Mysore
21
overcast clouds

Social Media

ಶುಕ್ರವಾರ, 30 ಅಕ್ಟೋಬರ್ 2026
Light
Dark

ದಸರಾ ವೆಬ್‌ಸೈಟ್ ಜಾಲಾಡಿದ ನೂರಾರು ರಾಷ್ಟ್ರಗಳು!

ಕೇಶವ ಎಂ.

ವೆಬ್‌ಸೈಟ್ ಮೇಲೆ ೬೩,೨೬, ೨೪೬ ಬಾರಿ ಕ್ಲಿಕ್ ಮಾಡಿ ದಸರಾ ಮಾಹಿತಿ ಹುಡುಕಾಟ

ಮೈಸೂರು: ದಸರಾ ಮಹೋತ್ಸವ ಅಂಗವಾಗಿ ಚಾಲನೆ ನೀಡಲಾಗಿದ್ದ ದಸರಾ ವೆಬ್‌ಸೈಟ್ ಅನ್ನು, ಭಾರತ ಮಾತ್ರವಲ್ಲದೇ ವಿಶ್ವದ ೧೦೬ ದೇಶಗಳ ಜನರು ವೀಕ್ಷಿಸುವ ಮೂಲಕ ಮೈಸೂರಿನ ಪಾರಂಪರಿಕ ಹಾಗೂ ಐತಿಹಾಸಿಕ ದಸರಾ ಮಾಹಿತಿಯನ್ನು ತಿಳಿದುಕೊಂಡಿದ್ದಾರೆ!

ಮೈಸೂರು ದಸರಾ ವೈಬ್‌ಸೈಟ್‌ಗೆ ಸೆ.೧೬ರಂದು ಅಧಿಕೃತವಾಗಿ ಚಾಲನೆ ನೀಡಲಾ ಯಿತು. ಅಲ್ಲಿಂದ ಅ.೨೨ರವರೆಗೆ ದಸರಾ ವೆಬ್ಸೈಟ್ ಮೇಲೆ ೬೩,೨೬, ೨೪೬ ಬಾರಿ ಕ್ಲಿಕ್ ಮಾಡಿ, ದಸರಾ ಮಾಹಿತಿ ಹುಡುಕಲಾಗಿದೆ. ಇದರಲ್ಲಿ ದಸರಾ ಉದ್ಘಾಟನೆಯಿಂದ ಜಂಬೂಸವಾರಿ ಮೆರವಣಿಗೆ ವೀಕ್ಷಣೆವರೆಗೆ ಶೇ.೯೦ರಷ್ಟು ಮಂದಿ ಕ್ಲಿಕ್ ಮಾಡಿದ್ದಾರೆ. ಅ.೨೦ರಂದು ೧೨,೭೯,೫೩೮ ಹಾಗೂ ವಿಜಯದಶಮಿಯಂದು ೧೨,೨೫,೪೭೧ ಮಂದಿ ವೆಬ್ ಸೈಟ್ ನೋಡಿದ್ದಾರೆ.

ತೆಲಂಗಾಣದಿಂದ ೩,೯೬,೫೪೧, ತಮಿಳುನಾಡಿನಿಂದ ೩,೦೯,೧೬೯, ಮಹಾರಾಷ್ಟ್ರದಿಂದ ೨,೮೭,೪೦೯, ದೆಹಲಿಯಿಂದ ೨,೪೭,೪೬೦ ಮಂದಿ ವೆಬ್‌ಸೈಟ್ ವೀಕ್ಷಣೆ ಮಾಡಿದ್ದು, ಕರ್ನಾಟಕದಿಂದ ೩೯,೯೮,೦೭೯ ಮಂದಿ ವೀಕ್ಷಣೆ ಮಾಡುವ ಮೂಲಕ ಶೇ.೬೩.೨ರಷ್ಟು ನಮ್ಮ ರಾಜ್ಯದವರೇ ಹೆಚ್ಚಿನ ಸಂಖ್ಯೆಯಲ್ಲಿ ವೀಕ್ಷಣೆ ಮಾಡಿದ್ದಾರೆ.

ಅಲ್ಲದೇ, ಉತ್ತರ ಪ್ರದೇಶ, ಗುಜರಾತ್, ಆಂಧ್ರಪ್ರದೇಶ, ರಾಜಸ್ಥಾನ, ಕೇರಳಂ, ಪಶ್ಚಿಮ ಬಂಗಾಳ ಸೇರಿದಂತೆ ಅನೇಕ ರಾಜ್ಯಗಳವರು ಕೂಡ ದಸರಾ ವೆಬ್‌ಸೈಟ್ ಅನ್ನು ವೀಕ್ಷಿಸಿದ್ದಾರೆ. ದಸರಾ ವೆಬ್‌ಸೈಟ್ ಅನ್ನು ಮೊಬೈಲ್ ಮೂಲಕ ೫೯,೫೯,೨೨೩, ಡೆಸ್ಕ್‌ಟಾಪ್ ಮತ್ತು ಲ್ಯಾಪ್ ಟಾಪ್‌ಗಳಿಂದ ೩,೫೦,೦೫೧ ಬಾರಿ ಕ್ಲಿಕ್ ಮಾಡಲಾಗಿದೆ. ಅಲ್ಲದೇ ಬಳಕೆದಾರರು ಆಡ್ಟು ಹೋಮ್ ಸ್ಕ್ರೀನ್ ಆಯ್ಕೆಯನ್ನು ಬಳಸಿ ಕೊಂಡು ವೈಬ್‌ಸೈಟ್ ಅನ್ನು ಅಪ್ಲಿಕೇಷನ್‌ನಂತೆ ಸ್ಥಾಪಿಸುವ ಮೂಲಕ ೧,೬೫,೮೩೮ ಮಂದಿ ನೋಡಿದ್ದಾರೆ.

ದಸರಾ ಸಂಬಂಧಿಸಿದ ಟಿಕೆಟ್‌ಗಾಗಿ ಹುಡುಕಾಟ: ದಸರಾ ಮಹೋತ್ಸವ ಅಂಗ ವಾಗಿ ಟಿಕೆಟ್ ಪಡೆಯಲು ಹಾಗೂ ಟಿಕೆಟ್ ಮಾಹಿತಿಗಾಗಿ ೬, ೮೯,೫೩೨ ಬಾರಿ ಕ್ಲಿಕ್ ಮಾಡಲಾಗಿದ್ದು,ಅದರಲ್ಲಿ ಮುಖಪುಟವನ್ನು ೫೨,೧೪,೧೧೪ ಬಾರಿ ಕ್ಲಿಕ್ ಮಾಡಲಾಗಿದೆ. ಹಬ್ಬದ ಸಂಪೂರ್ಣ ವೇಳಾಪಟ್ಟಿಗಾಗಿ ೧,೩೦, ೭೪೪ , ದಸರಾ ವೆಟ್‌ಸೈಟ್‌ನಲ್ಲಿ ಪ್ರಸಾರವಾಗುತ್ತಿದ್ದಂತೆ ನೇರಪ್ರಸಾರವನ್ನು ೯೧,೩೬೪ ಬಾರಿ ನೋಡಲಾಗಿದೆ.

ದಸರಾ ಪ್ರವಾಸ ಯೋಜನೆ, ಜಂಬೂಸವಾರಿ, ಪಂಜಿನ ಕವಾಯತು, ಚಿತ್ರಸಂಗ್ರಹ, ಸ್ಥಳದ ಮಾರ್ಗದರ್ಶನ ಮತ್ತು ಅರಮನೆಯ ದೀಪಾಲಂಕಾರಕ್ಕೆ ಸಂಬಂಧಿಸಿದಂತೆ ೬೫,೦೦೯ ಬಾರಿ ಕ್ಲಿಕ್ ಮಾಡಲಾಗಿದೆ. ಟಿಕೆಟ್ ಸೇವೆಗಳು, ನಕ್ಷೆಗಳು ಮತ್ತು ಸಾಮಾಜಿಕ ಮಾಧ್ಯಮಗಳಂತಹ ಸಂಪನ್ಮೂಲಗಳಿಗೆ ವೆಬ್‌ಸೈಟ್‌ನಿಂದ ೧,೨೯,೩೪೮ ಹೊರ ಹೋಗುವ ಕ್ಲಿಕ್‌ಗಳು ದಾಖಲಾಗಿದೆ. ಅಲ್ಲದೇ ೭,೭೧೩ ಫಾರ್ಮ್ ಆರಂಭ, ೫೮೬ ಬಾರಿ ಡೌನ್ ಲೋಡ್ ಆಗಿದೆ. ಪಾಲುದಾರರ ಅಪ್ಲಿಕೇಷನ್ಗಳು ಮತ್ತು ಮಾಧ್ಯಮಗಳಲ್ಲಿನ ಅಭಿಯಾನ ಲಿಂಕ್‌ಗಳಿಂದ ೪೪,೦೨,೬೦೫ ಕ್ಲಿಕ್ ಮಾಡಲಾಗಿದ್ದು, ಇದರಲ್ಲಿ ೧೧,೪೮,೬೮೨ ಸರ್ಚ್ ಎಂಜಿನ್ ಮೂಲಕ ಹುಡುಕಲಾಗಿದೆ.

ಗೂಗಲ್ ಸರ್ಚ್ ನಿಂದಲೇ ೧೧,೦೭,೦೪೩ ಕ್ಲಿಕ್ ಮಾಡಲಾಗಿದ್ದು, ಬುಕ್‌ಮಾರ್ಕ್ ಮಾಡಿದ ಲಿಂಕ್‌ಗಳು ಅಥವಾ ವಾಟ್ಸಾಪ್‌ನಂತಹ ಅಪ್ಲಿಕೇಷನ್‌ಗಳಲ್ಲಿ ಹಂಚಿಕೊಂಡ ಲಿಂಕ್‌ಗಳ ಮೂಲಕ ನೇರವಾಗಿ ೫,೮೬,೩೬೨ ನೋಡ ಲಾಗಿದೆ. ಚಾಟ್ ಜಿಪಿಟಿ, ಜೆಮಿನಿ, ಪರ್ಪ್ಲಸಿಟಿ, ಕೊಪೈಲಟ್ ಸೇರಿದಂತೆ ಕೃತಕ ಬುದ್ಧಿಮತ್ತೆ ಸಹಾಯಕರಿಗೆ ಸಂಬಂಧಿಸಿದಂತೆ ೬೫,೪೧೭ ಬಾರಿ ಕ್ಲಿಕ್ ಮಾಡಲಾಗಿದೆ.

ಜಂಬೂಸವಾರಿ ಮೆರವಣಿಗೆ ವೀಕ್ಷಣೆ!:  ವಿಜಯದಶಮಿ ದಿನ ಮೈಸೂರು ಪ್ರವಾಸೋದ್ಯಮ ವೆಬ್‌ಸೈಟ್ ಹಾಗೂ ಶ್ರೀ ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ವೆಬ್‌ಸೈಟ್ ಎರಡಲ್ಲೂ ಜಂಬೂಸವಾರಿ ಮೆರವಣಿಗೆ ನೇರಪ್ರಸಾರವನ್ನು ಲಭ್ಯವಾಗುವಂತೆ ಮಾಡಲಾಗಿತ್ತು. ಪ್ರವಾಸೋದ್ಯಮ ವೆಬ್‌ಸೈಟ್‌ನಲ್ಲಿ ೨೫ ಸಾವಿರ ಮಂದಿ ಹಾಗೂ ಪ್ರಾಧಿಕಾರದ ವೆಬ್‌ಸೈಟ್‌ನಲ್ಲಿ ೧೮ ಸಾವಿರ ಮಂದಿ ಜಂಬೂಸವಾರಿ ಮೆರವಣಿಗೆಯನ್ನು ನೇರ ವೀಕ್ಷಣೆ ಮಾಡಿದ್ದಾರೆ.

ಗಡಿ ದಾಟಿದ ದಸರಾ ಪ್ರಸಾರ: 

ಆಸ್ಟ್ರೇಲಿಯಾ, ಫ್ರಾನ್ಸ್, ಸೌದಿ ಅರೇಬಿಯಾ, ಕೆನಡಾ, ಐರ್ಲೆಂಡ್, ಜಪಾನ್, ಶ್ರೀಲಂಕಾ, ಕತಾರ್, ನ್ಯೂಜಿಲೆಂಡ್, ಫಿಐ, ಐಸ್‌ಲ್ಯಾಂಡ್, ಜಮೈಕಾ ಸೇರಿದಂತೆ ಅನೇಕ ದೇಶಗಳವರು ದಸರಾ ಮಹೋತ್ಸವದ ಕಾರ್ಯಕ್ರಮಗಳನ್ನು ಕುತೂಹಲದಿಂದ ವೀಕ್ಷಿಸಿದ್ದಾರೆ. ಮೈಸೂರು ದಸರಾ ಭೌಗೋಳಿಕ ಗಡಿಗಳನ್ನು ದಾಟಿ, ಜಗತ್ತಿಗೆ ಸಾಂಸ್ಕೃತಿಕ ಸಿರಿಯನ್ನು ಪಸರಿಸಿದೆ.

 

 

Tags:
error: Content is protected !!