Mysore
21
overcast clouds

Social Media

ಭಾನುವಾರ, 23 ಆಗಸ್ಟ್ 2026
Light
Dark

ಓದುಗರ ಪತ್ರ: ವಿಧಾನ ಮಂಡಲ ಅಧಿವೇಶನದ ಉದ್ದೇಶ ಈಡೇರುತ್ತಿದೆಯೇ?

dgp murder case

ಕಳೆದ ಒಂದು ವಾರದಿಂದ ನಡೆಯುತ್ತಿರುವ ರಾಜ್ಯ ವಿಧಾನ ಮಂಡಲದ ಮಳೆಗಾಲದ ಅಧಿವೇಶನ, ಡಿ. ಕೆ. ಶಿವಕುಮಾರ್ ಅವರಿಗೆ ಮುಖ್ಯಮಂತ್ರಿಯಾದ ನಂತರ ಮೊದಲ ಅಧಿವೇಶನ.

ಮುಂದಿನ ವಾರ ಐದು ದಿನಗಳ ಕಾಲ ಮಾತ್ರ ಅಧಿವೇಶನ ನಡೆಯಲಿದೆ. ಇಲ್ಲಿಯವರೆಗೆ ನಡೆದಿರುವ ಕಲಾಪಗಳಲ್ಲಿ ರಾಜ್ಯದ ಜ್ವಲಂತ ಸಮಸ್ಯೆಗಳಾದ, ಬರ ಪರಿಸ್ಥಿತಿ, ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಆದೇಶ, ಜನ – ಜನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ, ಸರ್ಕಾರಿ ಉದ್ಯೋಗದ ನೇಮಕಾತಿಯಲ್ಲಿ ಮಯೋಮಾನ ಮಿತಿ ಸಡಿಲಿಕೆ, ಸರ್ಕಾರದ ಗೃಹಲಕ್ಷ್ಮಿಯೋಜನೆಯ ಹಣವನ್ನೇ ನಂಬಿ ಜೀವನ ನಡೆಸುತ್ತಿರುವವರಿಗೆ ಸಕಾಲದಲ್ಲಿ ಹಣ ತಲುಪದೇ ಆಗುತ್ತಿರುವ ತೊಂದರೆ ಇಂತಹ ಹಲವಾರು ಸಮಸ್ಯೆಗಳ ಚರ್ಚೆಯೇ ನಡೆದಿಲ್ಲ. ಸಚಿವ ನಾಗೇಂದ್ರ ಅವರ ವಜಕ್ಕೆ ಆಗ್ರಹಿಸಿ ವಿರೋಧ ಪಕ್ಷಗಳು ನಡೆಸುತ್ತಿರುವ ಹೋರಾಟಕ್ಕೆ ಸರ್ಕಾರ ಡೋಂಟ್ ಕೇರ್ ಎನ್ನುವಂತೆ ವರ್ತಿಸುತ್ತಿರುವುದು ಸರ್ಕಾರದ ಹಠಮಾರಿ ಧೋರಣೆಯ ಪ್ರದರ್ಶನವಾಗಿದೆ. ಸಚಿವರ ರಾಜೀನಾಮೆಗೆ ಆಗ್ರಹಿಸಿ ಪ್ರತಿಪಕ್ಷಗಳು ಸದನದೊಳಗೆ, ಬೀದಿಗಿಳಿದು ಹೋರಾಟ ಮಾಡುತ್ತಿದ್ದರೂ ನಾಗೇಂದ್ರ ಅವರ ರಾಜೀನಾಮೆ ಪಡೆಯದಿರಲು ಕಾರಣವೇನು? ಇವರನ್ನು ರಕ್ಷಣೆ ಮಾಡುತ್ತಿರುವ ಹಿಂದಿನ ಅಜೆಂಡವೇನು ? ಹಿಂದೆ ಸಚಿವರಾಗಿದ್ದ ಈಶ್ವರಪ್ಪ ಅವರ ವಿರುದ್ಧ ಇದೇ ಕಾಂಗ್ರೆಸ್ ಪಕ್ಷ ಅವರ ರಾಜೀನಾಮೆಗೆ ಆಗ್ರಹಿಸಿ ರಾಜೀನಾಮೆ ಪಡೆಯಲಿಲ್ಲವೇ? ನೀವು ವಿರೋಧ ಪಕ್ಷದಲ್ಲಿದ್ದಾಗ ಒಂದು ನ್ಯಾಯ, ಅಧಿಕಾರದಲ್ಲಿದ್ದಾಗ ಮತ್ತೊಂದು ನ್ಯಾಯವೇ ?

– ಬೂಕನಕೆರೆ ವಿಜೇಂದ್ರ, ಮೈಸೂರು

 

Tags:
error: Content is protected !!