Mysore
30
overcast clouds

Social Media

ಗುರುವಾರ, 24 ಸೆಪ್ಟೆಂಬರ್ 2026
Light
Dark

ಕೋಟೆ ಟಿಎಪಿಸಿಎಂಎಸ್: ನಾಳೆ ಮೈತ್ರಿ ಪಕ್ಷದ 8 ಸದಸ್ಯರ ರಾಜೀನಾಮೆ ಭವಿಷ್ಯ ನಿರ್ಧಾರ

ಮಂಜು ಕೋಟೆ

ಎಚ್.ಡಿ.ಕೋಟೆ: ತಾಲ್ಲೂಕು ಟಿಎಪಿಸಿಎಂಎಸ್‌ನ ಎಂಟು ಜನ ನಿರ್ದೇಶಕರು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿ ಅಂಗೀಕಾರ ಮಾಡಲು ಮತ್ತು ವಾಪಸ್ ತೆಗೆದುಕೊಳ್ಳಲು ಶುಕ್ರವಾರ ಅಂತಿಮ ದಿನವಾಗಿರುವುದು ತೀವ್ರ ಕುತೂಹಲ ಮೂಡಿಸಿದೆ.

೧೫ ದಿನಗಳ ಹಿಂದೆ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಮತ್ತು ಮೈತ್ರಿ ಪಕ್ಷಗಳ ನಡುವೆ ನಡೆದ ಕೆಲವೊಂದು ಬೆಳವಣಿಗೆಗಳಿಂದ ಅಧಿಕಾರ ವಂಚಿತ ವಾದ ಜಾ.ದಳ ಮತ್ತು ಬಿಜೆಪಿ ಮೈತ್ರಿಯ ನಿರ್ದೇಶಕರಾದ ಮೊತ್ತ ಬಸವರಾಜಪ್ಪ, ಅರವಿಂದ್, ನೂರ್ ಮಹಮ್ಮದ್, ಶುಭ ಮಂಗಳ, ಭುಜಂಗ ನಾಯಕ, ಶಿವಮಲ್ಲಪ್ಪ, ವೈಲಿ ಮಾದಯ್ಯ ಅವರು ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿ ಸಂಘದ ಸಿಇಒ ನಿಂಗರಾಜುರವರಿಗೆ ರಾಜೀನಾಮೆ ಪತ್ರ ಸಲ್ಲಿಸಿದ್ದರು. ನಿಯಮದ ಪ್ರಕಾರ ರಾಜೀನಾಮೆ ವಾಪಸ್ ಪಡೆಯಲು ಮತ್ತು ಅಂಗೀಕಾರವಾಗಲು ೧೫ ದಿನಗಳ ಕಾಲ ಕಾಲಾವಕಾಶವಿದ್ದು, ಶುಕ್ರವಾರ ಅಂತಿಮ ದಿನವಾಗಿದೆ.

ಇಲ್ಲಿಯವರೆಗೆ ಮೈತ್ರಿ ಪಕ್ಷದ ೮ ನಿರ್ದೇಶಕರ ಪೈಕಿ ಯಾರೊಬ್ಬರೂ ನಾಮಪತ್ರ ವಾಪಸ್ ಪಡೆದಿಲ್ಲ. ಎಲ್ಲರೂ ಪ್ರವಾಸದಲ್ಲಿದ್ದು, ಯಾರೊಬ್ಬರೂ ವಾಪಸ್ ಪಡೆಯುವ ಲಕ್ಷಣಗಳು ಕಂಡು ಬರುತ್ತಿಲ್ಲ. ಆದರೂ ಶುಕ್ರವಾರ ಯಾವ ರೀತಿ ಬೆಳವಣಿಗೆಗಳು ನಡೆಯುತ್ತವೆ ಎಂಬುದರ ಮೇಲೆ ಅಧ್ಯಕ್ಷರಾದ ಹಿರೇಹಳ್ಳಿ ಸೋಮೇಶ್ ಮತ್ತು ಉಪಾಧ್ಯಕ್ಷರಾದ ಶಿವನಂಜಮ್ಮರವರ ನೂತನ ಆಡಳಿತ ಮಂಡಳಿಯ ಭವಿಷ್ಯ ನಿರ್ಧಾರವಾಗಲಿದೆ ಎಂದು ತಿಳಿದುಬಂದಿದೆ. ಮೈತ್ರಿ ಪಕ್ಷದ ಎಂಟು ಜನರು ರಾಜೀನಾಮೆ ನೀಡಿದ್ದು, ಇದರಲ್ಲಿ ಒಬ್ಬರು ರಾಜೀನಾಮೆ ಪತ್ರ ವಾಪಸ್ ಪಡೆದರೆ ಕಾಂಗ್ರೆಸ್ ಪಕ್ಷಕ್ಕೆ ಬಹುಮತ ಸಿಕ್ಕಿದಂತಾಗಿ ಅಧಿಕಾರ ನಡೆಸಬಹುದಾಗಿದೆ. ಇಲ್ಲದಿದ್ದರೆ ಆಡಳಿತ ಮಂಡಳಿ ರದ್ದಾಗಿ ಮತ್ತೆ ಚುನಾವಣೆ ನಡೆಸಬೇಕಾಗುತ್ತದೆ.

” ಅಧಿಕಾರ ಉಳಿಸಿಕೊಳ್ಳಲೇಬೇಕೆಂದು ಕಾಂಗ್ರೆಸ್ ಪಕ್ಷದವರು ಅನೇಕ ರಾಜಕೀಯ ತಂತ್ರಗಳನ್ನು ರೂಪಿಸುತ್ತಿದ್ದಾರೆ. ಅದೇ ರೀತಿ ಮೈತ್ರಿಯ ೮ ನಿರ್ದೇಶಕರು ಸಲ್ಲಿಸಿರುವ ರಾಜೀನಾಮೆ ಪತ್ರವನ್ನು ಹಿಂಪಡೆಯುವ ಲಕ್ಷಣ ಇಲ್ಲ. ಅವರೆಲ್ಲ ಒಗ್ಗಟ್ಟಿನಿಂದ ಪ್ರವಾಸದಲ್ಲಿ ತೊಡಗಿಕೊಂಡಿದ್ದಾರೆ. ಹೀಗಾಗಿ ಮುಂದಿನ ದಿನಗಳಲ್ಲಿ ಯಾವ ರೀತಿ ರಾಜಕಾರಣ ನಡೆಯಲಿದೆ ಎಂಬುದು ಜನತೆಯಲ್ಲಿ ಕುತೂಹಲ ಮೂಡಿಸಿದೆ.”

 

 

Tags:
error: Content is protected !!