ತಮಿಳುನಾಡಿನ ಮುಖ್ಯಮಂತ್ರಿ ಜೋಸೆಫ್ ವಿಜಯ್, ತಮಗೆ ನೀಡಿದ್ದ ಭದ್ರತಾ ವ್ಯವಸ್ಥೆಯನ್ನು ಬದಿಗೆ ಸರಿಸಿ, ಜನಸಾಮಾನ್ಯರಲ್ಲಿ ಒಬ್ಬರಂತೆ ನಡೆದುಕೊಳ್ಳುತ್ತಿರುವುದು ಮಾದರಿಯ ನಡೆಯಾಗಿದೆ. ಇತ್ತೀಚೆಗೆ ಅವರು ವಿಮಾನ ನಿಲ್ದಾಣದಿಂದ ಇಳಿದು ಹೊರಗೆ ಬರುವಾಗ ಸಾಮಾನ್ಯ ಪ್ರಯಾಣಿಕರಂತೆ ಭದ್ರತಾ ಸಿಬ್ಬಂದಿಗಳಿಂದ ಭದ್ರತಾ ತಪಾಸಣೆಗೆ ಒಳಗಾದದ್ದನ್ನು ನೋಡಿ ಹೃದಯ ತುಂಬಿ ಬಂದಿತು.
ಇಂದಿನ ರಾಜಕೀಯ ವ್ಯವಸ್ಥೆಯಲ್ಲಿ ‘ಮರಿ’ ರಾಜಕಾರಣಿಗಳು ಇನ್ನಿಲ್ಲದ ಬಿಲ್ಡಪ್ ಮತ್ತು ಗೆಟಪ್ ನೀಡಿ, ತಮ್ಮನ್ನು ತಾವೇ ವೈಭವೀಕರಿಸಿಕೊಳ್ಳುವ ಪರಿ ಅಸಹ್ಯವನ್ನು ಉಂಟು ಮಾಡುತ್ತದೆ. ಮತ್ತೊಂದು ಕಡೆ, ಮಂತ್ರಿ ಮಹೋದಯರ ಭದ್ರತಾ ವ್ಯವಸ್ಥೆಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಾರ್ಷಿಕವಾಗಿ ನೂರಾರು ಕೋಟಿ ರೂಪಾಯಿಗಳನ್ನೇ ಖರ್ಚು ಮಾಡುತ್ತಿರುವಾಗ ತಮಿಳುನಾಡಿನಂತಹ ದೊಡ್ಡ ರಾಜ್ಯದ ಮುಖ್ಯಮಂತ್ರಿ ಅಬ್ಬರ ಅಥವಾ ಆಡಂಬರವಿಲ್ಲದೆ ತಾನು ಜನಸಾಮಾನ್ಯರ ಪ್ರತಿನಿಧಿ, ಎಂದು ಭಾವಿಸಿ ಸರಳತೆ ಮೆರೆಯುತ್ತಿರುವುದು ಅನುಕರಣೀಯ.
-ಕೆ.ವಿ.ವಾಸು, ಮೈಸೂರು



