Mysore
18
broken clouds

Social Media

ಮಂಗಳವಾರ, 11 ಫೆಬ್ರವರಿ 2025
Light
Dark

ಚರಂಡಿ ಕಾಮಗಾರಿ: ೪೫ ದಿನ ರಸ್ತೆ ಸಂಚಾರ ಬಂದ್

ಸಾಲೋಮನ್

ಆದಷ್ಟು ಬೇಗ ಕಾಮಗಾರಿಗಳನ್ನು ಮುಗಿಸಲು ಪ್ರಯತ್ನಿಸುತ್ತೇವೆ: ಇಇ ಸಿಂಧು

ಮೈಸೂರು: ನಗರದ ರಾಮಾನುಜ ರಸ್ತೆ ಹಾಗೂ ಎಂ.ಜಿ.ರಸ್ತೆ ಸಂಧಿಸುವ ಪಾತಾಳ ಆಂಜನೇಯ ಸ್ವಾಮಿ ದೇವಾಲಯದ ಸಮೀಪದ ವೃತ್ತದಲ್ಲಿ ಡೆಕ್‌ಗಳು ಹಾಗೂ ಆ ಮಾರ್ಗದ ಚರಂಡಿ ಕಾಮಗಾರಿ ಆರಂಭವಾಗಿ ೧೫ ದಿನಗಳಾಗಿದ್ದು, ಅಗ್ರಹಾರ ವೃತ್ತದಿಂದ ಜೆಎಸ್‌ಎಸ್ ಆಸ್ಪತ್ರೆಯ ಕಡೆ ಹೋಗುವ ಎಂ.ಜಿ. ರಸ್ತೆ ಬಂದ್ ಆಗಿದೆ. ಈ ಮಾರ್ಗದಲ್ಲಿ ಸಾರ್ವಜನಿಕರ ಸಂಚಾರವನ್ನು ಕಳೆದ ೧೫ ದಿನಗಳಿಂದ ನಿಲ್ಲಿಸಲಾಗಿದೆ.

ಇದರಿಂದ ಮುಖ್ಯವಾಗಿ ಜೆಎಸ್‌ಎಸ್ ಆಸ್ಪತ್ರೆಗೆ ಹೋಗಲು ಸಾರ್ವಜನಿಕರು ಭಾರೀ ತೊಂದರೆ ಅನುಭವಿಸುತ್ತಿzರೆ. ರಾಮಾನುಜ ರಸ್ತೆ, ಅಗ್ರಹಾರ ವೃತ್ತದಿಂದ ಹಾಗೂ ಶಂಕರ ಮಠದ ವೃತ್ತದಿಂದ ಎಂ.ಜಿ.ರಸ್ತೆ ಕಡೆಗೆ ಬರುವ ಮಾರ್ಗ ಸಂಪೂರ್ಣ ಬಂದ್ ಆಗಿರುವುದರಿಂದ ಸಾರ್ವಜನಿಕರು ಅನಿ ವಾರ್ಯ ವಾಗಿ ಬೇರೆ ಮಾರ್ಗಗಳಲ್ಲಿ ಹೋಗಬೇಕಾಗಿರು ವುದರಿಂದ ಬೇಸರ ವ್ಯಕ್ತ ಪಡಿಸಿದ್ದಾರೆ.

ಹದಿನೈದು ದಿನಗಳ ಹಿಂದೆ ಮೈಸೂರು ಮಹಾನಗರ ಪಾಲಿಕೆ ಈ ರಸ್ತೆಯಲ್ಲಿ ಚರಂಡಿ ಹಾಗೂ ಡೆಕ್ ನಿರ್ಮಾಣ ಕಾಮಗಾರಿ ಆರಂಭಿಸಿದೆ. ಈ ಹಿಂದೆ ಈ ಮಾರ್ಗದಲ್ಲಿ ಒಳಚರಂಡಿ ಪೈಪ್‌ಗಳನ್ನು ಅಳವಡಿಸಿ ರಸ್ತೆಯ ಡಾಂಬರೀಕರಣವನ್ನೂ ಮಾಡ ಲಾಗಿತ್ತು.

ಆದರೆ ಈ ಭಾಗದ ಮೂರು ಡೆಕ್‌ಗಳು ಕುಸಿದಿದ್ದು, ಚರಂಡಿ ನೀರು ಸರಾಗವಾಗಿ ಹರಿಯದೆ ಮಳೆ ಬಂದಾಗ ನೀರು ರಸ್ತೆಯಲ್ಲಿ ಹರಿಯುವುದು ಹಾಗೂ ರಸ್ತೆ ಮೇಲೆ ನಿಲ್ಲುತ್ತಿರುವುದರಿಂದ ರಸ್ತೆಯೂ ಹಾಳಾಗುತ್ತಿತ್ತು. ಅಲ್ಲದೇ ನೀರು ನಿಲ್ಲುವುದರಿಂದ ಸಾರ್ವಜನಿಕರಿಗೂ ಬಹಳ ತೊಂದರೆ ಆಗುತ್ತಿತ್ತು.

ಈ ಸಮಸ್ಯೆ ಬಗೆಹರಿಸಲು ಚರಂಡಿಗಳಲ್ಲಿ ನೀರು ಸರಾಗವಾಗಿ ಹರಿಯ ಬೇಕಿರುವುದರಿಂದ ದುರಸ್ತಿ ಕಾಮಗಾರಿ ಮಾಡಲಾಗುತ್ತಿದೆ.

ಮೂರು ಡೆಕ್‌ಗಳನ್ನು ನಿರ್ಮಾಣ ಮಾಡುವ ಮುಂಚೆ ಚರಂಡಿಗಳ ಸೈಡ್ ವಾಲ್‌ಗಳನ್ನು ಕಟ್ಟಲಾಗುತ್ತಿದೆ. ಇದರ ಕಾಮಗಾರಿ ಪೂರ್ಣವಾದ ನಂತರವೇ ರಸ್ತೆಯಲ್ಲಿ ಸಾರ್ವಜನಿಕರಿಗೆ ಓಡಾಡಲು ಅವಕಾಶ ಸಿಗಲಿದೆ. ಡೆಕ್ ಹಾಗೂ ಚರಂಡಿಗಳಿಗೆ ಕಾಂಕ್ರೀಟ್ ಹಾಕಿದ ನಂತರ ಕನಿಷ್ಠ ಒಂದು ತಿಂಗಳು ಕ್ಯೂರಿಂಗ್ ಆಗಬೇಕಿರುವುದರಿಂದ ಈ ಮಾರ್ಗ ಇನ್ನೂ ಒಂದೂವರೆ ತಿಂಗಳು ಸಾರ್ವಜನಿಕರಿಗೆ ಬಂದ್ ಆಗುವುದು ಖಚಿತವಾಗಿದೆ.

ವಿಜಯ ಬ್ಯಾಂಕ್ ವೃತ್ತ ಕಾಮಗಾರಿಗೂ ಬೇಕು ಸಮಯ: 

ಮೈಸೂರು: ಕುವೆಂಪು ನಗರದ ಅಕ್ಷಯ ಭಂಡಾರ್ ರಸ್ತೆ ಮಾರ್ಗವಾಗಿ ವಿಜಯ ಬ್ಯಾಂಕ್ ವೃತ್ತದ ಮೂಲಕ ರಾಮಕೃಷ್ಣನಗರ, ಜನತಾನಗರ, ಶಾರದಾ ದೇವಿನಗರ ಮುಂತಾದ ಬಡಾವಣೆಗಳಿಗೆ ಸಂಪರ್ಕ ಕಲ್ಪಿಸುವ ಮಾರ್ಗವೂ ಬಂದ್ ಆಗಿದೆ. ಇಲ್ಲಿ ವೃತ್ತ ಅಭಿವೃದ್ಧಿ ಮಾಡಲು ಪಾಲಿಕೆ ಮುಂದಾಗಿದ್ದು, ಈ ಹಿನ್ನೆಲೆಯಲ್ಲಿ ವೃತ್ತದ ಸುತ್ತಲೂ ಒಳಚರಂಡಿ, ನೀರಿನ ಪೈಪ್, ಕೇಬಲ್‌ಗಳನ್ನು ಅಳವಡಿಸುವುದು ಮತ್ತು ಡೆಕ್‌ಗಳ ನಿರ್ಮಾಣ ಕಾಮಗಾರಿ ಈಗ ಆರಂಭ ವಾಗಿದೆ.

ಇದರ ನಂತರ ವೃತ್ತದ ಅಭಿವೃದ್ಧಿ ಕಾಮಗಾರಿಯೂ ಆರಂಭವಾಗಲಿದೆ. ಸದ್ಯಕ್ಕೆ ಈ ಭಾಗದಲ್ಲಿ ವಿಶ್ವ ಮಾನವ ಜೋಡಿ ರಸ್ತೆಯ ಒಂದು ಭಾಗದಲ್ಲಿ ಸಂಚರಿಸಲು ಅವಕಾಶ ಕಲ್ಪಿಸಲಾಗಿದೆ. ಸಾರ್ವಜನಿಕರಿಗೆ ತೊಂದರೆ ಆಗದಂತೆ ಪರ್ಯಾಯ ಮಾರ್ಗವನ್ನು ಸೂಚಿಸಲಾಗಿದೆ.

ಆದಷ್ಟು ಬೇಗ ಕಾಮಗಾರಿ ಮುಗಿಸುತ್ತೇವೆ: 

ಮೈಸೂರು: ಈ ಪ್ರಾಜೆಕ್ಟ್‌ಗೆ ದಸರಾಗೂ ಮುಂಚೆಯೇ ಅನುಮೋದನೆ ಸಿಕ್ಕಿತ್ತು. ಆದರೆ, ದಸರಾ ಮುಗಿದ ನಂತರ ಆರಂಭಿಸಲು ತೀರ್ಮಾನಿಸಲಾಯಿತು. ಆಗ ಮಳೆ ಹೆಚ್ಚಾಗಿದ್ದರಿಂದ ಕಾಮಗಾರಿ ಆರಂಭಿಸಲು ಸಾಧ್ಯವಾಗಲಿಲ್ಲ ಎಂದು ಮೈಸೂರು ಮಹಾನಗರ ಪಾಲಿಕೆ ಇಇ ಕೆ.ಜೆ.ಸಿಂಧು ತಿಳಿಸಿದ್ದಾರೆ. ಈಗ ಮಳೆ ನಿಂತಿರುವುದರಿಂದ ಕಾಮಗಾರಿ ಕೈಗೆತ್ತಿಕೊಂಡಿದ್ದೇವೆ. ಕಾಂಕ್ರೀಟ್ ಕೆಲಸ ಆಗಿರುವುದರಿಂದ ಕನಿಷ್ಠ ಎರಡು ತಿಂಗಳುಗಳು ಆಗುತ್ತದೆ. ಈಗಾಗಲೇ ೧೫ ದಿನಗಳಿಂದ ಕೆಲಸ ನಡೆಯುತ್ತಿದೆ. ಸಾರ್ವಜನಿಕರಿಗೆ ಸಮಸ್ಯೆ ಆಗುತ್ತಿರುವುದು ನಮಗೂ ಗೊತ್ತಾಗಿದೆ, ಆದರೂ ಇದು ಅನಿವಾರ್ಯ ಆಗಿರುವುದರಿಂದ ಸಾರ್ವಜನಿಕರು ಸಹಕರಿಸಬೇಕೆಂದು ಕೋರುತ್ತೇನೆ. ಕಾಮಗಾರಿಯನ್ನು ಆದಷ್ಟು ಬೇಗ ಮುಗಿಸುತ್ತೇವೆ ಎಂದು ಅವರು ತಿಳಿಸಿದ್ದಾರೆ.

Tags: