Mysore
22
overcast clouds

Social Media

ಬುಧವಾರ, 07 ಅಕ್ಟೋಬರ್ 2026
Light
Dark

ಓದುಗರ ಪತ್ರ: ಸಹಕಾರ ತತ್ವ ಎಲ್ಲರಿಗೂ ಕ್ಷೇಮ

ಓದುಗರ ಪತ್ರ

ಕೇಂದ್ರ ಗೃಹ ಸಚಿವ ಅಮಿತ್ ಶಾ ನೇತೃತ್ವದಲ್ಲಿ ಮಹಾಬಲಿಪುರಂನಲ್ಲಿ ನಡೆದ ದಕ್ಷಿಣ ವಲಯ ಮಂಡಳಿಯ ಸಭೆಯಲ್ಲಿ ಮುಖ್ಯಮಂತ್ರಿ ಡಿ. ಕೆ.ಶಿವಕುಮಾರ್ ಅವರು, ಕಾವೇರಿ, ಕೃಷ್ಣಾ, ತುಂಗಭದ್ರಾ, ಪೆನ್ನಾರ್ ಮತ್ತು ಪಾಲಾರ್ ನದಿಗಳು ಇಡೀ ದಕ್ಷಿಣ ಭಾರತದ ಪರ್ಯಾಯ ದ್ವೀಪದ ಜೀವನಾಡಿಗಳಾಗಿದ್ದು, ನೀರು ನಮ್ಮನ್ನು ಒಗ್ಗೂಡಿಸಬೇಕೇ ಹೊರತು ವಿಭಜಿಸಬಾರದು, ನೀರಿನ ಹಂಚಿಕೆಯ ಸಹಕಾರದಿಂದ ಸಾಗುವ ಸಮಯ ಈಗ ಒದಗಿಬಂದಿದೆ, ಇರುವ ಸಂಪನ್ಮೂಲಗಳಲ್ಲಿ ನ್ಯಾಯಯುತ ಪಾಲು ಪಡೆಯುವುದು ಅತ್ಯಗತ್ಯ ಎಂದು ಪ್ರತಿಪಾದಿಸಿರುವುದು ಮೆಚ್ಚುವಂತಹದ್ದು. ಪ್ರತಿಯೊಂದು ನದಿಪಾತ್ರದ ರಾಜ್ಯಕ್ಕೂ ತನ್ನದೇ ಆದ ನ್ಯಾಯಸಮ್ಮತ ಅಗತ್ಯಗಳಿವೆ ಎಂಬುದನ್ನು ನಾವು ಒಪ್ಪಿಕೊಳ್ಳುತ್ತೇವೆ. ನಮ್ಮ ನಿಲುವು ಸಮಾನತೆ, ಪಾರದರ್ಶಕತೆ, ಸಹಕಾರ ಎನ್ನುವ ಮೂರು ತತ್ವಗಳ ಆಧಾರದ ಮೇಲಿವೆ. ಸಹಕಾರ ಎರಡೂ ದಿಕ್ಕಿನಲ್ಲೂ ಇರಬೇಕು. ನಾವು ನೆರೆ ರಾಜ್ಯಗಳ ಹಕ್ಕುಗಳನ್ನು ಗೌರವಿಸುವಂತೆ ನಮ್ಮ ಹಕ್ಕುಗಳನ್ನೂ ನೆರೆ ರಾಜ್ಯದವರು ಗೌರವಿಸಬೇಕು, ದೇಶದ ಪ್ರಗತಿಗೆ ದಕ್ಷಿಣ ರಾಜ್ಯಗಳ ಕೊಡುಗೆ ಅಪಾರ, ದಕ್ಷಿಣ ಭಾರತಕ್ಕೆ ಸಲ್ಲಬೇಕಾದ ನ್ಯಾಯಯುತ ತೆರಿಗೆ ಪಾಲನ್ನು ನೀಡಿ ಎಂದು ಹೇಳಿ ಹಕ್ಕು ಮಂಡಿಸಿರುವುದು ಪ್ರಶಂಸನೀಯ.

-ಬೆಸಗರಹಳ್ಳಿ ರವಿಪ್ರಸಾದ್, ಮೈಸೂರು

Tags:
error: Content is protected !!