ಟೆಹ್ರಾರ್ : ಇರಾನ್ ಹೊರ್ಮುಜ್ ಜಲಸಂಧಿಯಲ್ಲಿ ವಾಣಿಜ್ಯ ಹಡಗುಗಳ ಸಂಚಾರಕ್ಕೆ ಪೂರ್ಣ ಮುಕ್ತಿ ನೀಡಿದೆ ಎಂದು ಮಹತ್ವದ ಘೋಷಣೆ ಮಾಡಿದೆ.
ಲೆಬನಾನ್‌ನಲ್ಲಿ ಇಸ್ರೇಲ್-ಹೆಜ್ಬೊಲ್ಲಾ ನಡುವಿನ 10 ದಿನಗಳ ಕದನ ವಿರಾಮ ಜಾರಿಯಲ್ಲಿರುವ ಹಿನ್ನೆಲೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಇರಾನ್ ವಿದೇಶಾಂಗ ಸಚಿವ ಸಯ್ಯದ್ ಅಬ್ಬಾಸ್ ಅರಾಗ್ಚಿ ಅವರು ಏಪ್ರಿಲ್ 17ರಂದು ಸಾಮಾಜಿಕ ಮಾಧ್ಯಮದಲ್ಲಿ ಘೋಷಿಸಿದ್ದಾರೆ.
ಜಲಸಂಧಿಯ ಮೂಲಕ ಹಡಗುಗಳ ಸಂಚಾರವು ಇರಾನ್‌ನ ಬಂದರು ಮತ್ತು ಕಡಲ ಸಂಸ್ಥೆ ಈಗಾಗಳೇ ಘೋಷಿಸಿರುವ ಮಾರ್ಗದಲ್ಲೇ ಇರಲಿದೆ ಎಂದು ಅರಾಗ್ಚಿ ಅವರು ತಿಳಿಸಿದ್ದಾರೆ.





