Mysore
22
light rain

Social Media

ಮಂಗಳವಾರ, 29 ಸೆಪ್ಟೆಂಬರ್ 2026
Light
Dark

ಡಿಕೆಶಿ ಸಿಎಂ ಆಗ್ತಾರೋ, ಇಲ್ವೋ : ಗಿಣಿ ಶಾಸ್ತ್ರ ಕೇಳಿದ ಮಂಡ್ಯ ಬಿಜೆಪಿ ನಾಯಕರು

ಮಂಡ್ಯ : ರಾಜ್ಯ ಕಾಂಗ್ರೆಸ್ ಪಾಳಯದಲ್ಲಿ ಸಿಎಂ ಕುರ್ಚಿ ಕದನ ಜೋರಾಗಿದ್ದು, ಡಿ.ಕೆ.ಶಿವಕುಮಾರ್ ಅವರು ಸಿಎಂ ಆಗ್ತಾರೋ, ಇಲ್ವೋ ಎಂದು ಮಂಡ್ಯದಲ್ಲಿ ಬಿಜೆಪಿ ನಾಯಕರು ಗಿಣಿ ಶಾಸ್ತ್ರ ಕೇಳಿದ್ದಾರೆ.

ಆ ಮೂಲಕ ಡಿಸಿಎಂ ಡಿಕೆ ಶಿವಕುಮಾರ್‌ ಅವರ ‘ಗಿಣಿ ಶಾಸ್ತ್ರ ಕೇಳಿ’ ಹೇಳಿಕೆಗೆ ಟಕ್ಕರ್ ನೀಡಿದ್ದಾರೆ.

ಮುಖ್ಯಮಂತ್ರಿ ವಿಚಾರಕ್ಕೆ ಬಿಜೆಪಿಯವರು ಗಿಣಿ ಶಾಸ್ತ್ರ ಕೇಳಿ ಎಂದು ಡಿ.ಕೆ.ಶಿವಕುಮಾರ್ ವಾಗ್ದಾಳಿ ನಡೆಸಿದ್ದರು. ಡಿಕೆಶಿ ಹೇಳಿಕೆಗೆ ಖಂಡನೆ ವ್ಯಕ್ತಪಡಿಸಿರುವ ಬಿಜೆಪಿ ಕಾರ್ಯಕರ್ತರು ಗಿಣಿ ಶಾಸ್ತ್ರ ಕೇಳಿ ಡಿಸಿಎಂಗೆ ತಿರುಗೇಟು ನೀಡಿದ್ದಾರೆ.

ಇದನ್ನು ಓದಿ: ಸಿದ್ದರಾಮಯ್ಯ, ಡಿಕೆಶಿ ಸಿಎಂ ಫೈಟ್‌ : ರೇಸ್‌ಗೆ ಮತ್ತೊಬ್ಬರ ಎಂಟ್ರಿ…!

ಮಂಡ್ಯದ ನಗರಸಭೆ ಎದುರು ಗಿಳಿ ಶಾಸ್ತ್ರ ಕೇಳಲಾಯಿತು. ಡಿ.ಕೆ.ಶಿವಕುಮಾರ್ ಸಿಎಂ ಆಗ್ತಾರಾ, ಇಲ್ವಾ ಎಂದು ಬಿಜೆಪಿಗರು ಶಾಸ್ತ್ರ ಕೇಳಿದರು. ಈ ವೇಳೆ ಚೊಂಬು ಇರುವ ಕಾರ್ಡ್‌ನ್ನು ಗಿಣಿ ತೆಗೆದಿದೆ. ಡಿ.ಕೆ.ಶಿವಕುಮಾರ್ ಅವರು ಸಿಎಂ ಆಗಲ್ಲ. ಅವರ ಕೈಗೆ ಚೊಂಬು ಎಂದು ಬಿಜೆಪಿ ಕಾರ್ಯಕರ್ತರು ವ್ಯಂಗ್ಯವಾಡಿದ್ದಾರೆ.

ಬಳಿಕ ಸಿದ್ದರಾಮಯ್ಯ ಸಿಎಂ ಆಗಿ ಮುಂದುವರೆದರೆ ಜನರಿಗೆ ಒಳ್ಳೆಯದಾಗುತ್ತಾ ಎಂದು ಶಾಸ್ತ್ರ ಕೇಳಿದಾಗ, ಈ ವೇಳೆ ಹೂ ಇರುವ ಕಾರ್ಡ್‌ ತೆಗೆದಿದೆ ಗಿಣಿ. ಸಿದ್ದರಾಮಯ್ಯ ಸಿಎಂ ಆಗಿದ್ರೆ ಜನರ ಕಿವಿಗೆ ಹೂ ಎಂದು ಬಿಜೆಪಿ ಕಾರ್ಯಕರ್ತರು ವಿಡಂಬನೆ ಮಾಡಿದ್ದಾರೆ.

Tags:
error: Content is protected !!