Mysore
22
overcast clouds

Social Media

ಬುಧವಾರ, 05 ಆಗಸ್ಟ್ 2026
Light
Dark

ಎಸಿ ಕಾವ್ಯರಾಣಿ ಪ್ರಕರಣ ಭ್ರಷ್ಟ ಅಧಿಕಾರಿಗಳಿಗೆ ಎಚ್ಚರಿಕೆ ಘಂಟೆ

ಮಂಜು ಕೋಟೆ

ಕೋಟೆ: ಕಂದಾಯ ಇಲಾಖೆಯಲ್ಲಿ ಭ್ರಷ್ಟಾಚಾರದಲ್ಲಿ ತೊಡಗಿರುವ ಅಧಿಕಾರಿ, ನೌಕರರಿಗೆ ನಡುಕ 

ಎಚ್.ಡಿ.ಕೋಟೆ: ಹುಣಸೂರು ಉಪವಿಭಾಗಾಧಿಕಾರಿ ಕಾವ್ಯರಾಣಿ ಅವರು ಲೋಕಾಯುಕ್ತ ಬಲೆಗೆ ಬಿದ್ದ ಪ್ರಕರಣ ತಾಲ್ಲೂಕಿನಲ್ಲಿ ಜಮೀನಿನ ವಿಚಾರವಾಗಿ ಭ್ರಷ್ಟಾಚಾರದಲ್ಲಿ ಭಾಗಿಯಾಗಿದ್ದ ಅಧಿಕಾರಿಗಳಿಗೆ  ಎಚ್ಚರಿಕೆ ಘಂಟೆ ಯಾಗಿದೆ.

ತಾಲ್ಲೂಕಿನ ಕನಕನತಿಟ್ಟು ಗ್ರಾಮದ ಸಮೀಪದಲ್ಲಿ ವೈದ್ಯರಾದ ರೂಪಾ ಅವರ ೪ ಎಕರೆ ೨೦ ಗುಂಟೆ ಜಮೀನು ಹೊಂದಿದ್ದು, ಈ ಜಮೀನಿನ ಖಾತೆ ಬದಲಾವಣೆಗೆ ಸಂಬಂಧಿಸಿದಂತೆ ಹುಣಸೂರು ಎಸಿ ಕಾವ್ಯರಾಣಿ ಅವರು ೨೦ ಲಕ್ಷ ರೂ.ಗೆ ಬೇಡಿಕೆ ಇಟ್ಟು ೫.೫೦ ಲಕ್ಷ ರೂ.ಗಳನ್ನು ತಮ್ಮ ಆಪ್ತ ಸಹಾಯಕ ಶಿವಕುಮಾರ್ ಮೂಲಕ ಪಡೆಯುತ್ತಿದ್ದಾಗ ಲೋಕಾಯುಕ್ತರು ದಾಳಿ ಮಾಡಿ ಬಂಧಿಸಿದ್ದಾರೆ.

ತಾಲ್ಲೂಕಿನಲ್ಲಿ ಈಗಾಗಲೇ ಅನೇಕ ಭೂ ಮಾಫಿಯಾ ಭ್ರಷ್ಟಾಚಾರ ಮತ್ತು ಹಗರಣಗಳ ಸರಣಿ ನಡೆದು, ಅಧಿಕಾರಿಗಳ ಅಮಾನತ್ತು, ಲೋಕಾ ಯುಕ್ತರ ದಾಳಿ ನಡೆದಿವೆ. ಅಧಿಕಾರಿಗಳ ಕಾರ್ಯ ವೈಖರಿಗೆ ಸಾರ್ವಜನಿಕರಲ್ಲಿ, ರೈತರಲ್ಲಿ ಅಸಮಾಧಾನ ಉಂಟಾಗಿದೆ. ಇಂತಹ ಸಂದರ್ಭದಲ್ಲಿ ತಾಲ್ಲೂಕಿನ ಜಮೀನಿಗೆ ಸಂಬಂಧಿಸಿದ ಪ್ರಕರಣದ ವಿಚಾರವಾಗಿ ಹುಣಸೂರಿನ ಎಸಿ ಕಾವ್ಯರಾಣಿ ವಿರುದ್ಧ ಭ್ರಷ್ಟಾಚಾರದ ಕಾಯ್ದೆ ಅಡಿ ಪ್ರಕರಣ ದಾಖಲಾಗಿರುವುದು ಇಂತಹ ಅಧಿಕಾರಿಗಳಿಗೆ ಎಚ್ಚರಿಕೆಯಾಗಿದೆ.

ನಾಗರಹೊಳೆ, ಬಂಡೀಪುರ ಹಾಗೂ ಕಬಿನಿ ಹಿನ್ನೀರಿನ ಪ್ರದೇಶಗಳ ವ್ಯಾಪ್ತಿಯಲ್ಲಿ ಜಮೀನುಗಳ ವಿಚಾರವಾಗಿ ಭೂಮಾಫಿಯಾ ಭಾರೀ ಪ್ರಮಾಣದಲ್ಲಿ ನಡೆಯುತ್ತಿದ್ದು ದಲ್ಲಾಳಿಗಳು, ಅಧಿಕಾರಿಗಳಿಗೆ ನಿತ್ಯವೂ ಹಬ್ಬವಾದಂತಿದೆ.ಶ್ರೀಮಂತರು, ರಾಜಕಾರಣಿಗಳು, ಪ್ರಭಾವಿಗಳು ತಮ್ಮ ಪ್ರಭಾವ ಬಳಸಿಕೊಂಡು ತಮ್ಮ ಕೆಲಸಗಳನ್ನು ಮಾಡಿಸಿಕೊಳ್ಳುತ್ತಿದ್ದರು. ಕೆಲವರು ಅಧಿಕಾರಿಗಳ ನಡೆಯಿಂದ ಬೇಸತ್ತು ಲೋಕಾಯುಕ್ತರ ಮೊರೆ ಹೋಗುತ್ತಿದ್ದಾರೆ. ಇನ್ನೊಂದು ಕಡೆ ಅಮಾಯಕ ರೈತರು, ಸಾರ್ವಜನಿಕರು ತಮ್ಮ ಕೆಲಸ ಕಾರ್ಯಗಳನ್ನು ಮಾಡಿಸಿಕೊಳ್ಳಬೇಕಾದರೆ ನಿತ್ಯವೂ ಕಚೇರಿ ಮತ್ತು ಅಧಿಕಾರಿಗಳ ಬಳಿ ಅಲೆದಾಡಬೇಕಿದೆ.

” ಹುಣಸೂರು ಉಪವಿಭಾಗಾಧಿಕಾರಿ ಕಾವ್ಯರಾಣಿಯವರ ಪ್ರಕರಣದ ನಂತರವಾದರೂ ತಾಲ್ಲೂಕಿನ ಬಹುತೇಕ ಅಧಿಕಾರಿಗಳು ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಿ ತಾಲ್ಲೂಕಿನ ಅಭಿವೃದ್ಧಿಗೆ, ರೈತರ ಕೆಲಸ ಕಾರ್ಯಗಳನ್ನು ಪ್ರಾಮಾಣಿಕವಾಗಿ, ಸಮರ್ಪಕವಾಗಿ ಮಾಡಲು ಮುಂದಾಗಬೇಕಿದೆ.”

 

 

Tags:
error: Content is protected !!