಸರಿಡುವಂತೆ ಒತ್ತಡ ಹೆಚ್ಚಿದೆ. ಬಿಜೆಪಿ ಮುಖಂಡ ಎನ್ ಆರ್ ರಮೇಶ್ ಅವರು ಸ್ಟೀಲ್ ಫ್ಲೈ ಓವರ್ ಗೆ ಪುನೀತ್ ಹೆಸರಿಡುವಂತೆ ಆಗ್ರಹಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಬಿಬಿಎಂಪಿ ಮುಖ್ಯ ಆಯುಕ್ತ, ಆಡಳಿತಾಧಿಕಾರಿಗೆ ರಮೇಶ್ ಮನವಿ ಮಾಡಿದ್ದಾರೆ.
ಫಿಲ್ಮಂ ಛೇಂಬರ್ ಮುಂಭಾಗವಿರೋ ಫ್ಲೈ ಓವರ್ ಆಗಿರೋದ್ರಿಂದ ಪುನೀತ್ ಹೆಸರಿಡುವಂತೆ ಮನವಿ ಮಾಡಿದ್ದಾರೆ. ಸ್ಥಳೀಯರ ಅಭಿಪ್ರಾಯವೂ ಇದೇ ಆಗಿದೆ. ಉಕ್ಕಿನ ಸೇತುವೆ ನಿರ್ಮಾಣದ ವೇಳೆ ಕಾಮಾಗಾರಿಗೆ ಅತೀ ಹೆಚ್ಚು ತೊಂದರೆ ಕೊಟ್ಟವರು ಶಿವಾನಂದ ಸ್ಟೋರ್ ಮಾಲೀಕರು, ಈವಾಗ ಸ್ಟೀಲ್ ಫ್ಲೈ ಓವರ್ ಗೆ ಅದೇ ಸ್ಟೋರ್ ಹೆಸರು ನಾಮಕರಣ ಮಾಡೋದು ಸರಿ ಅಲ್ಲ. ಸ್ಥಳೀಯ ನಾಗರೀಕರ ಪ್ರಕಾರ ಸ್ಟೀಲ್ ಬ್ರಿಡ್ಜ್ ಗೆ ಕರ್ನಾಟಕ ರತ್ನ ಡಾ.ಪುನೀತ್ ರಾಜರ ಕುಮಾರ್ ಹೆಸರಿಡೋದೆ ಸರಿ ಎಂದು ಹೇಳಿದ್ದಾರೆ.