Mysore
24
few clouds
Light
Dark

ತಾತನೊಂದಿಗೆ ಮರದಡಿಯಲ್ಲಿ ಕಲಿತ ಪಾಠಗಳು

• ಸಿ.ಎಂ.ಸುಗಂಧರಾಜು

ಜೀವನದಲ್ಲಿ ನಾವು ಹುಟ್ಟಿನಿಂದ ಸಾಯಿಯು ವವರೆಗೂ ಏನನ್ನಾದರೂ ಕಲಿಯುತ್ತಿರುತ್ತೇವೆ. ನಾವು ಶಾಲೆಯಲ್ಲಿ ವಿದ್ಯೆ ಕಲಿತರೆ ಬದುಕಿನ ಪಾಠ ಕಲಿಯು ವುದು ನಮ್ಮ ತಾತ ಅಜ್ಜಿಯ ಮಾತುಗಳನ್ನು ಕೇಳಿಯೇ. ಅದು ಶಾಲೆಯಲ್ಲಿ ಕಲಿಯು ವುದಕ್ಕಿಂತ ಹೆಚ್ಚು.

ಹೌದು, ನಾನು ಸರ್ಕಾರಿ ಶಾಲೆ ಸೇರಿದಾಗ ಅಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾ ಗಿತ್ತು. ಅಷ್ಟು ವಿದ್ಯಾರ್ಥಿಗಳು ಕುಳಿತು ಪಾಠ ಕೇಳಲು ಕಟ್ಟಡಗಳಿರಲಿಲ್ಲ. ಆದರೂ ನಮ್ಮೂರಿನ ಮೇಷ್ಟ್ರು ನಮ್ಮನ್ನು ಕಟ್ಟಡದೊಳಗಿಂತ ಕುರಿಸಿ ಬೋಧನೆ ಮಾಡಿದ್ದಕ್ಕಿಂತ ಶಾಲೆಯ ಆವರಣದಲ್ಲಿರುವ ಅರಳಿ ಮರ, ಆಲದ ಮರ, ಹೊಂಗೆ ಮರದ ಕೆಳಗಡೆ ಕೂರಿಸಿ ಪಾಠ ಮಾಡಿದ್ದೇ ಹೆಚ್ಚು. ಮರದಡಿ ನಾವು ಶಿಕ್ಷಣ ಕಲಿತೆವು ನಿಜ. ಆದರೆ ಬದುಕಿನ ಪಾಠವನ್ನೂ ಅದೇ ಮರದಡಿಯಲ್ಲಿಯೇ ಕಲಿತ್ತದ್ದು ಹೆಚ್ಚು. ಅದೂ ಅಜ್ಜನ ನೀತಿಪಾಠಗಳಿಂದ.

ಪ್ರತಿಯೊಂದು ಹಳ್ಳಿಯಲ್ಲಿಯೂ ಗ್ರಾಮದ ಮಧ್ಯ ಭಾಗದಲ್ಲಿ ಹಾಗೂ ಬಸ್‌ ನಿಲ್ದಾಣಗಳ ಬಳಿ ಇಂದಿಗೂ ಇರುವ ಅರಳಿ ಮರವನ್ನು ನೆಟ್ಟು ಬೆಳೆಸಿದವರು ನಮ್ಮ ಹಿರಿಯರು, ಆ ಮರಗಳಡಿ ಕುಳಿತು ಅವರು ದಿನಗಳನ್ನು ದೂಡುತ್ತಾರೆ. ಒಂದಿಷ್ಟು ಜೀವನದ ಮೌಲ್ಯಗಳ ಕುರಿತು, ಇಂದಿನ ಪೀಳಿಗೆ ಸಾಗುತ್ತಿರುವ ಹಾದಿಯ ಕುರಿತು, ಕಾಲಕಾಲಕ್ಕೆ ಏಕೆ ಮಳೆಯಾಗು ತಿಲ್ಲ, ಬಿಸಿಲು ಏಕೆ ಏರುತ್ತಿದೆ, ಕಲಿಯುಗ ಬದಲಾಗಿದೆ ಎಂಬೆಲ್ಲ ಮಾತುಗಳನ್ನು ಆಡುತ್ತಿರುತ್ತಾರೆ. ಸಮಾಜ ದಲ್ಲಿ ಹೆಚ್ಚಾಗುತ್ತಿರುವ ಅನಾಚಾರಗಳಿಂದ ದೈವ ಮುನಿಸಿಕೊಂಡು ಇಂತಹ ಅವಾಂತರಗಳಾಗುತ್ತಿವೆ ಎಂಬುದು ಅವರ ಅನಿಸಿಕೆ. ಅದು ಸತ್ಯವೋ ಸುಳ್ಳೋ ಬೇಡದ ಪ್ರಶ್ನೆ. ಆದರೆ ಹಾಗೆ ಮಾತನಾಡುವಾಗ ಸಣ್ಣವರಿದ್ದ ನಾವು ಅವರ ತೊಡೆಯಮೇಲೆ ಕುಳಿತು ಅವರ ಮಾತುಗಳನ್ನು ಕೇಳಿ ಕೇಳಿ ಸರಿ ದಾರಿಯಲ್ಲಿ ಸಾಗಬೇಕು, ಅದೇ ಜೀವನದ ಮೌಲ್ಯ ಎಂದು ಅರಿತಿದ್ದಂತೂ ನಿಜ.

ಇನ್ನು ನಾವು ಊಟ ಮಾಡದಿದ್ದಾಗ, ಅತ್ತಾಗಲೆಲ್ಲ ನಮ್ಮ ತಾತ ಅದೇ ಮರಕ್ಕೆ ಒಂದು ಉಯ್ಯಾಲೆ ಕಟ್ಟಿ ತೂಗುತ್ತಿದ್ದರು. ಆಗಲೂ ಅವರಿಂದ ಬರುತ್ತಿದ್ದ ಒಂದಿಷ್ಟು ನೀತಿ ಮಾತುಗಳು. ಇಂದಿಗೂ ಸತ್ಯವೆಸಿ ಸುತ್ತವೆ. ಬದುಕಿಗೆ ಅನಿವಾರ್ಯವಾಗಿವೆ. ನಮ್ಮ ಗ್ರಾಮದಲ್ಲಿ ಇಂದಿಗೂ ಆ ಮರಗಳಿವೆ, ನಾವು ಕಲಿತ ಪಾಠಗಳ ನೆನಪಿದೆ. ಆದರೆ ತಾತನಿಲ್ಲ. ಅವನು ಬದುಕಿಗೆ ತೋರಿದ ಮಾರ್ಗದರ್ಶನದಲ್ಲಿಯೇ ನಾನು ಸಾಗುತ್ತಿದ್ದೇನೆ ಎಂಬ ಸಮಾಧಾನವಿದೆ.

ಯಾರ ಬಳಿಯೂ ಅಂಗಲಾಚಬಾರದು ಎಂದು ತಾತ ಕಲಿಸಿದ ಸ್ವಾಭಿಮಾನದ ಬದುಕು ನಮ್ಮನ್ನು ಕೊನೆಯವರೆಗೂ ಕಾಯುತ್ತದೆ.

ಅರಳಿ ಮರದಡಿ ಭಗವಾನ್ ಬುದ್ಧರಿಗೆ ಜ್ಞಾನೋದಯವಾದಂತೆ ಅದೆಷ್ಟೋ ಗ್ರಾಮೀಣ ಭಾಗದ ಜನರಿಗೆ ಅವರ ತಾತ ಇಂತಹ ಬೋಧಿವೃಕ್ಷದ ಕೆಳಗೆ ಕಲಿಸಿದ ಪಾಠಗಳು ಕತ್ತಲಿನಿಂದ ಬೆಳಕಿನೆಡೆಗೆ ಸಾಗಲು ದಾರಿದೀಪವಾಗಿವೆ.

ಊರಿನ ಆಗುಹೋಗುಗಳು, ನ್ಯಾಯ- ಪಂಚಾಯಿತಿಗಳು ಇದೇ ಮರದಡಿ ಆಗುತ್ತಿದ್ದವು. ಆಗ ನಾವು ಪಕ್ಕದಲ್ಲೇ ಕುಳಿತು ತಪ್ಪು-ಒಪ್ಪಿನ ದೂರನ್ನು ಆಲಿಸುತ್ತಿದ್ದೆವು. ಈಗ ನ್ಯಾಯಾಲಯಗಳಿವೆ. ಆಗ ತಪ್ಪಿಗೆ ಅಲ್ಲಿಯೇ ಶಿಕ್ಷೆಯಾಗುತ್ತಿತ್ತು. ಯಾವುದು ತಪ್ಪು, ಯಾವುದು ಸರಿ ಎಂಬುದನ್ನು ನಾವು ಅಲ್ಲಿಯೇ ಕಲಿತದ್ದು ಹೆಚ್ಚು.

ಇಂದಿನ ಪೀಳಿಗೆಯ ಮಕ್ಕಳಿಗೆ ಈ ಬದುಕಿನ ಪಾಠಗಳನ್ನು ಕಲಿಸುವವರು ಯಾರು? ನಗರಗಳಲ್ಲಿ ವಾಸಿಸುವ ಅವರು ವಾಹನ ಏರಿ ಶಾಲೆಗೆ ಹೋಗು ತ್ತಾರೆಯೇ ಹೊರತು ತಾತನ ಹೆಗಲ ಮೇಲೆ ಏರಿದ್ದಾ ರೆಯೇ? ತಾತನಿಂದ ನೀತಿ ಪಾಠಗಳನ್ನು, ಕಥೆಗಳನ್ನು ಕೇಳಿದ್ದಾರೆಯೇ? ಖಂಡಿತ ಇಲ್ಲ. ರಜೆಗೆ ಒಂದೆರಡು ದಿನ ಬಂದು ಹೋಗುವ ಮಕ್ಕಳಿಗೆ ಬದುಕಿನ ಪಾಠಗಳು ಎಲ್ಲಿಂದ ಸಿಗಬೇಕು ಹೇಳಿ, ಸಮಾಜ ಇಂದುಹಾದಿತಪ್ಪುತ್ತಿದೆ. ಅತ್ಯಾಚಾರ, ಅನಾಚಾರಗಳು ಹೆಚ್ಚಾಗುತ್ತಿವೆ. ಮಾನವೀಯತೆ ಮರೆಯಾಗಿ ಅಕ್ರಮ ಗಳು ಹೆಚ್ಚಾಗುತ್ತಿವೆ. ಇದಕ್ಕೆ ಕಾರಣ ಏನು? ಮನುಷ್ಯನಲ್ಲಿ ನೀತಿ ಪಾಲನೆಯ ಕೊರತೆ ಹೆಚ್ಚಾಗಿದೆ. ಈ ಬದುಕಿನ ನೀತಿ ಪಾಠಗಳು ನಮ್ಮ ಹಿರಿಯರಿಂದಲೇ ಸಿಗಬೇಕೇ ಹೊರತು ಇನ್ಯಾವ ಶಾಲೆಗಳೂ ಕಲಿಸಲು ಸಾಧ್ಯವಿಲ್ಲ. ಆದ್ದರಿಂದ ಮಕ್ಕಳನ್ನು ಅಜ್ಜ-ಅಜ್ಜಿಯ ಬಳಿ ಹೆಚ್ಚು ಸಮಯ ಕಳೆಯಲು ಬಿಡಬೇಕು. ಆಗ ಅವರ ಬದುಕು ಉತ್ತಮವಾಗಲಿದೆ.