Mysore
18
clear sky

Social Media

ಶುಕ್ರವಾರ, 20 ನವೆಂಬರ್ 2026
Light
Dark

ಓದುಗರ ಪತ್ರ: ರೈತರನ್ನು ಅಲೆದಾಡಿಸುವುದು ಸರಿಯಲ್ಲ

dgp murder case

ರಸಗೊಬ್ಬರ ವಿತರಣೆಯ ಹೊಸ ಆಪ್ ವ್ಯವಸ್ಥೆಯು ಸರ್ಕಾರದ ಆಡಳಿತದ ಕಾರ್ಯವೈಖರಿಯನ್ನು ಬಯಲು ಮಾಡಿದೆ. ಸ್ಮಾಟ್ ಫೋನ್ ಮತ್ತು ಇಂಟರ್ನೆಟ್ ಕೊರತೆಯಿರುವ ಶೇ. ೬೦ಕ್ಕೂ ಹೆಚ್ಚು ಗ್ರಾಮೀಣ ರೈತರು ಮೂರು ದಿನಗಳ ಗಡುವಿನಲ್ಲಿ ಬುಕಿಂಗ್ ಮಾಡಿ ಖರೀದಿಸುವುದು ಅಸಾಧ್ಯದ ಮಾತು. ಅಸಮರ್ಪಕ ವ್ಯವಸ್ಥೆಯಿಂದಾಗಿ ಬಿತ್ತನೆ ಕಾಲದ ಶೇ. ೪೦ರಷ್ಟು ರೈತರು ಸಂಕಷ್ಟಕ್ಕೆ ಸಿಲುಕುವ ಅಪಾಯವಿದೆ. ಕೃತಕ ಅಭಾವ ಮತ್ತು ಕಾಳಸಂತೆಯನ್ನು ತಡೆಯಲು ವಿಫಲವಾಗಿರುವ ಸರ್ಕಾರ ತಾಂತ್ರಿಕ ನೆಪವೊಡ್ಡಿ ರೈತರನ್ನು ಅಲೆದಾಡಿಸುತ್ತಿದೆ.ಕೇವಲ ಆಪ್ ರೂಪಿಸಿದರೆ ಸಾಲದು ಪ್ರತಿ ಗ್ರಾಮ ಪಂಚಾಯಿತಿಯಲ್ಲಿ ಸಹಾಯವಾಣಿ ಕೇಂದ್ರ ಸ್ಥಾಪಿಸಬೇಕು. ಭೂಮಿ ದಾಖಲೆ ತೊಡಕು ನಿವಾರಿಸಿ ಗಡುವನ್ನು ಏಳು ದಿನಗಳಿಗೆ ವಿಸ್ತರಿಸಬೇಕು. ತಾಂತ್ರಿಕ ದೋಷದಿಂದ ಬೆಳೆ ನಷ್ಟವಾದರೆ ಸರ್ಕಾರವೇ ನೇರ ಪರಿಹಾರ ನೀಡಬೇಕು.

-ಡಾ.ಎಚ್. ಕೆ.ವಿಜಯಕುಮಾರ್, ಬೆಂಗಳೂರು

Tags:
error: Content is protected !!