Mysore
27
broken clouds

Social Media

ಶುಕ್ರವಾರ, 24 ಏಪ್ರಿಲ 2026
Light
Dark

ಸಿಇಟಿ ಕೇಂದ್ರದಲ್ಲಿ ಜನಿವಾರ ತೆಗೆಸಿದ ಸಿಬ್ಬಂದಿ ವಿರುದ್ಧ ಕ್ರಮ: ಸಚಿವ ಸುಧಾಕರ್‌

mc sudhakar
  1. ಬೆಂಗಳೂರು: ಸಿಇಟಿ ಕೇಂದ್ರದಲ್ಲಿ ಜನಿವಾರ ತೆಗೆಸಿದ ಸಿಬ್ಬಂದಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಉನ್ನತ ಶಿಕ್ಷಣ ಸಚಿವ ಎಂ.ಸಿ.ಸುಧಾಕರ್‌ ಹೇಳಿದ್ದಾರೆ.

ಈ ಬಗ್ಗೆ ಮಾತನಾಡಿರುವ ಸಚಿವ ಸುಧಾಕರ್‌ ಅವರು, ಇದುವರೆಗೆ ನನಗಾಗಲಿ ಕೆಇಎ ಅಧಿಕಾರಿಗಳ ಗಮನಕ್ಕೆ ಬಂದಿಲ್ಲ. ಒಂದು ವೇಳೆ ಆ ರೀತಿ ಆಗಿದ್ದರೆ ಅಧಿಕಾರಿ, ಸಿಬ್ಬಂದಿಗಳ ವಿರುದ್ದ ಕ್ರಮ ಕೈಗೊಳ್ಳುತ್ತೇವೆ. ಸಿಇಟಿ ಬರೆಯುವ ವಿದ್ಯಾರ್ಥಿಗಳಿಗೆ ಡ್ರೆಸ್ ಕೋಡ್ ನಿಯಮವಿದೆ. ಡ್ರೆಸ್ ಕೋಡ್ ಕುರಿತು ಅಧಿಕಾರಿಗಳು ಕ್ರಮ ತೆಗೆದುಕೊಂಡಿದ್ದಾರೆ. ಡ್ರೆಸ್ ಕೋಡ್ ಬಗ್ಗೆ ಅರಿವು ಮೂಡಿಸಲಾಗಿದೆ. ವೆಬ್‍ಸೈಟ್‍ನಲ್ಲಿ ವಸ್ತ್ರಸಂಹಿತೆ ಬಗ್ಗೆ ಮಾಹಿತಿ ಕೊಡಲಾಗಿದೆ. ಸಣ್ಣಪುಟ್ಟ ಘಟನೆ ಮೂಗುತಿ ವಿಚಾರ ಅನಿವಾರ್ಯ ಸ್ಥಿತಿಯಲ್ಲಿ ಆಗಿದೆ. ಕೃಪನಿಧಿ ಕಾಲೇಜ್ ವಿಚಾರ ಕೆಇಎ ಗಮನಕ್ಕೆ ಬಂದಿಲ್ಲ. ಆ ರೀತಿ ಆಗಿದ್ದರೆ, ಕೇಂದ್ರದ ಸಿಬ್ಬಂದಿ ಹಾಗೆ ಮಾಡಿದ್ರೆ ವರದಿ ಪಡೆದು ಕ್ರಮ ತೆಗೆದುಕೊಳ್ಳಯತ್ತೇವೆ. ಕೆಲವರಿಗೆ ಮನಸ್ಥಿತಿ ಹಾಗೆ ಇರುತ್ತದೆ. ಉದ್ದೇಶಪೂರ್ವಕವಾಗಿ ಕೆಟ್ಟ ಹೆಸರು ತರಲು ಕೆಲವರು ಸಮಾಜದಲ್ಲಿ ಮಾಡುತ್ತಾರೆ. ಅಂತಹದ್ದಕ್ಕೆ ನಾವು ಆಸ್ಪದ ಕೊಡಲ್ಲ. ಕೃಪನಿಧಿ ಸೆಂಟರ್‌ನಲ್ಲಿ ಆಗಿರೋ ಬಗ್ಗೆ ವರದಿ ಪಡೆದು ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಹೇಳಿದರು.

Tags:
error: Content is protected !!