Mysore
22
broken clouds

Social Media

ಶುಕ್ರವಾರ, 13 ನವೆಂಬರ್ 2026
Light
Dark

ಓದುಗರ ಪತ್ರ: ಮೇಲುಕೋಟೆ: ನಾಯಿಗಳ ಉಪಟಳ ನಿಯಂತ್ರಿಸಿ

ದಕ್ಷಿಣ ಬದರಿಕಾಶ್ರಮ ಎಂದೇ ಹೆಸರುವಾಸಿಯಾದ ಪಾಂಡವಪುರ ತಾಲ್ಲೂಕಿನ ಪ್ರಸಿದ್ಧ ಯಾತ್ರಾಸ್ಥಳ ಮೇಲುಕೋಟೆಗೆ ಪ್ರತಿ ದಿನವೂ ಹೆಚ್ಚಿನ ಸಂಖ್ಯೆಯ ಭಕ್ತಾದಿಗಳು ಬರುತ್ತಾರೆ. ಅದರಲ್ಲಿಯೂ ವಾರಾಂತ್ಯ ಮತ್ತು ರಜೆ ದಿನಗಳಲ್ಲಿ ಇಲ್ಲಿಗೆ ಪ್ರವಾಸಿಗರು, ಭಕ್ತಾದಿಗಳ ಸಂಖ್ಯೆ ಹೆಚ್ಚಿರುತ್ತದೆ. ಆದರೆ ಇಂತಹ ಪ್ರದೇಶದಲ್ಲಿ ಬೀದಿ ನಾಯಿಗಳ ಕಾಟ ವಿಪರೀತವಾಗಿದೆ.

ಬಸ್‌ಸ್ಟ್ಯಾಂಡ್‌ನಿಂದ ಹಿಡಿದು ಚೆಲುವನಾರಾಣಸ್ವಾಮಿ ದೇವಾಲಯದವರೆಗೆ ಮುಖ್ಯ ರಸ್ತೆಗಳಲ್ಲಿ ಈ ಬೀದಿ ನಾಯಿಗಳ ಉಪಟಳ ಹೇಳತೀರದಾಗಿದೆ. ದೇವಾಲಯದ ಸುತ್ತಮುತ್ತ ಕೆಲ ಭಕ್ತಾದಿಗಳು ಬಿಸಾಡುವ ಪ್ರಸಾದದ ಎಲೆಗಳು ಈ ನಾಯಿಗಳು ಕಂಡುಬರಲು ಕಾರಣವಾಗಿದೆ. ಇದರಿಂದ ಜನರು ನೆಮ್ಮದಿಯಿಂದ ಓಡಾಡಲು ಆಗುತ್ತಿಲ್ಲ. ಸ್ಥಳೀಯ ಆಡಳಿತ ಬೀದಿ ನಾಯಿಯ ಉಪಟಳ ನಿಯಂತಣಕ್ಕೆ ಕ್ರಮ ಕೈಗೊಳ್ಳಬೇಕಾಗಿದೆ.

-ಮುರಳಿ ಪುರೋಹಿತ್, ಮೇಲುಕೋಟೆ 

Tags:
error: Content is protected !!