Mysore
20
broken clouds

Social Media

ಮಂಗಳವಾರ, 14 ಜುಲೈ 2026
Light
Dark

ಮತ್ತೆ ಹೊರ್ಮುಜ್‌ ಬಂದ್‌ ಮಾಡಿದ ಇರಾನ್‌

ಟೆಹ್ರಾನ್ : ಅಮೆರಿಕ ಜೊತೆಗಿನ ಮಾತುಕತೆ ಭಾಗವಾಗಿ ಹೊರ್ಮುಜ್‌ ಜಲಸಂಧಿಯಲ್ಲಿ ಮುಕ್ತ ಸಂಚಾರಕ್ಕೆ ಅವಕಾಶ ಕಲ್ಪಿಸಿದ್ದ ಇರಾನ್‌, ತನ್ನ ನಿರ್ಧಾರವನ್ನು ಹಿಂಪಡೆಯುತ್ತಿರುವುದಾಗಿ ಘೋಷಿಸಿದೆ.

ಈ ಕುರಿತು ಶನಿವಾರ ಪ್ರಕಟಣೆ ಹೊರಡಿಸಿರುವ ಇರಾನ್‌ ಕೇಂದ್ರ ಮಿಲಿಟರಿ ಕಮಾಂಡ್‌, ಇರಾನ್‌ ಬಂದರುಗಳಿಗೆ ಹಾಗೂ ಅಲ್ಲಿಂದ ತೆರಳುವ ಹಡಗುಗಳ ಮೇಲೆ ನಿರ್ಬಂಧ ಹೇರುವ ಕ್ರಮವನ್ನು ಅಮೆರಿಕ ಮುಂದುವರಿಸಿದೆ. ಆ ಮೂಲಕ ಶಾಂತಿ ಮಾತುಕತೆ ವೇಳೆ ತಾನು ಒಪ್ಪಿಕೊಂಡಿದ್ದ ಭರವಸೆಯನ್ನು ಅಮೆರಿಕ ಮುರಿದಿದೆ ಎಂದು ಹೇಳಿದೆ.

ಹೀಗಾಗಿ ಇರಾನ್‌ ಬಂದರುಗಳಿಗೆ ಬರುವ ಎಲ್ಲ ಹಡಗುಗಳ ಮುಕ್ತ ಸಂಚಾರವನ್ನು ಅಮೆರಿಕ ಖಾತ್ರಿ ಪಡಿಸುವವರೆಗೂ ಹೊರ್ಮುಜ್‌ ಜಲಸಂಧಿಯನ್ನು ಕಟ್ಟು ನಿಟ್ಟಾಗಿ ನಿಯಂತ್ರಿಸಲಾಗುತ್ತದೆ ಎಂದು ಇರಾನ್‌ ಹೇಳಿದೆ.

 

 

Tags:
error: Content is protected !!