Mysore
24
overcast clouds

Social Media

ಭಾನುವಾರ, 02 ಆಗಸ್ಟ್ 2026
Light
Dark

ಓದುಗರ ಪತ್ರ: ಯಶಸ್ಸಿಗೆ ಮೂಲ ಅಡಿಪಾಯವೇ ಸಮಯ ಪಾಲನೆ!

‘ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೇ’ ಎಂಬ ಗಾದೆಯ ಮಾತು ನಿಜಕ್ಕೂ ಇಂದಿನ ಕಾಲಘಟ್ಟಕ್ಕೆ ಹೆಚ್ಚಾಗಿ ಅನ್ವಯಿಸುತ್ತದೆ. ಏಕೆಂದರೆ ಸಮಯ ಪಾಲನೆ ಎಂಬುದು ಇಂದಿನ ಮಕ್ಕಳಲ್ಲಿ ಅತೀ ವಿರಳವಾಗಿ ಕಂಡುಬರುತ್ತಿದೆ. ಸಮಯಕ್ಕೆ ಪ್ರಥಮ ಪ್ರಾಶಸ್ತ್ಯ ಕೊಟ್ಟವರು ಎಂದಿಗೂ ಸೋತ ಚರೀತ್ರೆಯೇ ಇಲ್ಲ.

ಆದರ್ಶ ನಾಯಕರು , ಸಾಧಿಸಿ ಅಮರರಾದ ಎಷ್ಟೋ ಮಂದಿ ಅಗ್ರಗಣ್ಯರು ಸಮಯವನ್ನು ತಮ್ಮ ಕೈಗನ್ನಡಿಯಾಗಿ ಮಾಡಿಕೊಂಡು ಅದನ್ನು ಪಾಲಿಸಿ ಸಾಧನೆಗೈದು ಇತಿಹಾಸದಲ್ಲಿ ತಮ್ಮ ಹೆಸರನ್ನು ಅಚ್ಚಳಿಯದಂತೆ ಮಾಡಿರುವುದನ್ನು ನಾವು ಹಲವು ಗ್ರಂಥಗಳಲ್ಲಿ ಓದುತ್ತೇವೆ.

ಅಂತಹವರ ಪೈಕಿ ನೈಜ ನಿದರ್ಶನ ಎಂದರೆ ಡಾ.ರಾಜೇಂದ್ರ ಪ್ರಸಾದ್ ರವರು ಶಿಸ್ತು, ಸಂಯಮ ಹಾಗೂ ಸಮಯ ಪಾಲನೆಗೆ ನೀಡಿದ ಪ್ರಾಶಸ್ತ್ಯಕ್ಕಾಗಿ ಭಾರತದ ಪ್ರಥಮ ರಾಷ್ಟ್ರಪತಿಗಳಾಗಿ ಜನಮಾನಸದಲ್ಲಿ ಇಂದೂ ಅಮರರಾಗಿ,ಆದರ್ಶರಾಗಿ ಉಳಿದಿದ್ದಾರೆ. ನಾವು ನಮ್ಮ ಜೀವನದ ದಿಕ್ಕನ್ನು ಉನ್ನತ ಪಥದತ್ತ ಕೊಂಡೆಯ್ಯಲು ಸಮಯ ಪಾಲನೆಯನ್ನು ಮಾಡುವುದು ಅಗತ್ಯವಲ್ಲವೇ?

ಬಾಲ್ಯದಲ್ಲಿಯೇ ಮಕ್ಕಳಿಗೆ ಸಮಯಪಾಲನೆಯ ಅರಿವು ಮಾಡಿಸುವುದು ಮುಖ್ಯ. ಪಾಲಕರು ತಮ್ಮ ಮಕ್ಕಳಿಗೆ ಸಮಯದ ಮಹತ್ವದ ಬಗ್ಗೆ ತಿಳಿಸಬೇಕು.

– ಅನಿಲ್ ರಾಜ, ಮೈಸೂರು

 

Tags:
error: Content is protected !!