ಕೊನೆಗೊಳ್ಳಲಿ ಸಂಘರ್ಷ!
ಯುದ್ಧವನು ಕೊನೆಗಾಣಿಸಲು
ರಾಜತಾಂತ್ರಿಕ ಮಾತುಕತೆಯೇ
ಉತ್ತಮವೆಂಬ ಭಾರತದ ನಿಲುವಿಗೆ
ಬ್ರಿಕ್ಸ್ ನಾಯಕರು ಒಕ್ಕೊರಲಿನಿಂದ
ಒಪ್ಪಿರುವುದು ಸ್ವಾಗತಾರ್ಹ!
ಇದಲ್ಲವೇ ಶೃಂಗಸಭೆಯ ಯಶಸ್ಸು!
ಯುದ್ಧ ವಿನಾಶಕಾರಿ ಎಂದಿಗೂ
ಕೊನೆಗೊಳ್ಳಲಿ ಜಗದ ಸಂಘರ್ಷ
ಏರ್ಪಡಲಿ ಶಾಂತಿ ಸಹಕಾರ!
-ಸಿ.ಪಿ.ಸಿದ್ಧಾಶ್ರಮ, ಮೈಸೂರು




