ಖಾಸಗಿ ಬ್ಯಾಂಕೊಂದಕ್ಕೆ ವಂಚಿಸಿದ ಪ್ರಕರಣದಲ್ಲಿ ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಲಯ ಮಾಜಿ ಸಚಿವ ಕೃಷ್ಣಯ್ಯ ಶೆಟ್ಟಿ ಹಾಗೂ ಇತರೆ ಮೂವರು ಆರೋಪಿಗಳಿಗೆ ಮೂರು ವರ್ಷಗಳ ಕಾರಾಗೃಹ ಶಿಕ್ಷೆ ವಿಧಿಸಿರುವುದಾಗಿ ಮಾಧ್ಯಮಗಳಲ್ಲಿ ವರದಿಯಾಗಿದೆ.
ಮಾಜಿ ಸಚಿವರಿಗೆ ಶಿಕ್ಷೆ ಪ್ರಕಟಿಸಿದ್ದರೂ ಅವರಿಗೆ ಮೇಲ್ಮನವಿ ಸಲ್ಲಿಸಲು ಅವಕಾಶ ನೀಡಲಾಗಿದ್ದು, ಅವರ ಜಾಮೀನು ಅರ್ಜಿಯನ್ನೂ ಅಂಗೀಕರಿಸಿ, ಜಾಮೀನು ನೀಡಲಾಗಿದೆ. ಸುಮಾರು ೩೨ ವರ್ಷಗಳಿಂದ ನಡೆಯುತ್ತಿದ್ದ ಈ ಪ್ರಕರಣದ ವಿಚಾರಣೆ ಈಗ ಒಂದು ಘಟಕ್ಕೆ ತಲುಪಿದ್ದರೂ ಆರೋಪಿಗಳಿಗೆ ಉಚ್ಚ ನ್ಯಾಯಾಲಯ ಮತ್ತು ಸರ್ವೋಚ್ಚ ನ್ಯಾಯಾಲಯಗಳ ಮೊರೆ ಹೋಗುವ ಅವಕಾಶವಿರುವುದರಿಂದ ಈ ಪ್ರಕರಣ ಮತ್ತಷ್ಟು ವರ್ಷಗಳ ಕಾಲ ನಡೆಯಬಹುದು. ಈ ಪ್ರಕರಣ ನಡೆದು ಈಗಾಗಲೇ ೩೨ ವರ್ಷಗಳಾಗಿವೆ. ಈ ಪ್ರಕರಣದ ಇತ್ಯರ್ಥಕ್ಕೆ ಇಷ್ಟೊಂದು ದೀರ್ಘ ಅವಧಿ ಏಕೆ ಬೇಕಾಯಿತು ಎಂಬುದೇ ಯಕ್ಷ ಪ್ರಶ್ನೆ!
-ಕೆ.ವಿ.ವಾಸು, ವಿವೇಕಾನಂದ ನಗರ, ಮೈಸೂರು.