Mysore
30
scattered clouds

Social Media

ಗುರುವಾರ, 08 ಅಕ್ಟೋಬರ್ 2026
Light
Dark

ಓದುಗರ ಪತ್ರ: ಗ್ರಾಹಕರಿಗೆ ಹೊರೆಯಾಗದಂತೆ ಹಾಲಿನ ದರ ಏರಿಸಿ

ರಾಜ್ಯ ಸರ್ಕಾರ ಹಾಲಿನ ದರವನ್ನು ಲೀಟರ್‌ಗೆ ೮ ರೂ. ಏರಿಕೆ ಮಾಡಲಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಹಾಲಿನ ದರವನ್ನು ಒಂದೇ ಬಾರಿಗೆ ೮ ರೂ. ಏರಿಕೆ ಮಾಡಿದರೆ ಗ್ರಾಹಕರಿಗೆ ಹೊರೆಯಾಗಲಿದೆ. ಆದ್ದರಿಂದ ಸರ್ಕಾರ ಲೀಟರ್‌ಗೆ ೪ ರೂ.ಏರಿಕೆ ಮಾಡಲಿ. ಒಂದು ವೇಳೆ ಇನ್ನೂ ಹೆಚ್ಚಿನ ಏರಿಕೆ ಮಾಡಬೇಕು ಎಂದರೆ ಈಗ ಸರ್ಕಾರ ನೀಡುತ್ತಿರುವ ಸಹಾಯ ಧನವನ್ನು ಹೆಚ್ಚಿಸಲಿ.

ಹಾಲಿನ ದರ ಏರಿಕೆಗೆ ಜನರ ವಿರೋಧ ವೇನೂ ಇಲ್ಲ. ಹೆಚ್ಚಿಸಿದ ಪೂರ್ತಿ ಹಣವನ್ನು ಹೈನುಗಾರರಿಗೆ ನೀಡಲು ಕೆಎಂಎಫ್ ಕ್ರಮ ಕೈಗೊಳ್ಳಬೇಕು.ಮೊಸರು, ಹಾಲಿನ ಪೊಟ್ಟಣಗಳ ದರದಲ್ಲಿ ೨೫೦ ಎಂ ಎಲ್ ಹಾಲಿನ ದರಕ್ಕೂ, ಅರ್ಧ ಲೀಟರ್ ಹಾಲಿನ ದರ ಹಾಗೂ ೧ ಲೀಟರ್ ಹಾಲಿನ ದರಕ್ಕೂ ಅಜ-ಗಜಾಂತರ ವ್ಯತ್ಯಾಸವಿರುತ್ತದೆ. ಎಲ್ಲಾ ಅಳತೆಯ ಪೊಟ್ಟಣಗಳಲ್ಲೂ ಸಮಾನ ದರ ವಿರುವಂತೆ ಮುಖ್ಯ ಮಂತ್ರಿಗಳು ಆದೇಶ ನೀಡಬೇಕು. ಗ್ರಾಹಕ ಪರಿಷತ್, ಗ್ರಾಹಕ ನ್ಯಾಯಾಲಯ ಇದನ್ನು ಗಮನಿಸಿ ಸೂಕ್ತ ಕ್ರಮ ವಹಿಸಬೇಕು. ಕೆಎಂಎಫ್, ತುಪ್ಪ ಬೆಣ್ಣೆಗಳ ಬೆಲೆ ಏರಿಕೆಯನ್ನು ಪದೇ ಪದೇ ಏಕ ಪಕ್ಷೀಯವಾಗಿ ಏರಿಕೆ ಮಾಡುವುದಕ್ಕೆ ಸರ್ಕಾರ ಕಡಿವಾಣ ಹಾಕಬೇಕು.

-ಮುಳ್ಳೂರು ಪ್ರಕಾಶ್, ಕನಕದಾಸನಗರ, ಮೈಸೂರು

Tags:
error: Content is protected !!