Mysore
23
overcast clouds

Social Media

ಬುಧವಾರ, 16 ಸೆಪ್ಟೆಂಬರ್ 2026
Light
Dark

ಓದುಗರ ಪತ್ರ: ಚುರುಕಾಗಲಿ 6ರ ಪ್ಲಾಟ್ ಫಾರಂ ಟಿಕೆಟ್ ಕೌಂಟರ್

ಮೈಸೂರಿನ ನೈಋತ್ಯ ರೈಲ್ವೆಗೆ ಸೇರಿರುವ ಅಶೋಕ ಪುರಂ ರೈಲು ನಿಲ್ದಾಣದಲ್ಲಿ ಪ್ಲಾಟ್ ಫಾರಂ ೬ರ ಕಡೆ ರೈಲು ಪ್ರಯಾಣಿಕರಿಗೆ ಅನುಕೂಲವಾಗಲೆಂದು ಕಳೆದೆರಡು ವರ್ಷಗಳ ಹಿಂದೆ ಸಂಸದರು, ಶಾಸಕರು ಸೇರಿದಂತೆ ಅನೇಕ ಗಣ್ಯರ ಸಹಯೋಗದಲ್ಲಿ ರೈಲ್ವೆ ಟಿಕೆಟ್ ಸೇವೆಗೆ ಚಾಲನೆ ನೀಡಲಾಯಿತು.

ಆದರೆ ಇತ್ತೀಚಿನ ದಿನಗಳಲ್ಲಿ ಮುಂಜನೆ ೪:೪೫ ಕ್ಕೆ ಅಶೋಕಪುರಂ ರೈಲು ನಿಲ್ದಾಣದಿಂದ ಚೆನ್ನೈಗೆ ತೆರಳುವ ಎಂಜಿಆರ್ ಸೂಪರ್ ಫಾಸ್ಟ್ ಎಕ್ಸ್‌ಪ್ರೆಸ್ ರೈಲು ಹೊರಡುವ ವೇಳೆಯಲ್ಲಿ ಪ್ಲಾಟ್ ಫಾರಂ ಆರರ ಕಡೆಯಿಂದ ಬರುವವರು( ಹಿರಿಯ ನಾಗರಿಕರು, ಕಿರಿಯರು, ಮಹಿಳೆಯರು ಸೇರಿ) ಧಾವಿಸಿ ಬಂದು ಪ್ಲಾಟ್ ಫಾರಂ ಒಂದರಲ್ಲಿರುವ ಟಿಕೆಟ್ ಕೌಂಟರ್‌ಗೆ ತೆರಳಿ ಟಿಕೆಟ್ ಪಡೆದು ನಂತರ ಪ್ಲಾಟ್ ಫಾರಂ ಐದು ಅಥವಾ ಆರರಲ್ಲಿ ನಿಲ್ಲುವ ರೈಲುಗಳಿಗೆ ಬಂದು ಹತ್ತಬೇಕಾಗಿದೆ. ಅದರಲ್ಲೂ ಕೆಲವು ಸಮಯದಲ್ಲಿ ಪ್ರಯಾಣಿಕರಿಗೆ ರೈಲು ಸಿಗುವುದಿಲ್ಲ. ಆದ್ದರಿಂದ ಸಂಬಂಧಪಟ್ಟ ನೈಋತ್ಯ ರೈಲ್ವೆ ಅಧಿಕಾರಿಗಳು ರೈಲು ಪ್ರಯಾಣಿಕರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಅಶೋಕಪುರಂ ರೈಲು ನಿಲ್ದಾಣದ ಪ್ಲಾಟ್ ಫಾರಂ ಆರರ ಕಡೆಯಿರುವ ರೈಲ್ವೆ ಟಿಕೆಟ್ ಕೌಂಟರ್ ಅನ್ನು ಎಲ್ಲ ರೈಲುಗಳು ಹೊರಡುವ ಮುನ್ನವೇ ಕರ್ತವ್ಯ ನಿರ್ವಹಿಸಲು ಸಿಬ್ಬಂದಿಗಳಿಗೆಮ ಸೂಚಿಸಬೇಕು. ಹಾಗೆಯೇ ಸ್ವಯಂ ಪ್ರೇರಿತರಾಗಿ ರೈಲು ಟಿಕೆಟ್ ಪಡೆಯುವ ಯಂತ್ರವನ್ನು ಅಳವಡಿಸಿದರೆ ಹೆಚ್ಚು ಅನುಕೂಲವಾಗುತ್ತದೆ.

-ನಾಗೇಶ್, ಮಾನಸಗಂಗೋತ್ರಿ, ಮೈಸೂರು

Tags:
error: Content is protected !!