ನವದೆಹಲಿ : ಲೋಕಸಭೆಯಲ್ಲಿ ಮಹಿಳೆಯರಿಗೆ ಶೇ.33 ಮೀಸಲಾತಿ ನೀಡುವ ಮಹಿಳಾ ಮೀಸಲಾತಿ ತಿದ್ದುಪಡಿ ಮಸೂದೆ (Women’s Reservation Bill) ಭಾರೀ ಬಹುಮತದಿಂದ ಸೋಲು ಕಂಡಿದೆ.
ಇಂದು ಲೋಕಸಭೆಯಲ್ಲಿ ಮಸೂದೆಯ ಮೇಲೆ ಚರ್ಚೆ ನಡೆದ ನಂತರ ನಡೆದ ಮತದಾನದಲ್ಲಿ ಸರ್ಕಾರಕ್ಕೆ ಬಹುಮತ ಸಿಗಲಿಲ್ಲ. ವಿರೋಧ ಪಕ್ಷಗಳು ಮತ್ತು ಕೆಲವು ಸಖ್ಯ ಪಕ್ಷಗಳು ಮಸೂದೆಯ ವಿರುದ್ಧ ಮತ ಚಲಾಯಿಸಿದ್ದರಿಂದ ಅದು ಸೋಲು ಕಂಡಿದೆ.
ಈ ಮಸೂದೆಯು ಸಂಸತ್ತು ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇ.33 ಮೀಸಲು ಒದಗಿಸುವ ಗುರಿ ಹೊಂದಿತ್ತು. ಇದಕ್ಕಾಗಿ ಸಂವಿಧಾನ ತಿದ್ದುಪಡಿ ಅಗತ್ಯವಿತ್ತು. ಆದರೆ ಲೋಕಸಭೆಯಲ್ಲಿ ಅನುಮೋದನೆ ಪಡೆಯಲು ವಿಫಲವಾಗಿದೆ.
ಮೂರನೇ ಎರಡರಷ್ಟು ಬಹುಪತ ಸಿಗದೆ ಮಸೂದೆಗೆ ಸೋಲಾಗಿದೆ. 489 ಸಂಸದರು ಮತದಾನದಲ್ಲಿ ಭಾಗವಹಿಸಿದ್ದರು. ಹಾಗಾಗಿ ಮಸೂದೆ ಅಂಗೀಕರಿಸಲು ಸರ್ಕಾರಕ್ಕೆ 328 ಮತಗಳ ಅವಶ್ಯಕತೆ ಇತ್ತು. ಮಸೂದೆ ಮರ 298ಮತಗಳ ಬಿದ್ದಿದ್ದು, ವಿರುದ್ದ 230 ಮತಗಳು ಬಿದ್ದಿವೆ. ಸಂವಿಧಾನ ತಿದ್ದುಪಡಿ ಮಸೂದೆಯಾಗಿರುವುದರಿಂದ ಮೂರನೇ ಎರಡರಷ್ಟು ಬಹುಮತ ಅತ್ಯಗತ್ಯವಾಗಿತ್ತು.
ಮಹಿಳಾ ಮೀಸಲಾತಿ ಮಸೂದೆಯು ದಶಕಗಳಿಂದಲೂ ಚರ್ಚೆಯಲ್ಲಿದ್ದು, ಹಿಂದಿನ ಸರ್ಕಾರಗಳ ಕಾಲದಲ್ಲೂ ಇದು ಸಂಸತ್ತು ತಲುಪಿದ್ದರೂ ಅಂತಿಮ ಅನುಮೋದನೆ ಪಡೆಯಲು ವಿಫಲವಾಗಿತ್ತು.




