೧೪ ವರ್ಷಗಳಿಂದ ಪೊಲೀಸ್ ತನಿಖೆ ನ್ಯಾಯಾಲಯ / ಸಿಬಿಐ / ತನಿಖಾ ಸಂಸ್ಥೆಗಳಲ್ಲಿ ‘ಅಲೆದಾಟ’ನಡೆಸುತ್ತಿರುವ ಸೌಜನ್ಯಾ ಪ್ರಕರಣದಲ್ಲಿ ನಿಜಕ್ಕೂ ನ್ಯಾಯ ದೊರೆಯುವುದೇ ಎನ್ನುವ ಅನುಮಾನ ಈ ಪ್ರಕರಣದ ಹಿನ್ನೆಲೆಯನ್ನು ಗಮನಿಸಿದರೆ ಮೂಡುತ್ತದೆ.
ಪೊಲೀಸ್ ತನಿಖೆ, ಸಿಬಿಐ, ಹೈಕೋರ್ಟ್ ತನಿಖೆಗಳ ನಂತರ ಈಗ ಮತ್ತೆ ಕರ್ನಾಟಕ ಪೊಲೀಸರಿಂದ ತನಿಖೆ ನಡೆಸಲು ಸುಪ್ರೀಂ ಕೋರ್ಟ್ ಆದೇಶಿಸಿದೆ.
೧೪ ವರ್ಷಗಳ ಹಿಂದೆ ತನಿಖೆ ಆರಂಭಿಸಿದ ಸ್ಥಳೀಯ ಪೊಲೀಸರು ಸರಿಯಾಗಿ ತನಿಖೆ ನಡೆಸಿಲ್ಲ, ಸ್ಥಳೀಯ ಹಾಗೂ ರಾಜಕೀಯ ಪ್ರಭಾವಕ್ಕೆ ಒಳಗಾಗಿ ಸಾಕ್ಷ್ಯಗಳನ್ನು ನಾಶಪಡಿಸಲಾಗಿದೆ ಎನ್ನುವ ಆರೋಪಗಳು ಕೇಳಿಬರುತ್ತಿವೆ. ಹೀಗಿರುವಾಗ ಮರು ತನಿಖೆಯಿಂದ ಏನು ಪ್ರಯೋಜನ ಎನ್ನುವ ಅಭಿಪ್ರಾಯಗಳಿವೆ.
ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾದ ಎಲ್ಲ ಅಸ್ವಾಭಾವಿಕ ಸಾವಿನ ಪ್ರಕರಣಗಳ ಬಗ್ಗೆಯೂ ತನಿಖೆ ಆಗಬೇಕು ಎಂದು ಸೌಜನ್ಯಳ ತಾಯಿ ಕುಸುಮಾವತಿ ಅಗ್ರಹಿಸಿದ್ದಾರೆ. ಸಾಕ್ಷ್ಯ ಗಳು ನಾಶವಾಗಿದ್ದರೆ ಇಂತಹ ತನಿಖೆಗಳಿಂದ ಯಾವ ಫಲಿತಾಂಶವೂ ಬರುವುದಿಲ್ಲ. ವ್ಯವಸ್ಥೆ ಬದಲಾಗಬೇಕು ಅಷ್ಟೇ.
-ಮುಳ್ಳೂರು ಪ್ರಕಾಶ್, ಮೈಸೂರು




