ಪ್ರತಿವರ್ಷ ಸೆಪ್ಟೆಂಬರ್ ಐದನೇ ತಾರೀಕು ಶಿಕ್ಷಕರನ್ನು ಹೊಗಳಲು ಇರುವ ದಿನ ಎಂದು ಕರೆಯಬಹುದು. ಆ ದಿನ ದೇಶದ ಎಲ್ಲೆಡೆ ತುಂಬಾನೆ ಎನಿಸುವಷ್ಟು ಪದಪುಂಜ ಪ್ರಯೋಗಿಸಿ ಶಿಕ್ಷಕರನ್ನು ಹೊಗಳುತ್ತಾರೆ. ಗುರುಕುಲ ಪದ್ಧತಿಯ ಆಚಾರ್ಯರಿಂದ ಹಿಡಿದು ಆಧುನಿಕ ಕಾಲಘಟ್ಟದವರೆಗಿನ ಶಿಕ್ಷಕರನ್ನು ಸಮಾಜ ನೆನಪಿಸಿಕೊಳ್ಳುತ್ತದೆ. ಆದರೆ ಬದಲಾದ ಕಾಲಘಟ್ಟದಲ್ಲಿ ಶಿಕ್ಷಕರ ದೈನಂದಿನ ಕರ್ತವ್ಯದಲ್ಲಿ ಏನೇನು ಬದಲಾವಣೆಯಾಗಿದೆ ಎಂಬುದು ಜನಸಾಮಾನ್ಯರಿಗೆ ತಿಳಿಯಬೇಕು.
ಹಲವಾರು ಆನ್‌ಲೈನ್ ಕಾರ್ಯಗಳ ನಡುವೆ ತೀರ ಇತ್ತೀಚೆಗೆ ಬಂದ ಕರ್ತವ್ಯ ಮತ್ತು ನಿರಂತರ ಆಪ್‌ನಲ್ಲಿ ಶಿಕ್ಷಕರು ಮತ್ತು ಮಕ್ಕಳನ್ನು ಸೆರೆಹಿಡಿಯುವುದರಲ್ಲಿಯೇ ಬೋಧನೆಯ ಅರ್ಧ ಅವಽಯೇ ಮುಗಿದು ಹೋಗಿರುತ್ತದೆ. ಇದರ ನಡುವೆ ಶಿಕ್ಷಕರು ಕರ್ತವ್ಯ ನಿರ್ವಹಿಸುತ್ತಿರುವ ಬಗ್ಗೆ ರ‍್ಯಾಂಡಮ್ ಹಾಜರಾತಿ ತರಲಾಗುತ್ತಿದೆ ಎಂಬುದು ಕೇಳಿಬರುತ್ತಿದೆ. ಇದು ನಿಜಕ್ಕೂ ಕಳವಳಕಾರಿ ಸಂಗತಿಯಾಗಿದೆ.
ಶಿಕ್ಷಕರನ್ನು ಅನುಮಾನದಿಂದ ನೋಡದೇ ಶಾಲಾವಧಿಯಲ್ಲಿ ಇನ್ನಿತರ ಕಾರ್ಯಗಳಿಗೆ ನಿಯೋಜಸದೇ, ಆನ್‌ಲೈನ್ ಕರ್ತವ್ಯಗಳಿಂದ ಬಿಡುಗಡೆಗೊಳಿಸಿ ಬೋಧಿಸಲು ಅವಕಾಶ ಸಿಗುವಂತೆ ಮಾಡಬೇಕಾಗಿದೆ.
-ಮಲ್ಲಪ್ಪ – ಕರೇಣ್ಣನವರ, ರಾಣೆಬೆನ್ನೂರು




