Mysore
29
clear sky

Social Media

ಮಂಗಳವಾರ, 13 ಅಕ್ಟೋಬರ್ 2026
Light
Dark

ಡೆಡ್ ಬಾಡಿ ಬಿಸಾಕಿದ ಜಾಗದಲ್ಲಿ ಹೊಸ ಸುಳಿವು

ವರದಿ ರೂಪ: ರವಿಚಂದ್ರ ಚಿಕ್ಕೆಂಪಿಹುಂಡಿ

ಸ್ಕಾರ್ಪಿಯೋ ಹೋಗಿ-ಬರುವುದು, ೩ ಜನರು ನಡೆದು ಬರುವುದು ವಿಡಿಯೋದಲ್ಲಿ ಸೆರೆ

ನಾಳೆ ೧೦ ಗಂಟೆಯವರೆಗೆ ಸಮಯ ನೀಡುತ್ತೇನೆ, ಅಷ್ಟರೊಳಗೆ ಆ ಮೂವರು ಬಂದು ಸರೆಂಡರ್ ಆಗಬೇಕು: ಪಿಎಸ್‌ಐ ವಿನಯ್ ಆರ್ಡರ್

ನಾನು, ಲಕ್ಷ್ಮಣ್ ಮತ್ತು ನಾಗರಾಜ್ ಮೂವರೂ ಶೆಡ್‌ನಿಂದ ಹೊರಟು ಆರ್.ಆರ್.ನಗರದಲ್ಲಿರುವ ದರ್ಶನ್ ಮನೆಗೆ ಹೋಗಿ ‘ಆ ಹುಡುಗರು ಇಂದು ಸರೆಂಡರ್ ಆಗಿಲ್ಲ, ನಾಳೆ at any cost ಹಂಡ್ರೆಡ್ ಪರ್ಸೆಂಟ್ ಸರೆಂಡರ್ ಮಾಡಿಸುತ್ತೇವೆ’ ಎಂದು ದರ್ಶನ್ ಅವರಿಗೆ ಹೇಳಿ ನಾವು ಮೂವರೂ ನಮ್ಮ ನಮ್ಮ ಮನೆ ಕಡೆ ಹೊರಟೆವು.

ಅಂದು ಸಂಜೆ ಐದಾರು ಗಂಟೆ ಸುಮಾರಿಗೆ ಪಿಎಸ್‌ಐ ವಿನಯ್ ಅವರು ನನಗೆ ವಾಟ್ಸಪ್‌ನಲ್ಲಿ ಒಂದು ವಿಡಿಯೋ ಕಳಿಸಿದರು. ಆ ವಿಡಿಯೋದಲ್ಲಿ ಒಂದು ವೈಟ್ ಕಲರ್ ಸ್ಕಾರ್ಪಿಯೋ ಕಾರು ಡೆಡ್ ಬಾಡಿ ಬಿಸಾಕಿದ್ದ ಜಾಗದ ಹತ್ತಿರ ಹೋಗಿ ಮತ್ತೆ ವಾಪಸ್ ಬರುವುದು ಮತ್ತು ಸತ್ವ ಅಪಾರ್ಟ್‌ಮೆಂಟ್ ಹತ್ತಿರ ಹೋಗಿ ಬರುವುದು ಕಾಣುತ್ತಿತ್ತು. ಅಲ್ಲದೆ ಆ ಗಾಡಿ ವಾಪಸ್ಸು ಬರುವಾಗ ಆ ಗಾಡಿಯ ಡಿಕ್ಕಿ ಬಾಗಿಲು ತೆರೆ ದಿರುವುದು ಕಾಣುತ್ತಿತ್ತು. ವಿಡಿಯೋ ಕೊನೆಯ ಭಾಗ ದಲ್ಲಿ ಕಾರ್ತಿಕ್, ನಿಖಿಲ್ ನಾಯ್ಕ ಮತ್ತು ರಾಘವೇಂದ್ರ ಅವರು ನಡೆದುಕೊಂಡು ಬರುತ್ತಿರುವುದೂ ಕೂಡ ಕಾಣುತ್ತಿತ್ತು.

ಸ್ಕಾರ್ಪಿಯೋದಲ್ಲಿ ಡೆಡ್ ಬಾಡಿ ಸಾಗಿಸಲಾಗಿತ್ತೇ?: 

ವಿಡಿಯೋ ನೋಡಿ ಮುಗಿಸಿದ ನಂತರ ನಾನು ಪಿಎಸ್‌ಐ ವಿನಯ್ ಅವರಿಗೆ -ನ್ ಕಾಲ್ ಮಾಡಿದೆ. ಪಿಎಸ್‌ಐ ವಿನಯ್ ಅವರು ಫೋನ್ ರಿಸೀವ್ ಮಾಡುತ್ತಿದ್ದಂತೆ ‘ಡೆಡ್ ಬಾಡಿಯನ್ನು ಆ ಸ್ಕಾರ್ಪಿಯೋ ಗಾಡಿಯಲ್ಲಿ ಸಾಗಿಸಲಾಗಿತ್ತೇ?’ ಎಂದು ಕೇಳಿದರು. ಅದಕ್ಕೆ ನನಗೆ ಗೊತ್ತಿಲ್ಲ ಎಂದು ಸುಳ್ಳು ಹೇಳಿದೆ. ನಂತರ ಪಿಎಸ್‌ಐ ವಿನಯ್ ಅವರು, ‘ಆ ವಿಡಿಯೋ ಕೊನೆಯ ಭಾಗದಲ್ಲಿ ನಡೆದುಕೊಂಡು ಬರುತ್ತಿರುವ ಮೂರು ಹುಡುಗರು, ನಿಮ್ಮವರೇ?’ ಎಂದು ಕೇಳಿದರು. ನಾನು ಹೌದು ಎಂದೆ.

ನಾಳೆ ೧೦ ಗಂಟೆ ಒಳಗೆ ಸರೆಂಡರ್ ಆಗದಿದ್ದರೆ ಆ ಬೋ…ಮಕ್ಕಳಿಗೆ ಏನು ಮಾಡಬೇಕೆಂದು ಗೊತ್ತು:  ಆಗ ಪಿಎಸ್‌ಐ ವಿನಯ್ ಅವರು, ‘ನಾಳೆ ಬೆಳಿಗ್ಗೆ ೧೦ ಗಂಟೆಯವರೆಗೆ ಸಮಯ ನೀಡುತ್ತೇನೆ, ಅಷ್ಟರೊಳಗೆ ಆ ಮೂವರು ಬಂದು ಸರೆಂಡರ್ ಆಗದೇ ಇದ್ದರೆ, ಆ ಬೋ…ಮಕ್ಕಳಿಗೆ ನಾವು ಏನು ಮಾಡಬೇಕೋ ಅದನ್ನು ಮಾಡುತ್ತೇವೆ’ ಎಂದರು. ಆಗ ನನಗೆ ತುಂಬಾ ಭಯ ಶುರುವಾಯಿತು. ಈ ವಿಚಾರವನ್ನು ಯಾರೊಂದಿಗಾದರೂ ಶೇರ್ ಮಾಡಿಕೊಳ್ಳಬೇಕು ಅನ್ನಿಸಿತು. ಆದರೆ ಯಾರೊಂದಿಗೂ ಈ ವಿಷಯವನ್ನು ಶೇರ್ ಮಾಡಿಕೊಳ್ಳಲಿಲ್ಲ.

ಅದೇ ರಾತ್ರಿ ಎಂಟೊಂಬತ್ತು ಗಂಟೆ ಸುಮಾರಿಗೆ ಮತ್ತೆ ಪಿಎಸ್‌ಐ ವಿನಯ್ ಅವರಿಗೆ ವಾಟ್ಸಪ್ ಕಾಲ್ ಮಾಡಿ, ಎಲ್ಲಿದ್ದೀರಿ ಎಂದು ಕೇಳಿದೆ. ಅದಕ್ಕೆ ಅವರು,‘ಪಿರಿಯಾಪಟ್ಟಣದಲ್ಲಿ ಊಟ ಮಾಡುತ್ತಿದ್ದೇನೆ’ ಎಂದರು. ಆಗ ನಾನು ಎಷ್ಟು ಹೊತ್ತಿಗೆ ಬೆಂಗಳೂರಿಗೆ ಬರುತ್ತೀರಿ, ನಾನು ನಿಮ್ಮನ್ನು ಭೇಟಿಯಾಗಬೇಕು ಎಂದು ಕೇಳಿದೆ. ಅದಕ್ಕೆ ಅವರು, ‘ಮಧ್ಯರಾತ್ರಿ ಆಗಬಹುದು, ಟೈಮ್ ಹೇಳಲು ಆಗುವುದಿಲ್ಲ, ನಾಳೆ ಭೇಟಿಯಾಗೋಣ’ ಎಂದರು. ಆದರೆ ನಾನು ಇಲ್ಲ ಇಂದೇ ನಿಮ್ಮನ್ನು ಭೇಟಿ ಯಾಗಬೇಕು, ಎಷ್ಟೊತ್ತಾದರೂ ಚಿಂತೆ ಇಲ್ಲ ಎಂದು ಒತ್ತಾಯ ಮಾಡಿದೆ. ಆದಾದ ನಂತರ, ನನ್ನ ಸ್ನೇಹಿತ ಕಾರ್ತಿಕ್(ಚಾ.ಸಾ.೧೦೮) ಅವರಿಗೆ ಫೋನ್ ಮಾಡಿ ಮಿಡ್‌ನೈಟ್ ೧ ಗಂಟೆಗೆ ಮನೆ ಹತ್ತಿರ ಬನ್ನಿ. ನಿಮ್ಮ ಫೋನ್ ಅನ್ನು ಸೈಲೆಂಟ್ ಮಾಡದೆ ರಿಂಗ್ ಆಗುವಂತೆ ಇಟ್ಟುಕೊಳ್ಳಿ ಎಂದು ಹೇಳಿದೆ.

ಸತತವಾಗಿ ಭಯ ಕಾಡುತ್ತಿತ್ತು; ಏನು ಮಾಡಬೇಕೆಂದು ತೋಚುತ್ತಿರಲಿಲ್ಲ:  ಈ ನಡುವೆ ನನಗೆ ಸತತವಾಗಿ ಭಯ ಕಾಡುತ್ತಿತ್ತು. ಏನು ಮಾಡಬೇಕು ಎಂದು ತೋಚುತ್ತಿರಲಿಲ್ಲ. ಈ ವೇಳೆ ನನ್ನ ಮೊಬೈಲ್‌ನಲ್ಲಿ SAFARI(internet browser) ತೆರೆದು ಮೊದಲು ಮೈಸೂರಿನಿಂದ ಪಿರಿಯಾಪಟ್ಟಣ ಎಷ್ಟು ದೂರ ಎಂದು ಸರ್ಚ್ ಮಾಡಿದೆ. ನಂತರ ಕಾಮಾಕ್ಷಿಪಾಳ್ಯ ಸ್ಟೇಷನ್ -ನ್ ನಂಬರ್ ಸರ್ಚ್ ಮಾಡಿದೆ. ತದನಂತರ ಕಾಮಾಕ್ಷಿಪಾಳ್ಯ ಸ್ಟೇಷನ್ ವ್ಯಾಪ್ತಿಯ ಎಸಿಪಿ ಯಾರು ಎಂದು ತಿಳಿದುಕೊಳ್ಳಲು ಸರ್ಚ್ ಮಾಡಿದೆ. ಅದಾದ ನಂತರ how will phone determine the tower location and how will phone determine the tower location in Android phoneಎಂದು ಸರ್ಚ್ ಮಾಡಿದೆ.

ಪವನ್, ಪವಿತ್ರಾ ಗೌಡ ಅವರ ಇನ್‌ಸ್ಟಾಗ್ರಾಂ ಅಕೌಂಟ್ ಅನ್ನು ಯೂಸ್ ಮಾಡಿಕೊಂಡು ಅದರಲ್ಲಿ ತನ್ನ ಮೊಬೈಲ್ ನಂಬರ್ ಹಾಕಿ ರೇಣುಕಾಸ್ವಾಮಿಯನ್ನು ಬೆಂಗಳೂರಿಗೆ ಕರೆಸಿಕೊಂಡಿದ್ದು ಬೇಸಿಕಲೀ ನನಗೆ ಇಷ್ಟ ಆಗಿರಲಿಲ್ಲ. ಅದನ್ನು ಪೊಲೀಸರಿಗೆ ತಿಳಿಸಿಬಿಡೋಣ ಅಂದುಕೊಂಡು ಆ ರೀತಿ ಸರ್ಚ್ ಮಾಡಿದ್ದೆ. ಅದೇ ಸಮಯಕ್ಕೆ ದರ್ಶನ್ ಅವರು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಹೇಳಿದ್ದೂ ಕೂಡ ನನಗೆ ಭಯ ಕಾಡುವಂತೆ ಮಾಡಿತ್ತು. ಆದರೆ ಏನೂ ಮಾಡದೇ ಸುಮ್ಮನಾದೆ. ಅಂದು ಮಿಡ್‌ನೈಟ್ ೧ರಿಂದ ೨ ಗಂಟೆ ಸುಮಾರಿಗೆ, ನನ್ನ ಸ್ನೇಹಿತ ಕಾರ್ತಿಕ್‌ಗೆ ಫೋನ್ ಮಾಡಿ ನಮ್ಮ ಮನೆ ಹತ್ತಿರ ಬರಲು ತಿಳಿಸಿದೆ. ಅದೇ ಸಮಯಕ್ಕೆ ಪಿಎಸ್‌ಐ ವಿನಯ್ ಅವರಿಗೂ ಕಾಲ್ ಮಾಡಿ ಬೆಂಗಳೂರನ್ನು ತಲುಪಿದಿರ ಎಂದು ವಿಚಾರಿಸಿದೆ. ಆಗ ಪಿಎಸ್‌ಐ ವಿನಯ್ ಅವರು, ‘ಸಂಬಂಧಿಕರನ್ನು ನಾಗರಭಾವಿ ಹತ್ತಿರ ಡ್ರಾಪ್ ಮಾಡಿ, ನಾಯಂಡಳ್ಳಿಯ ಕಡೆ ಬರುತ್ತೇನೆ’ ಎಂದು ಹೇಳಿದರು. ಆದ್ದರಿಂದ ನಾನು ಮತ್ತು ಸ್ನೇಹಿತ ಕಾರ್ತಿಕ್ ನಾಯಂಡಹಳ್ಳಿ ಬಳಿ ಹೋಗಿ ಕಾಯುತ್ತಿದ್ದೆವು.

ನಾಳೆ ಹೇಗಾದರೂ ಮಾಡಿ ಸರೆಂಡರ್ ಮಾಡ್ಸೆ ಮಾಡಿಸ್ತೇನೆ:  ಪಿಎಸ್‌ಐ ವಿನಯ್ ಅವರು ತಮ್ಮ ವೈಟ್ ಕಲರ್ ಎಕ್ಸ್‌ಯುವಿ ಕಾರಿನಲ್ಲಿ ಅಲ್ಲಿಗೆ ಬಂದರು. ಬಂದ ತಕ್ಷಣವೇ, ‘ಹೇಳಿ ಏಕೆ ಅವರು ಇಲ್ಲಿಯವರೆಗೆ ಸರೆಂಡರ್ ಆಗಿಲ್ಲ’ ಎಂದು ಕೇಳಿದರು. ಆಗ ನಾನು ಇಲ್ಲ ಸರ್, ನಾಳೆ ಹೇಗಾದರು ಮಾಡಿ ಸರೆಂಡರ್ ಮಾಡ್ಸೆ ಮಾಡಿಸ್ತೇನೆ ಎಂದೆ. ಆಗ ಅವರು, ‘ನೀವು ಸರೆಂಡರ್ ಮಾಡಿಸದೇ ಇದ್ದರೂ ನಾವು ಅವರನ್ನು ಹಿಡಿದುಕೊಂಡು ಬಂದೇ ಬರುತ್ತೇವೆ’ ಎಂದರಲ್ಲದೆ, ಆ ಮೃತದೇಹವನ್ನು ನೋಡಿದರೆ, ಇಬ್ಬರು ಮೂವರು ಹೊಡೆದ ಹಾಗೆ ಕಾಣುವುದಿಲ್ಲ, ಹೆಚ್ಚು ಜನ ಸೇರಿ ಹೊಡೆದ ಹಾಗೆ ಕಾಣುತ್ತಿದೆ ಎಂದು ಯಾರೋ ನನಗೆ ತಿಳಿಸಿದ್ದಾರೆ’ ಎಂದು ಹೇಳಿದರು. ಅದಕ್ಕೆ ನಾನು ಗೊತ್ತಿಲ್ಲ ಸರ್ ಎಂದು ಹೇಳಿದೆ. ಅಷ್ಟರಲ್ಲಿ ನನ್ನೊಂದಿಗೆ ಬಂದಿದ್ದ ನನ್ನ ಸ್ನೇಹಿತ ಕಾರ್ತಿಕ್‌ಗೂ ಪಿಎಸ್‌ಐ ವಿನಯ್ ಅವರು ಪರಿಚಯ ಇದ್ದ ಕಾರಣ, ಅವರೂ ಕೂಡ ವಾಹನದಿಂದ ಇಳಿದು ಬಂದು ಪಿಎಸ್‌ಐ ವಿನಯ್ ಅವರನ್ನು ಮಾತನಾಡಿಸಿದರು. ನಂತರ ಪಿಎಸ್‌ಐ ವಿನಯ್ ಅವರಿಗೆ ನಮಸ್ಕಾರ ಹೇಳಿ ನಾನು ಮತ್ತು ನನ್ನ ಸ್ನೇಹಿತ ಕಾರ್ತಿಕ್ ನಮ್ಮ ಮನೆಯ ಕಡೆಗೆ ಹೊರಟೆವು. ದಾರಿ ಮಧ್ಯೆ ನನ್ನ ಸ್ನೇಹಿತ ಕಾರ್ತಿಕ್, ‘ಏನಾಗಿದೆ ಸರ್, ಇಷ್ಟೊಂದು ಚಿಂತೆಯಲ್ಲಿ ಇದ್ದೀರಿ’ ಎಂದು ಕೇಳಿದ. ಅದಕ್ಕೆ ನಾನು ಎರಡು ದಿನ ಬಿಟ್ಟು ಬಿಡಿ, ನಂತರ ನಾನೇ ತಿಳಿಸುತ್ತೇನೆ ಎಂದೆ. ಮಾರನೇ ದಿನ ಬೆಳಿಗ್ಗೆ ೯ ಗಂಟೆ ಸುಮಾರಿಗೆ ನಾನು ಮತ್ತು ನನ್ನ ಸ್ನೇಹಿತ ಕಾರ್ತಿಕ್ ಆರ್.ಆರ್.ನಗರದ ಗ್ಲೋಬಲ್ ಕಾಲೇಜ್ ಹತ್ತಿರ ಹೋದೆವು. ಅಲ್ಲಿಗೆ ದೀಪಕ್, ನಿಖಿಲ್ ನಾಯ್ಕ, ಕಾರ್ತಿಕ್, ರಾಘವೇಂದ್ರ, ನಾಗರಾಜ್ ಬಂದಿದ್ದರು. ಆಗ ನಾವು ರಾಘವೇಂದ್ರ, ಕಾರ್ತಿಕ್ ಮತ್ತು ನಿಖಿಲ್ ನಾಯ್ಕ ಈ ಮೂವರಿಗೂ ಇಂದು ನೀವು ಸರೆಂಡರ್ ಆಗಲೇಬೇಕು ಎಂದು ಹೇಳಿದೆವು. ಅದಕ್ಕೆ ಅವರು ಒಪ್ಪಿಕೊಂಡರು.

ನಿಮ್ಮನ್ನು ಪರ್ಸನಲ್ ಆಗಿ ಭೇಟಿ ಮಾಡಬೇಕು: ಪಿಎಸ್‌ಐ ವಿನಯ್‌ಗೆ ರಿಕ್ವೆಸ್ಟ್:  ನಂತರ ನನ್ನ ಕಾರನ್ನು ಅಲ್ಲಿಯೇ ನಿಲ್ಲಿಸಿಕೊಂಡು ಪಿಎಸ್‌ಐ ವಿನಯ್‌ಗೆ -ನ್ ಮಾಡಿ ನಿಮ್ಮನ್ನು ಭೇಟಿ ಮಾಡಬೇಕು ಎಂದು ರಿಕ್ವೆಸ್ಟ್ ಮಾಡಿದೆ. ಅದಕ್ಕೆ ಅವರು, ‘ನಾನು ಇನ್ನೂ ಮನೆಯಲ್ಲೇ ಇದ್ದೇನೆ, ಸ್ಟೇಷನ್‌ಗೆ ಹೋಗಿಲ್ಲ’ ಎಂದರು. ಆಗ ನಾನು ಇಲ್ಲ ಸರ್ ನಾನು ನಿಮ್ಮೊಂದಿಗೆ ಪರ್ಸನಲ್ ಆಗಿ ಮಾತನಾಡಬೇಕು, ನಿಮ್ಮ ಮನೆಗೆ ಬರುತ್ತೇನೆ ಎಂದು ಹೇಳಿದೆ. ಆಗ ಪಿಎಸ್‌ಐ ವಿನಯ್ ಅವರು ತಮ್ಮ ಮನೆಯು Tata
Promount Apartment ಹತ್ತಿರ ಇದೆ ಎಂದು ತಿಳಿಸಿರುತ್ತಾರೆ.

ಪಿಎಸ್‌ಐ ವಿನಯ್‌ಗೆ ಎಲ್ಲ ವಿಚಾರ ತಿಳಿಸಿಬಿಡುವ ನಿರ್ಧಾರ:  ನಂತರ ನಾನು, ಪಿಎಸ್‌ಐ ವಿನಯ್ ಅವರ ಮನೆಗೆ ಹೋಗಿ, ಎಲ್ಲ ವಿಚಾರ ತಿಳಿಸಿಬಿಡೋಣ ಅಂದುಕೊಂಡು,  ದೀಪಕ್ ಅವರ ಬೈಕ್ ಪಡೆದುಕೊಂಡೆ (ಆ ಗಾಡಿ ದೀಪಕ್ ಅವರದ್ದಾ ಅಥವಾ ೧೫ನೇ ಆರೋಪಿ ಕಾರ್ತಿಕ್ ನದ ಎಂದು ನನಗೆ ಗೊಂದಲ ಇದೆ). ನಾನು ಹೊರಡುವ ಸಮಯಕ್ಕೆ ಸರಿಯಾಗಿ ಲಕ್ಷ್ಮಣ್ ಅವರು ಸಿಕ್ಕಿ, ಎಲ್ಲಿ ಯಾವ ಕಡೆ ಹೋಗುತ್ತಿದ್ದೀರಿ ಎಂದು ಕೇಳಿದರು. ನಾನು ಸ್ವಲ್ಪ ಕೆಲಸ ಇದೆ, ಇಲ್ಲೇ ಇರಿ ಬರುತ್ತೇನೆ ಎಂದೆ. ಆಗ ಲಕ್ಷ್ಮಣ್, ‘ನಾನು ಇಲ್ಲಿ, ಇವರೊಂದಿಗೆ ಇರುವುದಿಲ್ಲ, ನಿಮ್ಮೊಂದಿಗೆ ಬರುತ್ತೇನೆ’ ಎಂದು ಹೇಳಿ ನನ್ನ ಬೈಕನ್ನು ಹತ್ತಿಕೊಂಡರು. ಅವರನ್ನೂ ಕರೆದುಕೊಂಡು ಪಿಎಸ್‌ಐ ವಿನಯ್ ಅವರ ಮನೆಯ ಹತ್ತಿರ ಹೋಗಿ, ಬೈಕ್ ನಿಲ್ಲಿಸಿದೆ.

 

 

Tags:
error: Content is protected !!