Mysore
23
light rain

Social Media

ಭಾನುವಾರ, 08 ನವೆಂಬರ್ 2026
Light
Dark

ಓದುಗರ ಪತ್ರ: ಸಾರ್ವಜನಿಕ ಶೌಚಾಲಯ ವ್ಯವಸ್ಥೆ ಕಲ್ಪಿಸಿ

ಮೈಸೂರಿನಿಂದ ಎಚ್. ಡಿ. ಕೋಟೆಗೆ ಬರಬೇಕಾದರೆ ಎಂ ಎಂ ಮುಖ್ಯ ರಸ್ತೆಯಲ್ಲಿರುವ ಆರ್‌ಪಿ ಸರ್ಕಲ (ರಾಜೇಂದ್ರ ಪ್ರಸಾದ್ ಸರ್ಕಲ್) ದಿನನಿತ್ಯ ಸಾಕಷ್ಟು ಸಂಖ್ಯೆ ಜನರು ಸೇರುವ ಜಾಗವಾಗಿದೆ.

ಈ ಸರ್ಕಲ್‌ನ ವ್ಯಾಪ್ತಿಯಲ್ಲಿ ದಿನನಿತ್ಯ ವಹಿವಾಟು ಹೆಚ್ಚಾಗಿ ನಡೆಯುತ್ತದೆ. ಹಾಗೆಯೇ ಈ ಸರ್ಕಲ್‌ನಿಂದ ನಾನಾ ಕಡೆ ತೆರಳುವ ಮಾರ್ಗಗಳು ಇವೆ. ಹೀಗಿದ್ದ ಮೇಲೆ ಜನಸಂದಣಿ ಇದ್ದೇ ಇರುತ್ತದೆ. ಈ ಸರ್ಕಲ್ ಬಳಿ ಅಂಗಡಿ ಹಾಗೂ ಕೃಷಿ ಮಾರುಕಟ್ಟೆ ಇದೆ. ಹೆಚ್. ಡಿ. ಕೋಟೆ ಪುರಸಭೆ ವ್ಯಾಪ್ತಿಗೆ ಬರುವ ಈ ಜಾಗದಿಂದ ಪುರಸಭೆಗೆ ಹೆಚ್ಚಿನ ಅದಾಯವೂ ಇದೆ.

ಸುಪ್ರೀಂ ಕೋರ್ಟ್ ಆeಯಂತೆ ಫುಟ್‌ಪಾತ್‌ಗಳನ್ನು ತೆರವು ಮಾಡುವ ಸಮಯದಲ್ಲಿ ಹಿಂದೆ ಇದ್ದ ಹಳೆಯ ಶೌಚಾಲಯಗಳನ್ನು ಒಡೆದು ಹಾಕಿದ್ದಾರೆ. ಆದರೆ ಇದರ ಪುನರ್ ನಿರ್ಮಾಣದ ಬಗ್ಗೆ ಸ್ಥಳೀಯ ಆಡಳಿತ ಯೋಚಿಸದಿರುವುದು ಅಚ್ಚರಿ ಮೂಡಿಸುತ್ತದೆ. ಸಾರ್ವಜನಿಕರು ಓಡಾಡುವ ಸ್ಥಳದಲ್ಲಿ ಶೌಚಾಲಗಳ ಅಗತ್ಯ ಎಷ್ಟಿರುತ್ತದೆ ಎಂದು ಹೇಳಬೇಕಾಗಿಲ್ಲ. ಆದುದರಿಂದ ಸಂಬಂಧಪಟ್ಟ ಅಧಿಕಾರಿಗಳು ಶೀಘ್ರದಲ್ಲೇ ಶೌಚಾಲಯ ವ್ಯವಸ್ಥೆ ಮಾಡಿಕೊಡಲು ಮನಸ್ಸು ಮಾಡಬೇಕಾಗಿದೆ.

-ಸಿದ್ದಲಿಂಗೇಗೌಡ, ಹೈರಿಗೆ ಗ್ರಾಮ, ಹೆಚ್. ಡಿ. ಕೋಟೆ ತಾಲ್ಲೂಕು

Tags:
error: Content is protected !!