Mysore
27
scattered clouds
Light
Dark

ಪುನರಾರಂಭಗೊಂಡ ‘ಹಾಯ್ ಬೆಂಗಳೂರು’!

ಪತ್ರಕರ್ತ, ಬರಹಗಾರ, ರವಿ ಬೆಳಗೆರೆಯವರ ನಿಧನದ ನಂತರ ಸ್ಥಗಿತಗೊಂಡಿದ್ದ ಕನ್ನಡ ಪ್ರಸಿದ್ಧ ವಾರ ಪತ್ರಿಕೆ ‘ಹಾಯ್ ಬೆಂಗಳೂರು’ ಪುನರಾರಂಭಗೊಂಡಿರುವುದು ಸಂತಸದ ವಿಚಾರ, ಒಂದು ಕಾಲದಲ್ಲಿ ರಾಜ್ಯದಲ್ಲೇ ಅತ್ಯಂತ ಜನಪ್ರಿಯ ವಾರ ಪತ್ರಿಕೆ ಅನಿಸಿಕೊಂಡಿದ್ದ ‘ಹಾಯ್ ಬೆಂಗಳೂರು’ ಪತ್ರಿಕೆಯು ರವಿ ಬೆಳಗೆರೆಯವರ ಪುತ್ರಿ ಭಾವನ ಬೆಳಗೆರೆಯವರ ಸಾರಥ್ಯದಲ್ಲಿ ಈಗ ಹೊರಬರುತ್ತಿದೆ. ರವಿ ಬೆಳಗೆರೆಯವರು ತಮ್ಮ ತೀಕ್ಷವಾದ ಬರವಣಿಗೆ, ಯಾವುದಕ್ಕೂ ರಾಜಿಯಾಗದೆ ನೇರ ಬರವಣಿಗೆಗಳ ಮೂಲಕ ಸಮಾಜವನು ಎಚ್ಚರಿಸುತ್ತಿದ್ದರು. ಅಲ್ಲದೆ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ನ್ಯಾಯ ದೊರಕಿಸಿಕೊಡಬೇಕು ಎಂಬ ನಿಲುವನ್ನು ಪತ್ರಿಕೆ ಹೊಂದಿತ್ತು ಎಂದರೂ ತಪ್ಪಾಗಲಾರದು. ಇದರಿಂದಾಗಿಯೇ ಅಂದು ರಾಜ್ಯದಲ್ಲಿ ಬಹುದೊಡ್ಡ ಓದುಗ ಬಳಗವನ್ನೇ ಸಂಪಾದಿಸಿತ್ತು. ‘ದೈತ್ಯ ಬರಹಗಾರ’ ಎಂದು ಅನಿಸಿಕೊಳ್ಳುತ್ತಿದ್ದ ಹಾಗೂ ‘ಹಿಮಾಲಯನ್ ಬ್ಲಂಡರ್’ ಸೇರಿದಂತೆ ಅನೇಕ ಪುಸ್ತಕಗಳನ್ನು ರಚಿಸಿರುವ ರವಿ ಬೆಳಗೆರೆಯವರಂತೆಯೇ ಭಾವನ ಬೆಳಗೆರೆಯವರೂ ಈ ಪ್ರತಿಕೆಯನ್ನು ಮುನ್ನಡೆಸಿಕೊಂಡು ಹೋಗಲಿ.

-ಕೆ.ವಿ.ವಾಸು, ವಿವೇಕಾನಂದ ನಗರ, ಮೈಸೂರು.