Mysore
23
overcast clouds
Light
Dark

ಗಾಂಧೀಜಿ ನಂಜನಗೂಡಿಗೆ ಬಂದಿದ್ದರು!

೧೯೩೪, ಜನವರಿ ೫ರಂದು ಅಹಿಂಸಾ ಪರವಾದಿ, ಸ್ವಾತಂತ್ರ್ಯ ಹೋರಾಟಗಾರ ಮಹಾತ್ಮ ಗಾಂಧೀಜಿ ಅವರು ನಂಜನಗೂಡಿಗೆ
ಆಗಮಿಸಿದ್ದರು. ವಾಸ್ತವವಾಗಿ ಅವರು ನಂಜಗೂಡು ತಾಲ್ಲೂಕಿನ ತಗಡೂರು ಗ್ರಾಮದಲ್ಲಿ ಇ ದ ಖಾದಿ ಗ್ರಾಮೋ ದ್ಯೋಗ ಕೇಂದ್ರಕ್ಕೆ ಭೇಟಿ ನೀಡುವ ಉದ್ದೇಶದಿಂದ ಬಂದಿದ್ದರು.

ಸ್ವಾತಂತ್ರ್ಯ ಹೋರಾಟಗಾರ ತಗಡೂರು ರಾಮಚಂದ್ರರಾಯರು ದಲಿತರು, ಶೋಷಿತರ ಪರವಾಗಿ ಆ ಕಾಲದಲ್ಲೇ ಧ್ವನಿ ಎತ್ತಿದ್ದರು. ದೇವಾಲಯವೊಂದಕ್ಕೆ ದಲಿತರಿಗೆ ಪ್ರವೇಶ ನೀಡಬೇಕು ಎಂದು ಆಗ್ರಹಿಸಿ ದರು. ಅಲ್ಲದೆ, ಸ್ವತಃ ದಲಿತರೊಂದಿಗೆ ದೇವಾಲಯ ಪ್ರವೇಶಕ್ಕೆ ಮುಂದಾಗಿದ್ದರು. ಆದರೆ, ದಲಿತೇತರ ಕೆಲವರು ಅವರ ಮೇಲೆ ದಾಳಿ ನಡೆಸಿ, ದೇವಾಲಯ ಪ್ರವೇಶವನ್ನುತಡೆದಿದ್ದರು.

ಇದಲ್ಲದೆ, ಅಸ್ಪೃಶ್ಯತೆ ಅಸಹ ನೀಯವಾಗಿತ್ತು. ಹಾಗಾಗಿ ಅವರು ಗಾಂಧೀಜಿ ಅವರನ್ನು ಭೇಟಿಯಾಗಲು ಪ್ರಯತ್ನಿಸಿದರು. ಆದರೆ, ಗಾಂಧೀಜಿ ಅವರ ಆಪ್ತ ಸಹಾಯಕರು ಅದಕ್ಕೆ ಅವಕಾಶ ನೀಡಲಿಲ್ಲ ಎನ್ನಲಾಗಿದೆ. ಆದರೆ, ರಾಮಚಂದ್ರರಾಯರು ಬೇರೊಬಟರ ಪ್ರಭಾವದಿಂದ ಗಾಂಧೀಜಿ ಅವರ ಗಮನಕ್ಕೆ ದಲಿತರ ಸಮಸ್ಯೆಗಳನ್ನು ತಂ ದರು. ಹಾಗಾಗಿ ಗಾಂಧೀಜಿ ಅವರು ನಂಜನಗೂಡಿಗೆ ಬರುವುದಕ್ಕೆ ಕಾರಣವಾಗಿತ್ತು. ಅವರ ನಂಜನಗೂಡಿಗೆ ಭೇಟಿ ನೀಡಿ ದರ ಸ್ಮರಣಾರ್ಥ, ನಗರಸಭೆ ಆವರಣದಲ್ಲಿ ಗಾಂಧೀಜಿ ಅವರ ಪ್ರತಿಮೆಯನ್ನು ಸ್ಥಾಪಿಸಲಾಗಿದೆ.

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ