Mysore
23
clear sky

Social Media

ಶನಿವಾರ, 18 ಏಪ್ರಿಲ 2026
Light
Dark

ಓದುಗರ ಪತ್ರ:  ಬಸ್ ತಂಗುದಾಣ ಜನರ ಉಪಯೋಗಕ್ಕೆ ಬರುವಂತಾಗಲಿ

ಓದುಗರ ಪತ್ರ

ಮೈಸೂರು ನಗರದ ೫೬ನೇ ವಾರ್ಡಿನ ಅಶೋಕಪುರಂನಲ್ಲಿ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ವತಿಯಿಂದ ಪ್ರಯಾಣಿಕರಿಗೆ ಅನುಕೂಲವಾಗಲಿ ಎಂಬ ಸದುದ್ದೇಶದಿಂದ ಬಸ್ ತಂಗುದಾಣವನ್ನು ನಿರ್ಮಿಸಲಾಗಿತ್ತು. ಹೀಗಾಗಿ ಬಸ್‌ಗಾಗಿ ಕಾದು ನಿಲ್ಲುವ ಪ್ರಯಾಣಿಕರಿಗೆ ಬಿಸಿಲು, ಮಳೆಯಿಂದ ರಕ್ಷಣೆ ಸಿಗುತ್ತಿತ್ತು. ಈಗ ಈ ಮಾರ್ಗದಲ್ಲಿ ಸಂಚರಿಸುತ್ತಿದ್ದ ಬಸ್‌ಗಳ ಓಡಾಟವನ್ನೂ ನಿಲ್ಲಿಸಲಾಗಿದೆ.

ಹೀಗಾಗಿ ಈ ಬಸ್ ತಂಗುದಾಣದಿಂದ ಸಾರ್ವಜನಿಕರಿಗೆ ಯಾವುದೇ ಪ್ರಯೋಜನವಾಗುತ್ತಿಲ್ಲ . ಇದರಿಂದ ಸದರಿ ಬಸ್ ನಿಲ್ದಾಣ ಪ್ರಸ್ತುತ ಭಿಕ್ಷೆ ಬೇಡುವವರು ಮತ್ತು ಹಸು, ಕುರಿ, ಕೋಳಿಗಳ ತಂಗುದಾಣವಾಗಿ ಮಾರ್ಪಟ್ಟಿದೆ. ಈ ಸಂಬಂಧ ಕೆಎಸ್ಆರ್‌ಟಿಸಿ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಸ್ಪಂದನೆ ಸಿಗುತ್ತಿಲ್ಲ.

ಸಂಬಂಧಪಟ್ಟವರು ಈ ಮಾರ್ಗದಲ್ಲಿ ಬಸ್‌ಗಳ ಸಂಚಾರವನ್ನು ಪುನಾರಂಭಿಸಿ ಜನರು ಅನಾಥವಾಗಿರುವ ಈ ಬಸ್ ನಿಲ್ದಾಣದ ಪ್ರಯೋಜನ ಪಡೆಯುವಂತೆ ಮಾಡಲು ಕ್ರಮವಹಿಸಬೇಕಿದೆ.

– ಸಿ.ಶಿವಣ್ಣ , ಪ್ರಧಾನ ಕಾರ್ಯದರ್ಶಿ, ಪತ್ರಿಕಾ ವಿತರಕರ ಕ್ಷೇಮಾಭಿವೃದ್ಧಿ ಸಂಘ

Tags:
error: Content is protected !!