Mysore
16
clear sky

Social Media

ಮಂಗಳವಾರ, 20 ಜನವರಿ 2026
Light
Dark

ನಿಂತೇ ಹೋಯ್ತಾ ಯುವ, ‘ದುನಿಯಾ’ ಸೂರಿ ಹೊಸ ಸಿನಿಮಾ?

ಯುವ ಅಭಿನಯದ ‘ಎಕ್ಕ’ ಚಿತ್ರವು ಜುಲೈ ತಿಂಗಳಲ್ಲಿ ಬಿಡುಗಡೆಯಾಗಿ ಒಂದಿಷ್ಟು ಸದ್ದು ಮಾಡಿತಾದರೂ, ದೊಡ್ಡ ಯಶಸ್ಸನ್ನೇನೂ ಕಾಣಲಿಲ್ಲ. ಚಿತ್ರ ಗೆದ್ದಿದೆ ಎಂದು ಚಿತ್ರತಂಡದವರು ಸಂಭ್ರಮಪಟ್ಟರಾದರೂ, ಆ ಸಂಭ್ರಮ ಹೆಚ್ಚು ದಿನ ಮುಂದುವರೆಯಲಿಲ್ಲ. ಈ ಚಿತ್ರದ ನಂತರ ಯುವ ಮುಂದಿನ ಚಿತ್ರ ಯಾವುದು ಎಂಬ ಪ್ರಶ್ನೆ ಕೇಳಿಬರುತ್ತಿದೆ.

‘ಎಕ್ಕ’ ಚಿತ್ರವನ್ನು ಚಿತ್ರವನ್ನು ಅಶ್ವಿನಿ ಪುನೀತ್‌ ರಾಜಕುಮಾರ್‌ ಅವರ ಪಿಆರ್‌ಕೆ ಪ್ರೊಡಕ್ಷನ್ಸ್, ಕಾರ್ತಿಕ್‌ ಗೌಡ ಹಾಗೂ ಯೋಗಿ ಜಿ ರಾಜ್‌ ಒಡೆತನದ KRG ಸ್ಟುಡಿಯೋಸ್‍ ಹಾಗೂ ಜಯಣ್ಣ-ಭೋಗಣ್ಣ ಅವರ ಜಯಣ್ಣ ಫಿಲಂಸ್‍ ಜೊತೆಯಾಗಿ ನಿರ್ಮಿಸಿದ್ದವು. ‘ಎಕ್ಕ’ ಚಿತ್ರದ ಬಿಡುಗಡೆಗೂ ಮೊದಲೇ ಇದೇ ಸಂಸ್ಥೆಗಳಡಿ ಹೊಸದೊಂದು ಚಿತ್ರ ಘೋಷಣೆಯಾಗಿತ್ತು.

ವಿಶೇಷವೆಂದರೆ, ಈ ಚಿತ್ರದಲ್ಲೂ ಯುವ ರಾಜಕುಮಾರ್ ನಟಿಸುತ್ತಿದ್ದು, ಸೂರಿ ನಿರ್ದೇಶಿಸಬೇಕಿತ್ತು. ವಿಶೇಷವೆಂದರೆ, ಚಿತ್ರದ ಮೂಲಕ ವಿಜಯ್‍ ಅವರನ್ನು ಹೀರೋ ಮಾಡಿದ್ದ ಸೂರಿ, ಈ ಚಿತ್ರದಲ್ಲಿ ವಿಜಯ್‍ ಅವರ ಮಗಳು ರಿತನ್ಯಾ ಅವರನ್ನು ಮೊದಲ ಬಾರಿಗೆ ನಿರ್ದೇಶನ ಮಾಡಬೇಕಿತ್ತು. ಈ ಚಿತ್ರದ ಮುಹೂರ್ತ ಈ ವರ್ಷದ ಅಕ್ಷಯ ತೃತೀಯ ದಿನ ಆಗಿತ್ತು. ಆದರೆ, ಈ ಚಿತ್ರ ಇದೀಗ ನಿಂತಿರುವ ಸುದ್ದಿ ಕೇಳಿಬರುತ್ತಿದೆ.

ಇದನ್ನು ಓದಿ: ನವೆಂಬರ್.06ಕ್ಕೆ ಬರಲಿದೆ ಉಪೇಂದ್ರ, ರಮ್ಯಾ ಅಭಿನಯದ ‘ರಕ್ತ ಕಾಶ್ಮೀರ’

ಇನ್ನೂ ಹೆಸರಿಡದ ಈ ಚಿತ್ರಕ್ಕೆ ಮೇ ತಿಂಗಳ ಕೊನೆಯಲ್ಲಿ ಚಿತ್ರೀಕರಣ ಪ್ರಾರಂಭವಾಗಬೇಕಿತ್ತು. ಆದರೆ, ಅಕ್ಟೋಬರ್ ಆದರೂ ಚಿತ್ರ ಮುಂದುವರೆಯುವ ಲಕ್ಷಣಗಳು ಕಾಣುತ್ತಿಲ್ಲ. ಈ ಮಧ್ಯೆ, ಧ್ರುವ ಸರ್ಜಾ ಅಭಿನಯದಲ್ಲಿ ಸೂರಿ ಒಂದು ಚಿತ್ರ ನಿರ್ದೇಶಿಸುತ್ತಿದ್ದಾರೆ ಮತ್ತು ಆ ಚಿತ್ರ ಸದ್ಯದಲ್ಲೇ ಸೆಟ್ಟೇರಲಿದೆ ಎಂಬ ಮಾತು ಕೇಳಿಬರುತ್ತಿದೆ. ಹೀಗಿರುವಾಗ, ಸೂರಿ ಮತ್ತು ಯುವ ಕಾಂಬಿನೇಷನ್‍ನ ಚಿತ್ರ ನಿಂತು ಹೋಯಿತಾ? ಎಂಬ ಚರ್ಚೆಯಾಗುತ್ತಿದೆ.

ಮೂಲಗಳ ಪ್ರಕಾರ, ‘ಎಕ್ಕ’ ಚಿತ್ರವನ್ನು ಮುಹೂರ್ತದಿಂದ ಏಳೂವರೆ ತಿಂಗಳಲ್ಲಿ ಬಿಡುಗಡೆ ಮಾಡಲಾಗಿತ್ತು. ಅದೇ ರೀತಿ, ಹೊಸ ಚಿತ್ರವನ್ನು ಎಂಟು ತಿಂಗಳಲ್ಲಿ ಮುಗಿಸಿ ಕೊಡಬೇಕು ಎಂದು ನಿರ್ಮಾಪಕರ ಷರತ್ತಾಗಿತ್ತಂತೆ. ಆದರೆ, ಸೂರಿ ತಮಗೆ ಚಿತ್ರೀಕರಣಕ್ಕೆ ಹೆಚ್ಚು ಸಮಯ ಬೇಕು ಮತ್ತು ಎಂಟು ತಿಂಗಳಲ್ಲಿ ಸಿನಿಮಾ ಮುಗಿಸಲು ಸಾಧ್ಯವಿಲ್ಲ ಎಂದು ಹೇಳಿದ್ದರಿಂದ, ಈ ಚಿತ್ರವನ್ನು ಕೈಬಿಡಲಾಗಿದೆ ಎಂದು ಹೇಳಲಾಗುತ್ತಿದೆ. ಹಾಗೆಯೇ, ಯುವ ಕೂಡಾ ಈ ಚಿತ್ರ ಬಿಟ್ಟು ಬೇರೆ ಕಥೆಗಳನ್ನು ಕೇಳುತ್ತಿದ್ದಾರೆ ಎಂಬ ಸುದ್ದಿ ಇದೆ.

ಆದರೆ, ಚಿತ್ರ ನಿಂತಿರುವ ಕುರಿತು ಚಿತ್ರತಂಡದವರು ಯಾವುದೇ ಅಧಿಕೃತ ಘೋಷಣೆ ಮಾಡಿಲ್ಲ.

Tags:
error: Content is protected !!