ತಮಿಳುನಾಡಿನಲ್ಲಿ, ಕಳೆದ ಕೆಲವು ದಿನಗಳ ಹಿಂದೆ, ೧೦ ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿ ಆಕೆಯನ್ನು ಕೊಲೆಗೈದ ವಿಷಯಕ್ಕೆ ಸಂಬಂಧಿಸಿದಂತೆ ಪೊಲೀಸರು ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ, ಹಿರಿಯ ಪೊಲೀಸ್ ಅಧಿಕಾರಿಗಳೇ ನಗುತ್ತಾ, ಹಾಸ್ಯ ಮಾಡುತ್ತಾ, ಈ ಗಂಭೀರ ಪ್ರಕರಣವನ್ನು ಪತ್ರಕರ್ತರ ಮುಂದೆ ವಿವರಿಸುತ್ತಿದ್ದುದು ದೃಶ್ಯ ಮಾಧ್ಯಮಗಳಲ್ಲಿ ವರದಿಯಾಗಿದೆ.
ಈ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಹೆಣ್ಣು ಮಕ್ಕಳಿಲ್ಲವೇ? ಅಕ್ಕ- ತಂಗಿಯರಿಲ್ಲವೇ? ಅತ್ಯಾಚಾರ ನಡೆದು ಕೊಲೆ ಆದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸದೇ ಗಹಗಹಿಸಿ ನಗುವುದು ನಾಗರಿಕ ಸಮಾಜವೇ ತಲೆ ತಗ್ಗಿಸುವ ಘಟನೆ. ಇದರಲ್ಲಿ ಒಬ್ಬ ಮಹಿಳಾ ಪೊಲೀಸ್ ಅಧಿಕಾರಿಯೂ ಇರುವುದು ನಾಚಿಕೆಗೆಗೇಡಿನ ಸಂಗತಿ. ಸಮಾಜಕ್ಕೆ ಮಾದರಿಯಾಗಬೇಕಾದ ಹಿರಿಯ ಪೊಲೀಸ್ ಅಧಿಕಾರಿಗಳೇ ಈ ರೀತಿ ವರ್ತಿಸಿದರೆ, ಇನ್ನು ಇವರ ಕೆಳಗಿನ ಅಧಿಕಾರಿಗಳು ಹೇಗೆ ವರ್ತಿಸುತ್ತಾರೆ? ಇಂತಹ ಅಧಿಕಾರಿಗಳಿಂದ ಸಾಮಾನ್ಯ ನಾಗರಿಕರು ರಕ್ಷಣೆ ನಿರೀಕ್ಷಿಸಲು ಸಾಧ್ಯವೇ? ವಿಷಯದ ಗಂಭೀರತೆಯನ್ನು ಮರೆಯುವ ಇಂತಹ ಅಧಿಕಾರಗಳ ವಿರುದ್ಧ ಆ ರಾಜ್ಯ ಸರ್ಕಾರ ಕಠಿಣ ಕ್ರಮ ಕೈಗೊಳ್ಳುವುದು ಅಗತ್ಯ.
-ಬೂಕನಕೆರೆ ವಿಜೇಂದ್ರ, ಕುವೆಂಪುನಗರ, ಮೈಸೂರು




