Mysore
27
overcast clouds

Social Media

ಶನಿವಾರ, 02 ಮೇ 2026
Light
Dark

ಓದುಗರ ಪತ್ರ: ರಾಜ್ಯ ಬಜೆಟ್ ಪ್ರಗತಿಯ ದಿಕ್ಸೂಚಿ

ಓದುಗರ ಪತ್ರ

ಮುಖ್ಯಮಂತ್ರಿ ಸಿದ್ದರಾಮಯ್ಯನವರು ಶುಕ್ರವಾರ ಮಂಡಿಸಿದ ೨೦೨೬-೨೭ನೇ ಸಾಲಿನ ಬಜೆಟ್ ಪ್ರಗತಿಯ ದಿಕ್ಸೂಚಿಯಾಗಿದೆ. ರಾಜ್ಯದ ಬಜೆಟ್ ಗಾತ್ರ ೪,೪೮,೦೦೪ ಕೋಟಿ ರೂ. ಆಗಿದ್ದು, ಇದರಲ್ಲಿ ೩.೧೦ ಲಕ್ಷ ಕೋಟಿ ರೂ. ರಾಜಸ್ವ ವೆಚ್ಚಕ್ಕೆ ಹಾಗೂ ೭೩,೦೦೦ ಕೋಟಿ ರೂ. ಬಂಡವಾಳ ವೆಚ್ಚಕ್ಕೆ ಮೀಸಲಿಡಲಾಗಿದೆ. ವಿತ್ತೀಯ ಕೊರತೆಯನ್ನು ಜಿಎಸ್‌ಟಿಯ ಶೇ.೨೯ರಷ್ಟು ನಿಯಂತ್ರಣದಲ್ಲಿಡಲಾಗಿದೆ.

ಇದು ರಾಜ್ಯದ ಆರ್ಥಿಕ ಶಿಸ್ತನ್ನು ಪ್ರತಿಬಿಂಬಿಸುತ್ತದೆ. ಯುವಜನತೆಗೆ ಈ ಬಜೆಟ್ ಹೊಸ ಭರವಸೆ ನೀಡಿದೆ. ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಕ್ರಮ ವಹಿಸಲಾಗಿದೆ. ಸಂಚಾರ ದಟ್ಟಣೆ ನಿವಾರಿಸಲು ಸುರಂಗ ಮಾರ್ಗಕ್ಕೆ ೪೦,೦೦೦ ಕೋಟಿ ರೂ. ಮೀಸಲಿಡಲಾಗಿದೆ. ಮೆಟ್ರೋ ೩ನೇ ಹಂತದ ಕಾಮಗಾರಿಗೆ ಅನುದಾನ. ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಯೋಜನೆ ಘೋಷಣೆ. ಪ್ರತಿ ಹಳ್ಳಿಯಲ್ಲೂ ಸುಸಜ್ಜಿತ ಕ್ರೀಡಾಂಗಣ ನಿರ್ಮಿಸುವ ಗುರಿ ಹೊಂದಲಾಗಿದೆ. ಹಿಂದುಳಿದ ವರ್ಗಗಳ ಅಭಿವೃದ್ಧಿಗೆ ಬಜೆಟ್ ನಲ್ಲಿ ವಿಶೇಷ ಆದ್ಯತೆ ನೀಡಲಾಗಿದೆ. ಸರ್ಕಾರಿ ಶಾಲೆಗಳ ನವೀಕರಣಕ್ಕೆ ೨,೦೦೦ ಕೋಟಿ ರೂ. ಹಾಗೂ ಗ್ರಾಮೀಣ ಜನರಿಗೆ ಮನೆ ಬಾಗಿಲಿಗೆ ಚಿಕಿತ್ಸೆ ನೀಡಲು ೧೦೦ ಹೊಸ ಸಂಚಾರ ಕ್ಲಿನಿಕ್‌ಗಳನ್ನು ಆರಂಭಿಸುವುದು ; ಉತ್ತಮ ಯೋಜನೆ. ಈ ಬಜೆಟ್ ಕೃಷಿ,ಕೈಗಾರಿಕೆ ಮತ್ತು ತಂತ್ರಜ್ಞಾನದ ಸಮನ್ವಯದೊಂದಿಗೆ ಕರ್ನಾಟಕವನ್ನು ಪ್ರಗತಿಯ ಪಥದಲ್ಲಿ ಮುನ್ನಡೆಸುವ ದಿಕ್ಸೂಚಿಯಾಗಿದೆ.

-ಎ. ಎಂ.ಅಂಜಲಿ, ಅರಸಿನಕೆರೆ ಗ್ರಾಮ, ಜಯಪುರ ಹೋಬಳಿ, ಮೈಸೂರು ತಾ.

Tags:
error: Content is protected !!