ಮೈಸೂರು ನಗರಕ್ಕೆ ಈ ಬಾರಿಯ ಕರ್ನಾಟಕದ ನಂ. ಒನ್ ಸ್ವಚ್ಛತಾ ಗರಿ ಪ್ರಶಸ್ತಿ ದೊರೆತಿರುವುದು ಹೆಮ್ಮೆಯ ವಿಷಯ. ಇಡೀ ನಗರದ ಸ್ವಚ್ಛತೆಯನ್ನು ಪ್ರತಿ ದಿನ ಸ್ವಚ್ಛವಾಗಿರುವಂತೆ ನೋಡಿಕೊಳ್ಳುವುದು ಸಾಮಾನ್ಯ ಸಂಗತಿಯಲ್ಲ. ನಗರವನ್ನು ಸ್ವಚ್ಛವಾಗಿಡಲು ಹಗಲಿರುಳು ಶ್ರಮಿಸುತ್ತಿರುವ ಮೈಸೂರು ನಗರ ಪಾಲಿಕೆಯ ಅಧಿಕಾರಿಗಳು, ಸ್ವಚ್ಛತಾ ಸಿಬ್ಬಂದಿಗಳು ಅಭಿನಂದನಾರ್ಹರು.
ಕಸದ ವಾಹನ ಮನೆಯ ಬಳಿ ಬಂದರೂ ಕಸ ನೀಡದೆ ನಂತರ, ಅಥವಾ ವಾಹನ ಬರುವ ಮೊದಲೇ ರಸ್ತೆ ಬದಿಯಲ್ಲಿ ಸುರಿಯುವ ಸನ್ನಿವೇಶಗಳನ್ನು ಅನೇಕ ಕಡೆ ಕಾಣಬಹುದಾಗಿದೆ. ಈ ರೀತಿ ಆಗಬಾರದು. ಜನರಲ್ಲೂ ಸ್ವಚ್ಛತೆ ಪ್ರಜ್ಞೆ ಇರಬೇಕಾಗುತ್ತದೆ.
-ಬಿ. ಎಂ. ಸುವರ್ಣ, ಮೈಸೂರು

