ಮೈಸೂರಿನ ಕುವೆಂಪುನಗರದ ‘ಎಂ’ ಬ್ಲಾಕ್‌ನ ನೃಪತುಂಗ ರಸ್ತೆಯಲ್ಲಿರುವ ಗಣಪತಿ ದೇವಸ್ಥಾನದ ಪಕ್ಕದಲ್ಲಿ ಶ್ರೀ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದಿಂದ ಹೊಸ ಟ್ರಾನ್ಸ್ ಫಾರ್ಮರ್ ಅಳವಡಿಸುವ ಸಂದರ್ಭದಲ್ಲಿ ಕತ್ತರಿಸಲಾದ ಮರದ ಕೊಂಬೆಗಳನ್ನು ವಿದ್ಯುತ್ ಮೀಟರ್ ಮೇಲೆಯೇ ಬಿಸಾಡಿದ್ದಾರೆ. ಈ ಬಗ್ಗೆ ಸಾರ್ವಜನಿಕರು ಪ್ರಶ್ನಿಸಿದರೆ ಮರದ ಕೊಂಬೆಗಳನ್ನು ತೆರವುಗೊಳಿಸುವುದು ಮೈಸೂರು ಮಹಾನಗರ ಪಾಲಿಕೆಯವರ ಕರ್ತವ್ಯ ಎಂದು ಉಡಾಫೆಯಿಂದ ಉತ್ತರಿಸುತ್ತಾರೆ. ರಸ್ತೆ ಬದಿ ಮರದ ಕೊಂಬೆಯನ್ನು ಬಿಸಾಡಿರುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದ್ದು ಸಂಬಂಧಪಟ್ಟವರು ಕೂಡಲೇ ಮರದ ಕೊಂಬೆಯನ್ನು ತೆರವುಗೊಳಿಸಬೇಕು. ಇನ್ನು ಮುಂದಾದರೂ ಮರದ ಕೊಂಬೆಗಳನ್ನು ತೆರವು ಸಂದರ್ಭದಲ್ಲಿ ಮೈಸೂರು ಪಾಲಿಕೆ ಹಾಗೂ ಸೆಸ್ಕ್ ಅಽಕಾರಿಗಳು ಸಮನ್ವಯದಿಂದ ಕಾರ್ಯನಿರ್ವಹಿಸುವ ಮೂಲಕ ಸಾರ್ವಜನಿಕರ ಹಿತವನ್ನು ಕಾಪಾಡಬೇಕು.
-ನಾಗೇಶ್, ಮಾನಸಗಂಗೋತ್ರಿ, ಮೈಸೂರು





