Mysore
24
few clouds

Social Media

ಭಾನುವಾರ, 08 ನವೆಂಬರ್ 2026
Light
Dark

ಬಸ್ತಾರ್‌ನಲ್ಲಿ ಭದ್ರತಾ ಸಿಬ್ಬಂದಿಯೊಂದಿಗೆ ದೀಪಾವಳಿ ಆಚರಿಸಿದ ಪ್ರಧಾನಿ ಮೋದಿ

ಬಸ್ತಾರ್: ಬೆಳಕಿನ ಹಬ್ಬ ದೀಪಾವಳಿಯನ್ನು ಭದ್ರತಾ ಸಿಬ್ಬಂದಿಯೊಂದಿಗೆ ಆಚರಿಸಿದ ಪ್ರಧಾನಿ ನರೇಂದ್ರ ಮೋದಿ, ‘ನೀವೆಲ್ಲರೂ ನನ್ನ ಕುಟುಂಬದ ಸದಸ್ಯರು’ ಎಂದು ಆತ್ಮೀಯವಾಗಿ ಹೇಳಿದ್ದಾರೆ.

ಛತ್ತೀಸ್‌ಗಢದ ಬಸ್ತಾರ್‌ಗೆ ಭೇಟಿ ನೀಡಿದ ಪ್ರಧಾನಿ, ಭದ್ರತಾ ಪಡೆಗಳ ಸಿಬ್ಬಂದಿಯೊಂದಿಗೆ ಸಂವಾದ ನಡೆಸಿ, ದೇಶದ ರಕ್ಷಣೆಯಲ್ಲಿ ಅವರ ಸೇವೆಯನ್ನು ಶ್ಲಾಘಿಸಿದರು.

ದೇಶ–ವಿದೇಶಗಳಲ್ಲಿರುವ ಕೋಟ್ಯಂತರ ಭಾರತೀಯರು ದೀಪಾವಳಿ ಆಚರಿಸುತ್ತಿರುವ ಈ ಸಂದರ್ಭದಲ್ಲಿ, ದೇಶ ಕಾಯುವ ಯೋಧರೊಂದಿಗೆ ಹಬ್ಬದ ಸಂಭ್ರಮ ಹಂಚಿಕೊಳ್ಳಲು ಬಂದಿರುವುದಾಗಿ ತಿಳಿಸಿದರು.

ದೀರ್ಘಕಾಲ ನಕ್ಸಲ್‌ ಹಿಂಸೆಯಿಂದ ತತ್ತರಿಸಿದ್ದ ಬಸ್ತಾರ್‌ನಲ್ಲಿ ಈಗ ಅಭಿವೃದ್ಧಿಯ ಹೊಸ ಅಲೆ ಕಾಣಿಸುತ್ತಿದೆ ಎಂದು ಮೋದಿ ಬಣ್ಣಿಸಿದರು.

Tags:
error: Content is protected !!