ನಾಡ ದೇವತೆ ಚಾಮುಂಡೇಶ್ವರಿ ದೇವಿಯ ದರ್ಶನಕ್ಕೆ ಬರುವ ಭಕ್ತರಿಗೆ ವಸ್ತ್ರ ಸಂಹಿತೆ ಜಾರಿಯಾಗಬೇಕು ಹಾಗೂ ಇದರಿಂದ ಭಕ್ತರಿಗೂ ಸಮಸ್ಯೆಯಾಗಬಾರದು ಎಂದು ಸಂಸದ ಯದುವೀರ್ ಚಾಮರಾಜ ಒಡೆಯರ್ ಹೇಳಿರುವುದು ಚಿಂತನಾರ್ಹ.
ಚಾಮುಂಡೇಶ್ವರಿ ದೇವಿಯ ವಿಶೇಷ ದರ್ಶನಕ್ಕೆ ೨,೦೦೦ ರೂ. ನಿಗದಿಪಡಿಸಿರುವ ಬಗ್ಗೆ ಸಾರ್ವಜನಿಕರಿಂದ ದೂರು ಕೇಳಿ ಬಂದ ಹಿನ್ನೆಲೆಯಲ್ಲಿ ಕಡಿಮೆ ದರ ನಿಗದಿ ಮಾಡುವ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿರುವುದಾಗಿಯೂ ಹೇಳಿರುವುದು ಸ್ವಾಗತಾರ್ಹ. ತಿರುಪತಿ ಮಾದರಿಯಲ್ಲಿ ನಮ್ಮ ಚಾಮುಂಡಿ ಬೆಟ್ಟದಲ್ಲಿಯೂ ಮೊಬೈಲ್ ಫೋನ್ ಹಾಗೂ ಇತರೆ ವಿದ್ಯುನ್ಮಾನ ಸಾಧನಗಳನ್ನು ನಿಷೇಧ ಮಾಡಬೇಕು. ಇತ್ತೀಚೆಗೆ ಕೆಲವರು ಗೊತ್ತಿದ್ದೋ, ಗೊತ್ತಿಲ್ಲದೆಯೋ ದೇವಿಯ ಮೂಲ ವಿಗ್ರಹದ ವಿಡಿಯೋ ಮಾಡುತ್ತಿರುವುದರಿಂದ ಧಾರ್ಮಿಕ ಕ್ಷೇತ್ರದ ಪಾವಿ ತ್ರ್ಯತೆಗೆ ಧಕ್ಕೆ ಬರುತ್ತಿದೆ. ಆದ್ದರಿಂದ ಈ ನಿಟ್ಟಿನಲ್ಲಿ ಅತಿ ಶೀಘ್ರದಲ್ಲೇ ನಿಷೇಧದ ಬಗ್ಗೆ ಶೀಘ್ರ ನಿರ್ಧಾರ ಕೈಗೊಳ್ಳುವುದಾಗಿ ಹೇಳಿರುವುದು ಪ್ರತಿಯೊಬ್ಬರೂ ಮೆಚ್ಚುವಂತಹದ್ದು.
–ಬೆಸಗರಹಳ್ಳಿ ರವಿ ಪ್ರಸಾದ್, ಮೈಸೂರು





