Mysore
24
few clouds

Social Media

ಭಾನುವಾರ, 08 ನವೆಂಬರ್ 2026
Light
Dark

ಜಪಾನ್‌ನಲ್ಲಿ 5.7 ತೀವ್ರತೆಯ ಭೂಕಂಪ

ಟೋಕಿಯೋ: ಜಪಾನ್‌ನಲ್ಲಿ ಭಾನುವಾರ ಮುಂಜಾನೆ ಸಂಭವಿಸಿದ ಭೂಕಂಪಕ್ಕೆ ಕನಿಷ್ಠ 22 ಮಂದಿ ಗಾಯಗೊಂಡಿದ್ದಾರೆ. ಅಂಗಡಿಗಳ ಕಿಟಕಿ ಗಾಜುಗಳು ಪುಡಿಯಾಗಿದ್ದು, ಭಯಭೀತರಾದ ಜನರು ಕಟ್ಟಡಗಳಿಂದ ಹೊರಗೆ ಓಡಿಬಂದಿದ್ದಾರೆ.

ಜಪಾನ್ ಹವಾಮಾನ ಇಲಾಖೆ ಕಂಪನದ ತೀವ್ರತೆಯನ್ನು 5.7 ಎಂದು ದಾಖಲಿಸಿದ್ದರೆ, ಅಮೆರಿಕದ ಭೂವೈಜ್ಞಾನಿಕ ಸಮೀಕ್ಷೆ 5.5 ಎಂದು ವರದಿ ಮಾಡಿದೆ.

ಮುಂಜಾನೆ ಒಂದು ಗಂಟೆ ನಾಲ್ಕು ನಿಮಿಷದ ಸುಮಾರಿಗೆ ಸಂಭವಿಸಿದ ಭೂಕಂಪದ ಕೇಂದ್ರಬಿಂದು, ಶಿಜುವೊಕಾ ಪ್ರಾಂತ್ಯದಲ್ಲಿ ಸುಮಾರು 40 ಕಿಲೋಮೀಟರ್ ಆಳದಲ್ಲಿತ್ತು.

ಐಚಿ, ಹಮಾಮಟ್ಸು, ಕ್ಯೋಟೋ, ನಾರಾ, ಯಮನಾಶಿ ಹಾಗೂ ಗಿಫು ಸೇರಿದಂತೆ ಹಲವು ಪ್ರದೇಶಗಳಲ್ಲಿ ಕಂಪನದ ಅನುಭವವಾಗಿದೆ. ಬಳಿಕ ಸಣ್ಣ ಪ್ರಮಾಣದ ಮರುಕಂಪನಗಳೂ ಸಂಭವಿಸಿವೆ.

ಟೋಕಿಯೊದಲ್ಲಿ ಕಂಪನದ ಅನುಭವವಾಗಿಲ್ಲ ಎಂದು ವರದಿ ತಿಳಿಸಿದೆ.

Tags:
error: Content is protected !!