Mysore
25
overcast clouds

Social Media

ಶುಕ್ರವಾರ, 26 ಜೂನ್ 2026
Light
Dark

ಮಂಡ್ಯ| ಸಿದ್ಧಗಂಗಾಶ್ರೀಗಳ ಆದರ್ಶ ಅಜರಾಮರ: ಯು.ಸಿ.ಶಿವಕುಮಾರ್‌

ಮಂಡ್ಯ: ಕೋಟ್ಯಾಂತರ ಭಕ್ತರ ಮನೆ-ಮನಗಳಲ್ಲಿ ನೆಲೆಗೊಂಡಿರುವ ಡಾ.ಶಿವಕುಮಾರಸ್ವಾಮೀಜಿಯವರ ಆದರ್ಶ ಅಜರಾಮರ ಎಂದು ಮನ್‌ಮುಲ್‌ ಅಧ್ಯಕ್ಷ ಯು.ಸಿ.ಶಿವಕುಮಾರ್‌ ಹೇಳಿದರು.

ಮಂಡ್ಯ ನಗರದ ಸ್ವರ್ಣಸಂದ್ರ ಬಡಾವಣೆಯಲ್ಲಿರುವ ಡಾ.ಶ್ರೀ ಶಿವಕುಮಾರ ಮಹಾಸ್ವಾಮೀಜಿ ಉದ್ಯಾನವನದಲ್ಲಿ ಕಾಯಕಯೋಗಿ ಫೌಂಡೇಶನ್‌ ವತಿಯಿಂದ ನಡೆದ ದಾಸೋಹ ಹುಣ್ಣಿಮೆ ಕಾರ್ಯಕ್ರಮದಲ್ಲಿ ದಾಸೋಹಕ್ಕೆ ಚಾಲನೆ ನೀಡಿ ಮಾತನಾಡಿದರು.

ಜಾತಿ ಬೇಧವಿಲ್ಲದೇ ತಮ್ಮ ಮಠದಲ್ಲಿ ಸರ್ವ ಧರ್ಮೀಯರಿಗೆ ಆಶ್ರಯ ನೀಡಿದ ಸಿದ್ದಗಂಗಾ ಮಠದ ಕೀರ್ತಿ ಪತಾಕೆ ಡಾ.ಶಿವಕುಮಾರಸ್ವಾಮಿಗಳ ಕಾರಣದಿಂದಲೇ ಇಂದು ವಿಶ್ವಮಟ್ಟದಲ್ಲಿ ರಾರಾಜಿಸುತ್ತಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಕಾಯಕಯೋಗಿ ಫೌಂಡೇಶನ್‌ ಅಧ್ಯಕ್ಷ ಶಿವಕುಮಾರ್‌, ಮದ್ದೂರು ಪುರಸಭೆ ಮಾಜಿ ಅಧ್ಯಕ್ಷ ಶಿವಾನಂದ, ಸಿದ್ಧಗಂಗಾ ಶ್ರೀ ಸೇವಾ ಸಮಿತಿ ಅಧ್ಯಕ್ಷ ಮಂಜುನಾಥ್‌ ಸೇರಿದಂತೆ ಮತ್ತಿತರರು ಭಾಗಿಯಾಗಿದ್ದರು.

 

Tags:
error: Content is protected !!