Mysore
24
scattered clouds

Social Media

ಮಂಗಳವಾರ, 18 ಆಗಸ್ಟ್ 2026
Light
Dark

ಓದುಗರ ಪತ್ರ: ರಾಜಕಾರಣಿಗಳು ವಿಶ್ವಾಸಕ್ಕೆ ಅರ್ಹರೇ?

ಓದುಗರ ಪತ್ರ

ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳ ಒಟ್ಟು ೬೪೩ ಸಚಿವರುಗಳಲ್ಲಿ ಶೇ.೪೭ ಮಂದಿಯ ಮೇಲೆ ಅಂದರೆ ೩೦೨ ಸಚಿವರುಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆಗಳು ದಾಖಲಾಗಿವೆ. ಇವರಲ್ಲಿ ೧೭೬ ಸಚಿವರುಗಳ ವಿರುದ್ಧ ಗಂಭೀರ ಅಪರಾಧ ಪ್ರಕರಣಗಳು ( ಲೈಂಗಿಕ ದೌರ್ಜನ್ಯ ಸೇರಿ) ದಾಖಲಾಗಿವೆ ಎಂದು ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ (ಎಡಿಆರ್) ಇತ್ತೀಚೆಗೆ ನಡೆಸಿದ ಸಮೀಕ್ಷೆ ವರದಿ ತಿಳಿಸಿದೆ.

ಈ ವರದಿಯನ್ನು ನೋಡಿ ಪ್ರಜ್ಞಾವಂತ ನಾಗರಿಕರು ಬೆಚ್ಚಿ ಬೀಳುವಂತಾಗಿದೆ. ದೇಶದಲ್ಲಿರುವ ವಿವಿಧ ರಾಜಕೀಯ ಪಕ್ಷಗಳ ಸಚಿವರುಗಳಲ್ಲಿ ಸುಮಾರು ಅರ್ಧದಷ್ಟು ಸಚಿವರು ಕ್ರಿಮಿನಲ್ ಮೊಕದ್ದಮೆ ಎದುರಿಸುತ್ತಿರುವುದನ್ನು ಗಮನಿಸಿದರೆ ರಾಜಕಾರಣಿಗಳ ಮೇಲೆ ಸಾರ್ವಜನಿಕರು ವಿಶ್ವಾಸವನ್ನೇ ಕಳೆದುಕೊಳ್ಳುವಂತಾಗಿದೆ, ಇಂತಹ ಸಚಿವರುಗಳಿಂದ ಉತ್ತಮ ಆಡಳಿತವನ್ನು ಸಾರ್ವಜನಿಕರು ನಿರೀಕ್ಷೆ ಮಾಡಲು ಸಾಧ್ಯವೇ ಎನ್ನುವಂತಾಗಿದೆ.

-ಬೂಕನಕೆರೆ ವಿಜೇಂದ್ರ, ಕುವೆಂಪು ನಗರ, ಮೈಸೂರು

Tags:
error: Content is protected !!