Mysore
23
scattered clouds

Social Media

ಸೋಮವಾರ, 16 ಮಾರ್ಚ್ 2026
Light
Dark

ಮೊದಲ ಆಷಾಢ ಶುಕ್ರವಾರದಂದು ಬೆಟ್ಟಕ್ಕೆ ಬಂದ ಭಕ್ತರೆಷ್ಟು ಗೊತ್ತಾ?: ಸಚಿವ ಎಚ್.ಸಿ.ಮಹದೇವಪ್ಪ ಹೇಳಿದ್ದಿಷ್ಟು

dussehra inauguration

ಮೈಸೂರು: ಜನರ ಆಚಾರ ವಿಚಾರಗಳಿಗೆ ಸಂವಿಧಾನದಲ್ಲಿ ಮುಕ್ತ ಅವಕಾಶ ಇದೆ ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಸಿ.ಮಹದೇವಪ್ಪ ಹೇಳಿದ್ದಾರೆ.

ಈ ಕುರಿತು ಚಾಮುಂಡಿಬೆಟ್ಟದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗ ತಾನೇ ಆಷಾಢ ಶುರುವಾಗಿದೆ. ಜನರ ಆಚಾರ ವಿಚಾರಗಳಿಗೆ ಸಂವಿಧಾನದಲ್ಲಿ ಮುಕ್ತ ಅವಕಾಶ ಇದೆ. ಶುಕ್ರವಾರ ವಾಹನಗಳ ಮೂಲಕ ಬೆಟ್ಟಕ್ಕೆ ಬಂದವರ ಸಂಖ್ಯೆ 80 ಸಾವಿರ ಜನ. ಕಾಲ್ನಡಿಗೆ ಮೂಲಕ ಬಂದವರ ಸಂಖ್ಯೆ 50 ರಿಂದ 60 ಸಾವಿರ ಜನ. ಒಟ್ಟಾರೆ 1 ಲಕ್ಷಕ್ಕೂ ಅಧಿಕ ಭಕ್ತಾದಿಗಳು ಬೆಟ್ಟಕ್ಕೆ ಬಂದ ಮಾಹಿತಿ ಲಭ್ಯವಿದೆ. ಜನ ಹೆಚ್ಚಾಗಿ ಬಂದ ಕಾರಣ ಸ್ವಲ್ಪ ಹೆಚ್ಚು ಕಡಿಮೆ ಆಗಿದೆ. ಆದ್ರೆ ಜಿಲ್ಲಾಡಳಿತ ಬಹುತೇಕ ಚನ್ನಾಗಿ ಕೆಲಸ ನಿರ್ವಹಿಸಿದ್ದಾರೆ. ಬೆಟ್ಟದ ಮೆಟ್ಟಿಲೇರಿ ಬಂದವರಿಗೆ ಅನುಕೂಲ ಇದೆ ಎಂದು ತಿಳಿದು, ಅತೀ ಉತ್ಸಾಹದಿಂದ ನಿರೀಕ್ಷೆ ಮೀರಿ ಹೆಚ್ಚು ಜನ ಬಂದಿದ್ದಾರೆ. ಈ ರೀತಿ ಜನ ಬಂದ ಕಾರಣ 3 ರೀತಿಯಲ್ಲಿ ವ್ಯವಸ್ಥೆ ಮಾಡಿದ್ದರಿಂದ ಜನದಟ್ಟಣೆ ಜಾಸ್ತಿ ಆಗಿದೆ. ಮುಂದಿನ ದಿನಗಳಲ್ಲಿ ಈ ಸಮಸ್ಯೆ ಆಗದಂತೆ ಕ್ರಮ ವಹಿಸಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದರು.

Tags:
error: Content is protected !!