Mysore
22
broken clouds

Social Media

ಶುಕ್ರವಾರ, 13 ನವೆಂಬರ್ 2026
Light
Dark

ಓದುಗರ ಪತ್ರ: ದಲಿತ ಹಾಗೂ ರೈತ ಚಳವಳಿಗಳೆಂಬ ಎರಡು ಕಣ್ಣುಗಳ ‘ಪ್ರಖರತೆ’ ಹೆಚ್ಚಲಿ

ಸಿ. ಎಂ.ಮುನಿಯಪ್ಪ ಹಸಾಳ ಅವರ ಕಾಲಡಿಯ ಕಣ್ಣು ಕೃತಿಯ ಕುರಿತ ಮಾತು – ಸಂವಾದ ಕಾರ್ಯಕ್ರಮದಲ್ಲಿ ಸಂಸ್ಕೃತಿ ಚಿಂತಕ ಬಿ. ಮಹೇಶ್ ಹರವೆ ಅವರು , ದಲಿತ ಚಳವಳಿ ಹಾಗೂ ರೈತ ಚಳವಳಿಗಳು ಕರ್ನಾಟಕದ ಎರಡು ಕಣ್ಣುಗಳು ಎಂದು ಹೇಳಿರುವುದು ಈ ಚಳವಳಿಗಳ ಶಕ್ತಿಯನ್ನು ಸೂಚಿಸುತ್ತದೆ.

ಆದರೆ ಈ ಎರಡೂ ಚಳವಳಿಗಳಿಗೆ ಹಿಂದಿನ ಪ್ರಖರತೆ ಇದೆಯೇ ಎಂಬ ಪ್ರಶ್ನೆಯನ್ನು ಕೇಳಿಕೊಳ್ಳುವ ಸಂದರ್ಭವೂ ಈಗ ಬಂದಿದೆ. ಕಾರಣ ಈ ಎರಡೂ ಸಂಘಟನೆಗಳಲ್ಲಿ ಹಿಂದನಂತೆ ಒಗ್ಗಟ್ಟು ಕಂಡುಬರುತ್ತಿಲ್ಲ. ಹಲವು ಬಣಗಳು ಸೃಷ್ಟಿಯಾಗಿವೆ ಎಂಬ ಆಕ್ಷೇಪಣೆಗಳನ್ನು ಆಗಾಗ್ಗೆ ಕೇಳುತ್ತಿರುತ್ತೇವೆ. ಈಗ ಆಗಬೇಕಾಗಿರುವುದು, ಸಂಘಟನೆಗಳ ಮುಖ್ಯಸ್ಥರು ಮತ್ತು ಪ್ರಮುಖ ನಾಯಕರು ಹಿಂದಿನ ವೈಭವಕ್ಕೆ ಮರಳುವುದು ಹೇಗೆ ಎಂಬ ಚಿಂತಿಸಿ ಕಾರ್ಯಪ್ರವೃತ್ತರಾಗಬೇಕಾಗಿದೆ.

ದಲಿತರಲ್ಲಿ ಸಾಕ್ಷರತೆಯ ಪ್ರಮಾಣ ಹೆಚ್ಚಾಗಲು ದಲಿತ ಚಳವಳಿಯ ಹೋರಾಟ ಮತ್ತು ಅದರಿಂದ ಆದ ಪರಿಣಾಮಗಳು ಪ್ರಮುಖ ಕಾರಣವಾಗಿವೆ ಎಂದು ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಗುರುಪ್ರಸಾದ್ ಕೆರಗೋಡು ಅವರು ಹೇಳಿರುವುದು ಒಪ್ಪುವ ಮಾತಾಗಿದೆ.

-ಬೆಸಗರಹಳ್ಳಿ ರವಿಪ್ರಸಾದ್, ಮೈಸೂರು

Tags:
error: Content is protected !!