Mysore
22
few clouds

Social Media

ಭಾನುವಾರ, 08 ನವೆಂಬರ್ 2026
Light
Dark

ಓದುಗರ ಪತ್ರ: ಯಾರಿಗಿದೆ ಭಯ? ಎಲ್ಲಿದೆ ನೈತಿಕತೆ?

ವ್ಯಕ್ತಿಯೋರ್ವ ಬೆಂಗಳೂರಿನಲ್ಲಿ ಪತ್ನಿ,ಅತ್ತೆ ಸೇರಿದಂತೆ ಏಳು ಜನರನ್ನು ಬರ್ಬರ ರೀತಿಯಲ್ಲಿ ಹತ್ಯೆ ಮಾಡಿರುವ ಪಾಶವಿ ಕೃತ್ಯ ನಾಗರಿಕ ಸಮಾಜವನ್ನು ಬೆಚ್ಚಿ ಬೀಳಿಸಿದೆ.

ಕೇವಲ ೨೦ ದಿನಗಳ ಅಂತರದಲ್ಲಿ ಕೃತ್ಯವೆಸಗಿ ಮೃತರ ದೇಹಗಳನ್ನು ಪ್ಲಾಸ್ಟಿಕ್ ಚೀಲದಲ್ಲಿ ತುಂಬಿ ದಟ್ಟ ಅರಣ್ಯದ ಮಧ್ಯೆ ಎಸೆದಿದ್ದ ಪಾತಕಿಯನ್ನು ಪೊಲೀಸರು ಬಂಧಿಸಿ ವಿಚಾರಣೆಗೊಳಪಡಿಸಿದಾಗ ಹೊರಬಂದ ವಿಷಯಗಳು ಆತಂಕ ಮೂಡಿಸುವಂತಹದ್ದು. ಇಂತಹ ಮೃಗೀಯ ಕೃತ್ಯಗಳು ಹೆಚ್ಚಾಗಲು ಮನುಷ್ಯನಲ್ಲಿ ಕ್ರೂರತ್ವ ಪರಾಕಾಷ್ಠೆ ತಲುಪಿದಾಗ ನಡೆಯುವುದು ಒಂದು ಕಡೆಯಾದರೆ, ಯಾರ ಭಯವೂ ಇಲ್ಲದರಿರುವುದು, ನೈತಿಕತೆ ಇಳಿಜಾರಿನತ್ತ ಸಾಗುತ್ತಿರುವ ದ್ಯೋತಕವೆನ್ನಬಹುದು. ಬೆಚ್ಚಿ ಬೀಳಿಸುವಂತ ಹತ್ಯೆಗಳನ್ನು ಮಾಡಿರುವ ಆರೋಪಿಗೆ ಅತ್ಯಂತ ಕನಿಷ್ಠ ಅವಧಿಯಲ್ಲಿ ಗರಿಷ್ಟಮಟ್ಟದ ಶಿಕ್ಷೆ ನೀಡುವುದು ತೀರಾ ಅಗತ್ಯವಾಗಿದೆ.

-ಕೆ.ವಿ.ವಾಸು, ಮೈಸೂರು

Tags:
error: Content is protected !!