Mysore
28
broken clouds
Light
Dark

ಜೈಲು ಆತಿಥ್ಯ ನೀಡುವ ಕೇಂದ್ರವೇ?

ಜೈಲು ಎಂದರೆ ಮಾಡಿದ ತಪ್ಪಿಗೆ ಶಿಕ್ಷೆ ಅನುಭವಿಸುವ ಮತ್ತು ಪಶ್ಚಾತ್ತಾಪ ಪಡುವ ಸ್ಥಳ, ಅಲ್ಲಿಂದ ಹೊರಬಂದು ವ್ಯಕ್ತಿ ಹೊಸ ಮನುಷ್ಯನಾಗಿ ಬದುಕು ಕಟ್ಟಿಕೊಳ್ಳುತ್ತಾನೆ ಎಂಬ ಭಾವನೆ ಇತ್ತು. ಆದರೆ ಈಗ ಅದು ದೂರಾಗಿದೆ.

ಚಿತ್ರದುರ್ಗದ ರೇಣುಕಾಸ್ವಾಮಿ ಎಂಬವರನ್ನು ಅಪಹರಣ ಮಾಡಿದ್ದಲ್ಲದೇ ಶೆಡ್‌ವೊಂದರಲ್ಲಿ ಕೂಡಿಹಾಕಿ ಮನಬಂದಂತೆ ಥಳಿಸಿ ಬರ್ಬರವಾಗಿ ಹತ್ಯೆ ಮಾಡಿರುವ ಪ್ರಕರಣದಲ್ಲಿ ನಟ ದರ್ಶನ್ ಮತ್ತು ಆತನ ಸಹಚರರು ಜೈಲು ಸೇರಿದ್ದಾರೆ. ಆದರೆ ಜೈಲಿನಲ್ಲಿ ದರ್ಶನ್‌ಗೆ ಉತ್ತಮ ಆತಿಥ್ಯ ನೀಡುತ್ತಿದ್ದಾರೆ ಎಂಬ ಸುದ್ದಿ ತಿಳಿದು ನಿಜಕ್ಕೂ ಆಶ್ಚರ್ಯವಾಯಿತು.

ದರ್ಶನ್ ಮತ್ತು ಆತನ ಸಹಚರರಿಗೆ ಜೈಲಿನಲ್ಲಿ ರಾಜಾತಿಥ್ಯ ನೀಡಲಾಗುತ್ತಿದ್ದು, ಸಮಯಕ್ಕೆ ಸರಿಯಾಗಿ ಮಾಂಸದೂಟ, ಮದ್ಯ, ಸಿಗರೇಟು, ಟೀ-ಕಾಫಿ ಪೂರೈಸಲಾಗುತ್ತಿದೆ.

ಇದರಲ್ಲಿ ಕೆಲ ಜೈಲು ಅಧಿಕಾರಿಗಳೂ ಶಾಮಿಲಾಗಿ ಹಣದಾಸೆಗೆ ಕರ್ತವ್ಯ ನಿಷ್ಠೆ ಮರೆತಿರುವುದು ವಿಪರ್ಯಾಸ. ದರ್ಶನ್‌ಗೆ ಸಿಗುತ್ತಿರುವ ಆತಿಥ್ಯ ನೋಡಿದ್ದಾರೆ ಅವರು ಜೈಲಿನ ಬದಲಾಗಿ ಯಾವುದೋ ರೆಸಾರ್ಟ್‌ ನಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೇನೋ ಅನಿಸುತ್ತದೆ. ಹಣದಾಸೆಗೆ ಕೆಲ ಅಧಿಕಾರಿಗಳು ಮಾಡುವ ಇಂತಹ ಕೃತ್ಯಗಳು ಪೊಲೀಸ್ ಇಲಾಖೆಗೆ ಕಳಂಕ ತರಬಹುದು. ಇಂತಹ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ ಅಗತ್ಯ.

-ರಾಜೇಶ್, ಎಚ್.ಡಿ.ಕೋಟೆ ತಾ.