Mysore
27
broken clouds

Social Media

ಶನಿವಾರ, 16 ಮೇ 2026
Light
Dark

ಯುದ್ಧದ ನಡುವೆಯೇ ಭಾರತಕ್ಕೆ ಗುಡ್‌ನ್ಯೂಸ್: 45,000 ಮೆಟ್ರಿಕ್‌ ಟನ್‌ ಎಲ್‌ಪಿಜಿ ಹೊತ್ತು ತಂದ ಹಡಗು

ಅಹಮದಾಬಾದ್:‌ 45,000 ಮೆಟ್ರಿಕ್‌ ಟನ್‌ ಎಲ್‌ಪಿಜಿ ಹೊತ್ತ ಶಿವಾಲಿಕ್‌ ಹಡಗು ಗುಜರಾತ್‌ನ ಮುಂದ್ರಾ ಬಂದರಿಗೆ ಬಂದು ತಲುಪಲಿದೆ.

ಈ ಬಗ್ಗೆ ಮಾಹತಿ ನೀಡಿದ ಬಂದರು, ಹಡಗು ಮತ್ತು ಜಲಮಾರ್ಗಗಳ ಸಚಿವಾಲು, ಸುಮಾರು 92,700 ಮೆಟ್ರಿಕ್‌ ಟನ್‌ ಎಲ್‌ಪಿಜಿ ಹೊತ್ತ ನಂದಾದೇವಿ ಮತ್ತು ಶಿವಾಲಿಕ್‌ ಎಂಬ ಎರಡು ಹಡಗುಗಳು ಹಾರ್ಮುಜ್‌ ಜಲಸಂಧಿಯನ್ನು ದಾಟಿ ಭಾರತಕ್ಕೆ ಬರುತ್ತಿವೆ.

ಶಿವಾಲಿಕ್‌ ಮಾರ್ಚ್.‌16ರಂದು ಮತ್ತು ನಂದಾದೇವಿ ಮಾರ್ಚ್.‌17ರಂದು ಆಗಮಿಸುವ ನಿರೀಕ್ಷೆಯಿದೆ ಎಂದು ತಿಳಿಸಿತ್ತು. ಈಗ ಆ ನಿರೀಕ್ಷೆಯಂತೆ ಇಂದು ಶಿವಾಲಿಕ್‌ ಹಡಗು ಭಾರತಕ್ಕೆ ಬಂದು ತಲುಪಿದೆ.

ಡಾ.ಎಸ್‌.ಜೈಶಂಕರ್‌ ಹಾಗು ಇರಾನಿನ ವಿದೇಶಾಂಗ ಸಚಿವರ ನಡುವಿನ ಚರ್ಚೆಗಳ ನಂತರ ಈ ಬೆಳವಣಿಗೆ ನಡೆದಿದೆ. ಈ ಮಾತುಕತೆ ಬಳಿಕ ಭಾರತದ ಹಡಗುಗಳಿಗೆ ಹಾರ್ಮುಜ್‌ ಮಾರ್ಗವನ್ನು ಸುರಕ್ಷಿತವಾಗಿ ದಾಟಲು ಅನುಮತಿ ದೊರೆತಿತ್ತು.

 

Tags:
error: Content is protected !!