ಮೈಸೂರು ಜಿಲ್ಲೆಯಲ್ಲಿ ಸಾಂಸ್ಕೃತಿಕವಾಗಿ ಸಮೃದ್ದವಾದ ಪ್ರದೇಶವೆಂದರೆ ನಂಜನಗೂಡು. ಇದೊಂದು ಸಂಸ್ಕೃತಿಕ ಕಣಜ ಎಂದರೂ ತಪ್ಪಾಗಲಾರದು. ಇಲ್ಲಿ ಬಂದಷ್ಟು ಸಾಂಸ್ಕೃತಕ ಪ್ರತಿನಿಧಿಗಳು ಪ್ರಾಯಶಃ ಈ ಪ್ರಾಂತ್ಯದ ಬೇರೆಲ್ಲಿಯೂ ಬಂದಿಲ್ಲ ಎಂದರೆ ಯಾರೂ ಆಶ್ವರ್ಯಪಡಬೇಕಾಗಿಲ್ಲ. ಸುತ್ತೂರು ದೇವನೂರು ಮತ್ತು ಮಲ್ಲನ ಮೂಲೆಯಂತಹ ಧಾರ್ಮಿಕ ಕೇಂದ್ರಗಳು. ಇವುಗಳು ಈ ಮಣ್ಣಿನ ಮಕ್ಕಳಲ್ಲಿ ಧಾರ್ಮಿಕ ಜಾಗೃತಿಯನ್ನು ಉಂಟುಮಾಡಿರುವಂತೆಯೇ ಸಾಹಿತ್ಯ ಕಲೆ ಇವುಗಳನ್ನು ಪೋಷಿಸಿಕೊಂಡು ಬಂದಿವೆ.
ಕಳಲೆ ದಳವಾಯಿಗಳು ಸಾಹಿತ್ಯ ಕ್ಷೇತ್ರಕ್ಕೆ ನೀಡಿದ ಕೊಡುಗೆ ಅಪಾರವಾದದು. ಅವರ ಪ್ರೋತ್ಸಾಹದಿಂದ ಕನ್ನಡ ಮತ್ತು ಸಂಸ್ಕೃತ ಸಾಹಿತ್ಯ ಕ್ಷೇತ್ರದಲ್ಲಿ ಅಪಾರ ಪ್ರಗತಿಯಾಯಿತು. ೧೮ ನೇ ಶತಮಾನದ ಪೂರ್ವಾರ್ಧದಲ್ಲಿ ದಳವಾಯಿಗಳಾದ ವೀರರಾಜ ದೇವರಾಜ ಹಾಗೂ ಕರಾಚೂರಿ ನಂಜರಾಜ ಕನ್ನಡ ಹಾಗೂ ಸಂಸ್ಕೃತ ಸಾಹಿತ್ಯಕ್ಕೆ ಪ್ರೋತ್ಸಾಹ ನೀಡಿದರು.