Mysore
25
overcast clouds

Social Media

ಬುಧವಾರ, 16 ಸೆಪ್ಟೆಂಬರ್ 2026
Light
Dark

ಓದುಗರ ಪತ್ರ: ಲೆಕ್ಕ ಹಾಕಿಕೊಂಡು ಮುಷ್ಕರ ನಡೆಸುವ ಬ್ಯಾಂಕ್ ಯೂನಿಯನ್‌ಗಳ ವಿರುದ್ಧ ಕ್ರಮ ಕೈಗೊಳ್ಳಲಿ

ಓದುಗರ ಪತ್ರ

ಸರ್ಕಾರಿ ಸ್ವಾಮ್ಯದ ಬ್ಯಾಂಕ್ ನೌಕರರು ಕಳೆದ ಶುಕ್ರವಾರ ತಮ್ಮ ಬಹುದಿನಗಳ ಬೇಡಿಕೆಯಾದ ವಾರಕ್ಕೆ ಐದು ದಿನಗಳ ಕಾಲ ಮಾತ್ರ ಕೆಲಸ ಸೇರಿದಂತೆ ಹಲವು ಬೇಡಿಕೆಗಳಿಗಾಗಿ ಗೌರಿ – ಗಣೇಶ ಹಬ್ಬದ ರಜೆಯನ್ನು ಮುಂದಿಟ್ಟುಕೊಂಡು, ಮುಷ್ಕರ ನಡೆಸಿದ್ದಾರೆ. ಅಂದರೆ ಕಳೆದ ನಾಲ್ಕು ದಿನಗಳಿಂದ(೨ನೇ ಶನಿವಾರ ಮತ್ತು ಭಾನುವಾರ) ಬ್ಯಾಂಕ್‌ಗಳು ಗ್ರಾಹಕರ ಸೇವೆಯಿಂದ ದೂರ ಉಳಿಯುವಂತಾಯಿತು. ಸಾಮಾನ್ಯವಾಗಿ ಹಬ್ಬದ ಹಿಂದಿನ ದಿನಗಳಲ್ಲಿ ಗ್ರಾಹಕರು ಬ್ಯಾಂಕ್ ಹೋಗಿ ಹಣ ಡ್ರಾ ಮಾಡುವುದು ಸಹಜ. ಆದರೆ ಗೌರಿ-ಗಣೇಶ ಹಬ್ಬದ ಹಿಂದಿನ ಮೂರು ದಿನಗಳ ಕಾಲಗಳ ಬ್ಯಾಂಕ್‌ಗಳು ಕಾರ್ಯನಿರ್ವಹಿಸದ ಕಾರಣ ಸಾರ್ವಜನಿಕರಿಗೆ ತೊಂದರೆಯಾಗಿದೆ.

ಈ ರೀತಿಯ ಮುಷ್ಕರಕ್ಕೆ ಕರೆ ಕೊಟ್ಟ ಯುನಿಯನ್‌ಗಳ ವಿರುದ್ಧ ಆರ್‌ಬಿಐ ಕ್ರಮ ಕೈಗೊಳ್ಳಬೇಕು. ಈ ರೀತಿ ಬ್ಯಾಂಕ್‌ಗಳು ಮುಂದಿನ ದಿನಗಳಲ್ಲಿ ನಡೆದುಕೊಂಡರೆ ಗ್ರಾಹಕರ ವಿಶ್ವಾಸವನ್ನು ಉಳಿಸಿಕೊಳ್ಳಲು ಆಗುತ್ತದಯೇ?

-ಬೂಕನಕೆರೆ ವಿಜೇಂದ್ರ, ಮೈಸೂರು

Tags:
error: Content is protected !!