Mysore
31
few clouds

Social Media

ಶನಿವಾರ, 14 ಫೆಬ್ರವರಿ 2026
Light
Dark

ಮೈಸೂರು | ವರ್ಷಾಂತ್ಯಕ್ಕೆ 1 ಲಕ್ಷ ಇ-ಖಾತೆ ವಿತರಿಸುವ ಗುರಿ

ಮೈಸೂರು : ವರ್ಷಾಂತ್ಯಕ್ಕೆ 1 ಲಕ್ಷ ಇ-ಖಾತೆ ವಿತರಿಸುವ ಗುರಿಯನ್ನು ಹೊಂದಲಾಗಿದೆ ಎಂದು ನಗರಪಾಲಿಕೆ ಆಯುಕ್ತ ಶೇಖ್ ತನ್ವೀರ್ ಆಸಿಫ್ ಹೇಳಿದರು.‌

ವಿಶ್ವೇಶ್ವರನಗರದ ಬಿಲ್ಡರ‍್ಸ್ ಅಸೋಸಿಯೇಷನ್ ಸಭಾಂಗಣದಲ್ಲಿ ನಗರಪಾಲಿಕೆ ವಲಯ ಕಚೇರಿ-2ರ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅರ್ಜಿದಾರರಿಗೆ ಇ-ಖಾತೆ ವಿತರಿಸಿ ಮಾತನಾಡಿದ ಅವರು,
ಪಾಲಿಕೆ ವತಿಯಿಂದ ಈಗಾಗಲೇ 52,658 ಇ-ಖಾತೆಗಳನ್ನು ವಿತರಿಸಲಾಗಿದೆ. ವರ್ಷಾಂತ್ಯಕ್ಕೆ 1 ಲಕ್ಷ ಇ-ಖಾತೆ ವಿತರಿಸುವ ಗುರಿ ಹಾಕಿಕೊಳ್ಳಲಾಗಿದೆ ಎಂದರು.

ಪ್ರತಿ ಶುಕ್ರವಾರ ಎಲ್ಲ ವಲಯ ಕಚೇರಿಗಳಲ್ಲಿ ಮಧ್ಯಾಹ್ನ 3 ರಿಂದ 5 ಗಂಟೆಯವರೆಗೆ ಜನಸ್ಪಂದನ ಕಾರ್ಯ ಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು.

ನಗರಪಾಲಿಕೆಯ ಒಂಬತ್ತು ವಲಯ ಕಚೇರಿಗಳಲ್ಲಿ ಇ-ಖಾತೆ ವಿತರಿಸಲಾಗುತ್ತಿದೆ. ಸಾರ್ವಜನಿಕರು ಅರ್ಜಿ ಸಲ್ಲಿಸುವಾಗ ಪೂರ್ಣ ದಾಖಲೆಗಳನ್ನು ಸಲ್ಲಿಸಬೇಕು. ಮಧ್ಯವರ್ತಿಯ ಮೊರೆ ಹೋಗಬಾರದು ಎಂದು ಹೇಳಿದರು.

ಉಪ ಆಯುಕ್ತ ಜಿ.ಎಸ್.ಸೋಮಶೇಖರ್, ವಲಯ ಆಯುಕ್ತ ಗಿರೀಶ್, ಪರಿಸರ ಅಭಿಯಂತರರಾದ ಮಹದೇವಮ್ಮ, ವೆಂಕಟೇಶ್, ಕಂದಾಯ ಅಽಕಾರಿ ಬೆಟ್ಟಸ್ವಾಮಯ್ಯ, ಸಹಾಯಕ ಕಂದಾಯಾಽಕಾರಿ, ಕಂದಾಯ ನಿರೀಕ್ಷಕರು, ಆರೋಗ್ಯ ನಿರೀಕ್ಷಕರು ಹಾಜರಿದ್ದರು.

Tags:
error: Content is protected !!